Thursday, 28th November 2024

Susan Wojcicki: ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಯೂಟ್ಯೂಬ್ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಕೊನೆಯ ಪತ್ರ ಬಹಿರಂಗ

Susan Wojcicki

ವಾಷಿಂಗ್ಟನ್‌: ಯೂಟ್ಯೂಬ್‌ನ ಮಾಜಿ ಸಿಇಒ (Ex YouTube CEO) ಸುಸಾನ್ ವೊಜ್ಸಿಕಿ (Susan Wojcicki) ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ (lung cancer) 56ನೇ ವಯಸ್ಸಿನಲ್ಲಿ ಮೃತಪಟ್ಟ ಮೂರು ತಿಂಗಳ ಬಳಿಕ ಅವರ ಕೊನೆಯ ಪತ್ರವನ್ನು (last letter) ಬಿಡುಗಡೆ ಮಾಡಲಾಗಿದೆ. ಈ ಪತ್ರವನ್ನು ಅವರ ಸಾವಿನ ಕೆಲವೇ ವಾರಗಳ ಮೊದಲು ಬರೆಯಲಾಗಿತ್ತು ಎನ್ನಲಾಗಿದೆ.

ನವೆಂಬರ್‌ ಶ್ವಾಸಕೋಶದ ಕ್ಯಾನ್ಸರ್‌ನ ಜಾಗೃತಿ ತಿಂಗಳಾಗಿರುವುದರಿಂದ ಇದು ಸೂಕ್ತ ಸಮಯವಾಗಿದ್ದರಿಂದ ಸುಸಾನ್ ಅವರ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿ ವೆ. ಈ ಪತ್ರದಲ್ಲಿ ವೊಜ್ಸಿಕಿ ಅವರು ಮಾರಣಾಂತಿಕ ಕಾಯಿಲೆಯಿಂದ ಕಲಿತ ಪಾಠಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಸಾವಿಗೆ ಶ್ವಾಸಕೋಶದ ಕ್ಯಾನ್ಸರ್ ಹೇಗೆ ಮೊದಲ ಕಾರಣ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಹೋರಾಡಲು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಹೇಗೆ ಬಳಸಿದರು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

Susan Wojcicki

ಏನಿದೆ ಪತ್ರದಲ್ಲಿ ?

2022ರ ಕೊನೆಯಲ್ಲಿ ನನಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಆ ಸಮಯದಲ್ಲಿ ನಾನು ದಿನಕ್ಕೆ ಕೆಲವು ಮೈಲುಗಳಷ್ಟು ಓಡುತ್ತಿದ್ದೆ. ನಾನು ಎಂದಿಗೂ ಧೂಮಪಾನ ಮಾಡಿರಲಿಲ್ಲ. ಆದ್ದರಿಂದ ಈ ರೋಗ ನನಗಿದೆ ಎಂದು ವೈದ್ಯರು ಹೇಳಿದಾಗ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾದೆ. ಬಳಿಕ ನನ್ನ ಜೀವನ ಸಂಪೂರ್ಣವಾಗಿ ಬದಲಾಯಿತು. ನನ್ನ ಆರೋಗ್ಯ ಮತ್ತು ಕುಟುಂಬದ ಮೇಲೆ ಗಮನ ಕೇಂದ್ರೀಕರಿಸಲು ನಾನು ಯೂಟ್ಯೂಬ್‌ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದೆ. ಆಧುನಿಕ ಔಷಧದಿಂದಾಗಿ ನಾನು ಬಹುತೇಕ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಯಿತು.

ಅತ್ಯಂತ ಪ್ರಮುಖ ಪಾಠ

ರೋಗನಿರ್ಣಯದ ಅನಂತರ ವೊಜ್ಸಿಕಿ ಯೂಟ್ಯೂಬ್‌ನಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಆದರೆ ಸೇಲ್ಸ್‌ಫೋರ್ಸ್, ಪ್ಲಾನೆಟ್ ಲ್ಯಾಬ್ಸ್ ಮತ್ತು ವೇಮೊ ಮಂಡಳಿಗಳಲ್ಲಿ ಸೇವೆ ಸಲ್ಲಿಸುವುದನ್ನು ಮುಂದುವರಿಸಿದರು. ತಮ್ಮ ಪತ್ರದಲ್ಲಿ ಅವರು ಭವಿಷ್ಯದ ಗುರಿಗಳನ್ನು ಸಹ ಹಂಚಿಕೊಂಡಿದ್ದಾರೆ.

ಕ್ಯಾನ್ಸರ್‌ನೊಂದಿಗೆ ಬದುಕುವುದು ಸುಲಭವಲ್ಲ. ಒಬ್ಬ ವ್ಯಕ್ತಿಯಾಗಿ ನಾನು ಬಹಳಷ್ಟು ಬದಲಾಗಿದ್ದೇನೆ ಮತ್ತು ಬಹುಶಃ ನಾನು ಕಲಿತ ಪ್ರಮುಖ ಪಾಠವೆಂದರೆ ವರ್ತಮಾನಕ್ಕೆ ಕೇಂದ್ರೀಕರಿಸುವುದು ಮತ್ತು ಆನಂದಿಸುವುದು.
ಜೀವನವು ಎಲ್ಲರಿಗೂ ಅನಿರೀಕ್ಷಿತವಾಗಿದೆ. ಅನೇಕ ಅಪರಿಚಿತರೊಂದಿಗೆ ನಾವು ಓಡಾಡುತ್ತೇವೆ. ದಿನನಿತ್ಯದ ಜೀವನವನ್ನು ಹೆಚ್ಚು ಸ್ಮರಣೀಯವಾಗಿ ಮಾಡುವುದು, ಬದುಕಿನ ಗುರಿಗಳನ್ನು ವರ್ತಮಾನಕ್ಕೆ ಕೇಂದ್ರೀಕರಿಸುವುದು, ಅದನ್ನು ಸಾಧ್ಯವಾದಷ್ಟು ಆನಂದಿಸುವುದು ಈ ಕಾಯಿಲೆ ಕಲಿಸಿದ ಬಹುದೊಡ್ಡ ಪಾಠ ಎಂಬುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.

ಕ್ಯಾನ್ಸರ್ ವಿರುದ್ಧ ಹೋರಾಟದ ಎರಡು ವರ್ಷಗಳ ಬಳಿಕ ಸುಸಾನ್ ಅವರು ಆ. 10ರಂದು ನಿಧನರಾದರು.

Egyptian billionaire: ಒಂದಲ್ಲ..ಎರಡಲ್ಲ 400ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್‌; ಈಜಿಪ್ಟಿನ ಕೋಟ್ಯಧಿಪತಿಯ ಹೀನ ಕೃತ್ಯ ಬಯಲು