ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (Bigg Boss) ಸಾಮ್ರಾಜ್ಯವಾಗಿ ಬದಲಾಗಿದೆ. ಈವರೆಗೆ ವಾರದ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದಾರೆ. ಆದರೀಗ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಮನೆಗೆ ಈಗ ಯುವರಾಣಿಯ ಆಗಮನವಾಗಿದೆ. ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ. ಸಾಮ್ರಾಜ್ಯಕ್ಕಾಗಿ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಇಡೀ ಮನೆ ಇಬ್ಭಾಗವಾಗಿದ್ದು, ಎರಡು ಬಣಗಳಾಗಿ ವಿಂಗಡಿಸಲಾಗಿದೆ.
ಒಂದು ಯುವರಾಣಿ ಮೋಕ್ಷಿತಾ ಅವರ ಬಣವಾದರೆ, ಇನ್ನೊಂದು ರಾಜ ಮಂಜಣ್ಣ ಬಣವಾಗಿದೆ. ಈ ಎರಡು ಬಣಗಳಿಗೆ ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಾರೆ. ಇದರಲ್ಲಿ ಅತಿ ಹೆಚ್ಚು ಟಾಸ್ಕ್ ಗೆದ್ದ ಬಣ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ. ಅದರಂತೆ ಇಂದು ಬಿಗ್ ಬಾಸ್ ಎರಡು ಬಣಗಳಿಗೆ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಮಂಜು ಹಾಗೂ ರಜತ್ ನಡುವೆ ದೊಡ್ಡ ಗಲಾಟೆ ನಡೆದಿದೆ. ಈ ಟಾಸ್ಕ್ನ ಹೆಸರು ಮಣ್ಣಿನ ಅಸ್ತ್ರ.
ಈ ಟಾಸ್ಕ್ ಮಧ್ಯೆ ಅಸ್ತ್ರ ಮಾಡುವುದನ್ನ ತಪ್ಪಿಸೋ ಚಾಲೆಂಜ್ ಕೂಡ ಇದೆ. ಹಾಗಾಗಿಯೇ ಮನೆ ಮಂದಿಯ ನಡುವೆ ಕಿತ್ತಾಟಗಳು ಜೋರಾಗಿ ಆಗಿವೆ. ಅದಕ್ಕೇನೆ ರಾಜ ಉಗ್ರಂ ಮಂಜು ಹಾಗೂ ರಾಣಿಯ ಸೇನಾಧಿಪತಿ ರಜತ್ ಕಿಶನ್ ನಡುವೆ ಮಾತಿನ ಚಕಮಕಿ ಆಗಿದೆ. ಯಾರಾದ್ರು ತಳ್ಳಿದ್ರೆ ಮಾತ್ರ ನಾನೂ ಕೂಡಾ ಸರಿಯಾಗೇ ತಳ್ಳುತ್ತೇನೆ. ಬುರುಡೆ ಒಡೆದು ಹೋಗಬೇಕು. ಆ ರೀತಿ ತಳ್ಳುತ್ತೇನೆ ನೋಡಿ ಎಂದು ರಜತ್ ಹೇಳಿದ್ದಾರೆ ಎಂದಿದ್ದಾರೆ.
ಇದರಿಂದ ಕೆರಳಿದ ಮಂಜು ಇದೇನು ಮಾತು, ರೌಡಿಯಂತೆ ಮಾತನಾಡುತ್ತಿದ್ದೀರಿ. ಬೆದರಿಕೆ ಇಡೋದಲ್ಲ, ಆಟಕ್ಕಿಳಿಯಬೇಕಿತ್ತು ತೋರಿಸ್ತಾ ಇದ್ದೆ ಅಂತಾ ಮಂಜು ಹೇಳಿದ್ದಾರೆ. 54-55 ದಿನ ಭಯ ಪಟ್ಟು ಇದ್ದಿದ್ದಲ್ಲ. ನಿನ್ ಆಟ ನೀನ್ ತೋರ್ಸು, ನನ್ ಆಟ ನಾನ್ ತೋರಿಸ್ತೀನಿ ಎಂದು ಮಂಜು ಗುಟುರು ಹಾಕಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತಾ ಸವಾಲ್ ಹಾಕಿದ್ದಾರೆ.
BBK 11: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಏಳು ಮಂದಿ ನಾಮಿನೇಟ್: ಯಾರೆಲ್ಲ ನೋಡಿ