ಬೆಳಗಾವಿ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆ ಮೇಲಿಂದ ಕೃಷ್ಣಾ ನದಿಗೆ (Krishna River) ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನಪ್ಪಿದ್ದಾರೆ. ಉಳಿದ ಮೂವರಿಗೆ ಗಾಯಗಳಾಗಿದೆ. ಈ ದುರ್ಘಟನೆ (Road Accident) ಕೊಲ್ಹಾಪುರ-ಸಾಂಗ್ಲಿ ಹೆದ್ದಾರಿಯ (Belagavi news) ಅಂಕಲಿ ಸೇತುವೆ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪ್ರಸಾದ್ ಭಾಲಚಂದ್ರ ಖೇಡೇಕರ್ (35) ಅವರ ಪತ್ನಿ ಪ್ರೇರಣಾ ಪ್ರಸಾದ್ ಖೇಡೇಕರ್ ಹಾಗೂ ವೈಷ್ಣವಿ, ಸಂತೋಷ್ ನಾರ್ವೇಕರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಉಳಿದವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಸಮರ್ಜಿತ್ ಪ್ರಸಾದ ಖೇಡೇಕರ್ (7) ವರದ ಸಂತೋಷ್ ನಾರ್ವೇಕರ್ (19) ಮತ್ತು ಸಾಕ್ಷಿ ಸಂತೋಷ್ ನಾರ್ವೇಕರ್ (42) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಜೈಸಿಂಗ್ ಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಆಸ್ಪತ್ರೆಯ ಟಾಯ್ಲೆಟ್ನಲ್ಲಿ ನವಜಾತ ಶಿಶು ಹಾಕಿ ಫ್ಲಶ್ ಮಾಡಿದ ಕ್ರೂರಿ ತಾಯಿ!
ರಾಮನಗರ: ರಾಜ್ಯದಲ್ಲಿ ಊಹಿಸಲೂ ಸಾಧ್ಯವಾಗದ ಅಮಾನವೀಯ ಘಟನೆಯೊಂದು ನಡೆದಿದೆ. ರಾಮನಗರ ಜಿಲ್ಲೆಯ (Ramanagar news) ದಯಾನಂದ್ ಸಾಗರ ಆಸ್ಪತ್ರೆಯಲ್ಲಿ (Hospital) ತಾಯಿಯೊಬ್ಬಳು ತನ್ನ ಮಗುವಿನ ಬಗ್ಗೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದು, ಎರಡು ದಿನದ ಮಗುವನ್ನು ಟಾಯ್ಲೆಟ್ನಲ್ಲಿ ಹಾಕಿ ಫ್ಲಶ್ (Crime news) ಒತ್ತಿದ್ದಾಳೆ.
ರಾಮನಗರದಲ್ಲಿ ವರದಿಯಾದ ಈ ಅಮಾನವೀಯ ಘಟನೆ ಆಸ್ಪತ್ರೆಯವರನ್ನು ಮಾತ್ರವಲ್ಲ ಎಲ್ಲರನ್ನೂ ಶಾಕ್ನಲ್ಲಿ ಕೆಡವಿದೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಟಾಯ್ಲೆಟ್ ಪರಿಶೀಲನೆ ಮಾಡುವ ವೇಳೆ ಎರಡು ದಿನ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಸ್ವಂತ ಮಗುವನ್ನೇ ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿರುವ ಪಾಪಿ ತಾಯಿ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಾಗೂ ಸುತ್ತಮುತ್ತ ಕಳೆದ ಒಂದು ವಾರದಲ್ಲಿ ನಡೆದ ಜನನ ದಾಖಲೆಗಳನ್ನು, ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: KSRTC Breaking: ಕೆಎಸ್ಆರ್ಟಿಸಿ ಬಸ್ ಹರಿದು ದಂಪತಿ ಸ್ಥಳದಲ್ಲಿಯೇ ಸಾವು