ಕಾರ್ಡಿಫ್: ಮಾಜಿ ಗೆಳತಿಗೆ ಕೊಟ್ಟಿದ್ದ 6,000 ಕೋಟಿ ರೂ. (Cryptocurrency) ಅನ್ನು ಆಕೆ ತಿಳಿಯದೆ ಕಸದ ಬುಟ್ಟಿಗೆ ಹಾಕಿದ್ದು, ಈಗ ಅದನ್ನು ಹುಡುಕಲು ವೇಲ್ಸ್ನ (Wales) ವ್ಯಕ್ತಿಯೊಬ್ಬ ಪರದಾಡುತ್ತಿದ್ದಾನೆ. ಕಳೆದು ಹೋದ ಸಂಪತ್ತನ್ನು ಹುಡುಕಲು ಆತ ಭೂಮಿ ಅಗೆಯುವ ಕಾರ್ಯವನ್ನೂ ಮಾಡುತ್ತಿದ್ದಾನೆ ಎನ್ನಲಾಗಿದೆ.
ಯಾರೇ ಆಗಿರಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಬಿಸಾಡಲು ಸಾಧ್ಯ ಎಂದು ಯೋಚಿಸುತ್ತಿರಬಹುದು. ಇದು ವಿಚಿತ್ರವಾದರೂ ಸತ್ಯ. 8,000 ಬಿಟ್ಕಾಯಿನ್ಗಳನ್ನು ಸಂಗ್ರಹಿಸಲ್ಪಟ್ಟ ಹಳೆಯ ಹಾರ್ಡ್ ಡ್ರೈವ್ ಅನ್ನು ಯುವತಿಯೊಬ್ಬಳು ಕಸದ ಬುಟ್ಟಿಗೆ ಹಾಕಿದ್ದಾಳೆ. 2009ರಲ್ಲಿ ಸಂಗ್ರಹಿಸಿದ್ದ ಕ್ರಿಪ್ಟೋಕರೆನ್ಸಿ ಈಗ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ.
ಹಾಲ್ಫಿನಾ ಎಡ್ಡಿ- ಇವಾನ್ಸ್ ಅವರು ಹಳೆಯ ಹಾರ್ಡ್ ಡ್ರೈವ್ ಅನ್ನು ವೇಲ್ಸ್ನಲ್ಲಿ ಕಸಕ್ಕೆ ಹಾಕಿದ್ದಾರೆ. ಅದರಲ್ಲಿರುವುದು ಬಿಟ್ಕಾಯಿನ್ಗಳೆಂದು ಆಕೆಗೆ ತಿಳಿದಿರಲಿಲ್ಲ. ತನ್ನ ಮಾಜಿ ಗೆಳೆಯನ ಹಳೆಯ ವಸ್ತುಗಳನ್ನು ಬಿಸಾಡುವಾಗ ಅದನ್ನು ಕೂಡ ಆಕೆ ಎಸೆದಿರುವುದಾಗಿ ಹೇಳಿದ್ದಾಳೆ.
ಮಾಜಿ ಗೆಳೆಯನ ಕಂಪ್ಯೂಟರ್ನ ವಿವಿಧ ಅನಗತ್ಯ ವಸ್ತುಗಳ ಜತೆಗೆ ಇದು ಕೂಡ ಇತ್ತು. ಅದನ್ನು ಕಪ್ಪು ಚೀಲಕ್ಕೆ ತುಂಬಿ ಬಿಸಾಡುವಂತೆ ಆತನೇ ಹೇಳಿದ್ದ. ನನಗೆ ಅದರಲ್ಲಿ ಏನಿದೆ ಎಂದು ತಿಳಿದಿರಲಿಲ್ಲ. ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ಅದನ್ನು ಕಸದ ಬುಟ್ಟಿಗೆ ಹಾಕಿದ್ದೆ ಎಂದು ಆಕೆ ಹೇಳಿದ್ದಾಳೆ.
ಹಾರ್ಡ್ ಡ್ರೈವ್ ಅನ್ನು ಹುಡುಕಲು ಸ್ಥಳೀಯ ಕೌನ್ಸಿಲ್ ಸಹಾಯದಿಂದ ಹೋವೆಲ್ಸ್ ಈಗ ಹೋರಾಡುತ್ತಿದ್ದರೆ ಹಾರ್ಡ್ ಡ್ರೈವ್ ಖಂಡಿತಾ ಸಿಗಬಹುದು ಎಂದು ಎಡ್ಡಿ-ಇವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಟ್ಕಾಯಿನ್ ಇರುವ ಹಾರ್ಡ್ ಡ್ರೈವ್ ಹುಡುಕಲು ಹೋವೆಲ್ಸ್ ಈಗ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಯಾಕೆಂದರೆ ಅವರೀಗ ಇದನ್ನು 1,10,000 ಟನ್ ಕಸದಲ್ಲಿ ಹುಡುಕಬೇಕಿದೆ. ಕಳೆದು ಹೋದ ಸಂಪತ್ತು ಸಿಕ್ಕರೆ ಅದರಲ್ಲಿ ಶೇ. 10ರಷ್ಟನ್ನು ಹೋವೆಲ್ಸ್ ಸ್ಥಳೀಯ ಪ್ರದೇಶಕ್ಕೆ ದಾನ ಮಾಡುವುದಾಗಿ ಹೇಳಿದ್ದಾರೆ.
ನ್ಯೂಪೋರ್ಟ್ ಸಿಟಿ ಕೌನ್ಸಿಲ್ 2013ರಿಂದ ಹೂವೆಲ್ಸ್ ಅವರಿಂದ ಕಸವನ್ನು ಅಗೆಯಲು ವಿನಂತಿಗಳನ್ನು ಸ್ವೀಕರಿಸುತ್ತಿದ್ದಾರೆ. ಆದರೆ ಪರಿಸರ ಅನುಮತಿಯ ಅಡಿಯಲ್ಲಿಇದಕ್ಕೆ ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಿದರು.
Lashkar terrorist : ರುವಾಂಡದಿಂದ ಭಾರತಕ್ಕೆ LET ಉಗ್ರನ ಹಸ್ತಾಂತರ- ಯಾರು ಈ ಸಲ್ಮಾನ್ ರೆಹಮಾನ್ ಖಾನ್?
ಕೌನ್ಸಿಲ್ ಸೈಟ್ನಲ್ಲಿ ಕಾರ್ಯಾಚರಣೆ ನಡೆಸಲು ಅಧಿಕಾರ ಹೊಂದಿರುವ ಏಕೈಕ ಸಂಸ್ಥೆಯಾಗಿರುವ ನ್ಯೂಪೋರ್ಟ್ ಸಿಟಿ ಕೌನ್ಸಿಲ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹಾವೆಲ್ಸ್ ಅವರ ಹಕ್ಕು ಮಂಡನೆಗೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದೆ.