-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸಾಲಿನ ವಿಂಟರ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ (Winter Wedding Jacket Lehenga Fashion), ನಾನಾ ಬಗೆಯ ಡಿಸೈನರ್ ಎಥ್ನಿಕ್ ಜಾಕೆಟ್ ಲೆಹೆಂಗಾಗಳು ಎಂಟ್ರಿ ನೀಡಿವೆ. ನೋಡಲು ಮನಮೋಹಕವಾಗಿ ಕಾಣಿಸುವ ಸೆಮಿ ಎಥ್ನಿಕ್ ಜಾಕೆಟ್ ಲೆಹೆಂಗಾ, ನೆಟ್ ಕೋಟ್ ಜಾಕೆಟ್ ಲೆಹೆಂಗಾ, ಜರ್ದೋಸಿ ವಿನ್ಯಾಸದ ಜಾಕೆಟ್ ಲೆಹೆಂಗಾ, ಶೀರ್ ಜಾಕೆಟ್ ಲೆಹೆಂಗಾ, ಎಂಬ್ರಾಯ್ಡರಿಯ ಶ್ರಗ್ಸ್ ಶೈಲಿಯ ಜಾಕೆಟ್ ಲೆಹೆಂಗಾ, ಕಲಾಂಕಾರಿ ಕುಂದನ್ ಡಿಸೈನ್‌ನ ಜಾಕೆಟ್ ಲೆಹೆಂಗಾ ಈ ಬಾರಿಯ ವೆಡ್ಡಿಂಗ್ ಸೀಸನ್ ಎಥ್ನಿಕ್ ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸಿವೆ.
ರಾಯಲ್ ಲುಕ್ ನೀಡುವ ಜಾಕೆಟ್ ಲೆಹೆಂಗಾ
ಬಾಲಿವುಡ್-ಫ್ಯಾಷನ್‌ವುಡ್ ಎಂಬ ಭೇದವಿಲ್ಲದೇ ಮಾನಿನಿಯರನ್ನು ಈ ಜಾಕೆಟ್ ಲೆಹೆಂಗಾಗಳು ಆಕರ್ಷಿಸತೊಡಗಿವೆ. ರಾಯಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಇನ್ನು, ವೆಡ್ಡಿಂಗ್ ಎಥ್ನಿಕ್‌ವೇರ್‌ಗಳ ಲಿಸ್ಟ್‌ನಲ್ಲಿ ರೂಪುಗೊಂಡಿರುವ ಈ ಜಾಕೆಟ್ ಲೆಹೆಂಗಾಗಳು, ಗಾಢ ವರ್ಣದ ಕಾಂಟ್ರಾಸ್ಟ್ ಹಾಗೂ ಮಿಕ್ಸ್ ಅಂಡ್ ಮ್ಯಾಚ್ ಕಾಂಬಿನೇಷನ್‌ನ ಟಿಪಿಕಲ್ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಮಾಡೆಲ್ ಶ್ರೀಯಾ.
ಯುವತಿಯರ ಮನಸೆಳೆದ ಜಾಕೆಟ್ ಲೆಹೆಂಗಾ
ವೆಡ್ಡಿಂಗ್‌ವೇರ್, ಬ್ರೈಡಲ್‌ವೇರ್, ಫೆಸ್ಟಿವ್‌ವೇರ್ ಕೆಟಗರಿಯಲ್ಲಿ ಜಾಕೆಟ್ ಲೆಹೆಂಗಾಗಳು ಸದ್ಯ ಹಂಗಾಮ ಎಬ್ಬಿಸಿವೆ. ಕೇವಲ ಸೆಲೆಬ್ರೆಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಯುವತಿಯರ ಮನ ಸೆಳೆಯುವಲ್ಲೂ ಇವು ಯಶಸ್ವಿಯಾಗಿವೆ ಎನ್ನುವ ಡಿಸೈನರ್ ರೀನಾ ಪ್ರಕಾರ, ಲೆಹೆಂಗಾ ಡಿಸೈನ್ ಹಳತಾದರೂ ಜಾಕೆಟ್ ಲೇಯರ್ ಲುಕ್ ಈ ಸೀಸನ್‌ನಲ್ಲಿ ಆಕರ್ಷಿಸಲು ಪ್ರಮುಖ ಕಾರಣವಂತೆ.
ಮದುವೆಗಳಲ್ಲಿ ಗ್ರ್ಯಾಂಡ್ ಲುಕ್
ಮದುವೆಗಳಲ್ಲಿ ಇವು ಗ್ರ್ಯಾಂಡ್ ಲುಕ್ ನೀಡುತ್ತವೆ. ಇನ್ನು ಇತರೆ ಕಾರ್ಯಕ್ರಮಗಳಿಗೂ ಇವನ್ನು ಧರಿಸಬಹುದು. ಕೊಂಚ ದಪ್ಪಗಿರುವವರು ಕಡಿಮೆ ತೂಕದ ಜಾರ್ಜೆಟ್ ಸಿಲ್ಕ್, ಕ್ರೇಪ್ ಸಿಲ್ಕ್, ಎಂಬ್ರಾಯ್ಡರಿಯ ಕಲಾಂಕಾರಿ ವಿನ್ಯಾಸದ್ದನ್ನು, ಲೈಟ್‌ವೇಟ್ ಇರುವ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ ಧರಿಸಬಹುದು. ಸ್ಲಿಮ್ ಆಗಿರುವವರಿಗೆ ಎಲ್ಲವೂ ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ದುಪ್ಪಟಾ ರಹಿತ ಜಾಕೆಟ್ ಲೆಹೆಂಗಾ
ಜಾಕೆಟ್ ಲೆಹೆಂಗಾಗಳ ಜತೆಗೆ ಡಿಸೈನರ್ ದುಪ್ಪಟಾ ದೊರೆತಿರುತ್ತವೆಯಾದರೂ, ಇಂದು ಯುವತಿಯರು ದುಪಟ್ಟಾ ಧರಿಸುವುದಿಲ್ಲ. ಧರಿಸಿದರೇ ಹೊದ್ದು ಕೊಂಡಂತೆ ಕಾಣಿಸುತ್ತದೆ. ಲೇಯರ್ ಲುಕ್ ಅತಿಯಾಗುತ್ತದೆ ಎಂಬ ಕಾರಣದಿಂದಾಗಿ ಧರಿಸುವುದಿಲ್ಲ, ಜಾಕೆಟ್ ಧರಿಸದಿದ್ದಾಗ ಬ್ಲೌಸ್ ಹಾಗೂ ಲೆಹೆಂಗಾ ಮೇಲೆ ಧರಿಸುತ್ತಾರೆ ಎನ್ನುತ್ತಾರೆ ಡಿಸೈನರ್ಸ್. ಅವರವರ ಆಯ್ಕೆಗೆ ತಕ್ಕಂತೆ ದುಪಟ್ಟಾ ಧರಿಸಬಹುದು ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Quirk Dress Fashion: ಯುವ ಜನತೆಯನ್ನು ಆಕರ್ಷಿಸುತ್ತಿದೆ ಫಂಕಿ ಕ್ವಿರ್ಕ್ ಫ್ಯಾಷನ್!
ಜಾಕೆಟ್ ಲೆಹೆಂಗಾ ಧರಿಸುವವರಿಗೆ ಟಿಪ್ಸ್
- ತೆಳ್ಳಗೆ ಉದ್ದಗಿರುವವರಿಗೆ ಎಲ್ಲಾ ಬಗೆಯ ವಿನ್ಯಾಸದ್ದು ಓಕೆ.
- ದಪ್ಪಗೆ ಹಾಗೂ ಕುಳ್ಳಗಿರುವವರು ಆದಷ್ಟು ಚಿಕ್ಕ ಬಾರ್ಡರ್‌ನದ್ದನ್ನು ಆಯ್ಕೆ ಮಾಡಬೇಕು. ಕಡಿಮೆ ವಿನ್ಯಾಸ ಇರುವಂತದ್ದನ್ನು ಚೂಸ್ ಮಾಡಬೇಕು.
- ದುಬಾರಿ ಬೆಲೆ ತೆತ್ತ ಜಾಕೆಟ್ ಲೆಹೆಂಗಾ ಕೊಳ್ಳುವಾಗ ಹ್ಯಾಂಡ್‌ವರ್ಕ್‌ಗೆ ಆದ್ಯತೆ ನೀಡುವುದು ಉತ್ತಮ.
- ಮಲ್ಟಿ ಶೇಡ್‌ನ ಜಾಕೆಟ್ ಲೆಹೆಂಗಾ ಟ್ರೆಂಡ್‌ನಲ್ಲಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)