Thursday, 28th November 2024

Naga Chaithanya Marriage: ನಾಗ ಚೈತನ್ಯಗೆ ಶೋಭಿತಾ ಮೇಲೆ ಪ್ರೀತಿ ಹುಟ್ಟಿದ್ದು ಎಲ್ಲಿ?

ಚೆನ್ನೈ: ಸಮಂತಾ ರುತ್ ಪ್ರಭುವಿನಿಂದ (Samantha Ruth Prabhu) ಡಿವೋರ್ಸ್ (Divorce) ಪಡೆದ ನಂತರ‌ ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಇದೀಗ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಅವರು ಶೋಭಿತಾ ಧೂಳಿಪಾಲ ಅವರೊಂದಿಗೆ ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹವಾಗಲಿದ್ದಾರೆ. ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಆಗುವವರೆಗೂ ದಂಪತಿ ತಮ್ಮ ಸಂಬಂಧವನ್ನು ಮುಚ್ಚಿಟ್ಟಿದ್ದರು. ಆದರೆ ಈಗ ನಾಗ ಚೈತನ್ಯ ತಮ್ಮ ಪ್ರೇಮಕಥೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ, ಅವರು ಶೋಭಿತಾ ಅವರೊಂದಿಗಿನ ಮೊದಲ ಭೇಟಿಯ ಬಗ್ಗೆ ವಿವರವಾಗಿ ಹೇಳಿದ್ದಾರೆ. ಡಿಸೆಂಬರ್‌ ತಿಂಗಳಿನಲ್ಲಿ ನಡೆಯಲಿರುವ ಅವರ ಮರು ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ.

ನಾಗ ಚೈತನ್ಯ ಸಂದರ್ಶನದಲ್ಲಿ ಮಾತನಾಡುತ್ತಾ, ಅವರು ಮುಂಬೈನಲ್ಲಿ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಶೋಭಿತಾ ಅವರನ್ನು ಭೇಟಿಯಾದ ಗಳಿಗೆಯನ್ನು ನೆನಪಿಸಿಕೊಂಡರು. “ನಾನು ನನ್ನ OTT ಕಾರ್ಯಕ್ರಮದ ಲಾಂಚ್‌ಗಾಗಿ ಮುಂಬೈಗೆ ಹೋಗಿದ್ದೆ. ಆ ಸಮಯದಲ್ಲಿ, ಶೋಭಿತಾಳಿಗೆ ಅದೇ ವೇದಿಕೆಯಲ್ಲಿ ಕಾರ್ಯಕ್ರಮವಿತ್ತು. ಒಟಿಟಿ ಪ್ಲಾಟ್‌ಫಾರ್ಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾವಿಬ್ಬರು ಮೊದಲ ಬಾರಿಗೆ ಸಂವಾದ ನಡೆಸಿದ್ದೆವು” ಎಂದಿದ್ದಾರೆ.

“ನಮ್ಮಿಬ್ಬರ ಭೇಟಿಯಾದ ನಂತರ ನಾನು ಅವರ ಕುಟುಂಬದ ಬಗ್ಗೆ ತಿಳಿದುಕೊಂಡೆ. ಅವರ ಮನೆಯ ಸದಸ್ಯರೆಲ್ಲರೂ ನಿಜಕ್ಕೂ ಫ್ರೆಂಡ್ಲಿಯಾಗಿದ್ದಾರೆ. ಅವರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಮಾತನಾಡುವುದು ನನಗೆ ಖುಷಿ ಕೊಡುತ್ತದ. ಮದುವೆಯ ದಿನಕ್ಕಾಗಿ ನಾನು ಕಾತರನಾಗಿದ್ದೇನೆ. ಅವರ ಮನೆಯಲ್ಲಿನ ಎಲ್ಲಾ ಹಬ್ಬ ಹರಿದಿನಗಳಿಗೂ ನಾನು ಹೋಗಿ ಬರುತ್ತಿದ್ದೇನೆ. ಎರಡು ಕುಟುಂಬಗಳು ಒಂದೆರಡು ಬಾರಿ ಒಟ್ಟಿಗೆ ಸೇರಿದ್ದೇವೆ. ಶೋಭಿತಾ ಕುಟುಂಬ ನನ್ನನ್ನು ಅವರ ಮನೆಯ ಮಗನೆಂದೇ ಭಾವಿಸಿದ್ದಾರೆ ” ಎಂದು ನಾಗ ಚೈತನ್ಯ ಹೇಳಿದ್ದಾರೆ.

“ನಮ್ಮಿಬ್ಬರ ಮದುವೆಯ ಸ್ಥಳವು ಶೋಭಿತಾ ಅವರ ಕುಟುಂಬಕ್ಕೆ ವಿಶೇಷವಾಗಿದ್ದು, ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಲಿದ್ದು, ಬಹುಕಾಲ ನೆನಪಿಟ್ಟುಕೊಳ್ಳುವ ಕ್ಷಣಗಳನ್ನು ನಾವು ಅನುಭವಿಸಬೇಕು. ಸದ್ಯಕ್ಕೆ ನನ್ನಲ್ಲಿ ಸಾಕಷ್ಟು ಉತ್ಸಾಹವಿದೆ. ನರ್ವಸ್‌ ನೆಸ್‌ ಕೂಡ ಇದೆ. ಮದುವೆಯ ವಿಧಿವಿಧಾನಗಳು ಅದ್ಧೂರಿಯಾಗಿ ನಡೆದರೂ, ಮದುವೆಯಲ್ಲಿ ಪಾಲ್ಗೊಳ್ಳುವವರ ಪಟ್ಟಿ ತೀರಾ ಚಿಕ್ಕದಾಗಿದೆ. ಹತ್ತಿರದ ಸಂಬಂಧಿಗಳು ಮತ್ತು ಆಪ್ತರು ಮಾತ್ರ ಮದುವೆಗೆ ಬರಲಿದ್ದಾರೆ” ಎಂದಿದ್ದಾರೆ.

ನಾಗ ಚೈತನ್ಯ ಅವರ ಮೊದಲ ಮದುವೆ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ನಡೆದಿತ್ತು. ಅವರಿಬ್ಬರು ಅಕ್ಟೋಬರ್ 2017 ರಲ್ಲಿ ವಿವಾಹವಾಗಿದ್ದರು. ದಂಪತಿ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ವೈವಾಹಿಕ ಸಮಸ್ಯೆಗಳ ಕಾರಣದಿಂದಾಗಿ 2021 ರಿಂದ ಪ್ರತ್ಯೇಕವಾಗಿರಲು ಶುರು ಮಾಡಿದ್ದರು. 2022 ರಲ್ಲಿ ವಿಚ್ಛೇದನ ಪಡೆದುಕೊಂಡರು.

ಡಿವೋರ್ಸ್‌ ನಂತರ ನನ್ನನ್ನುʼಸೆಕೆಂಡ್‌ ಹ್ಯಾಂಡ್‌’ ಎಂದರು… ನಟಿ ಸಮಂತಾ ಬೇಸರ

ಸಮಂತಾ ರುತ್‌ ಪ್ರಭು ( Samantha Ruth Prabhu) ಅವರು ತೆಲುಗುವಿನ ಸ್ಟಾರ್‌ ನಟ ನಾಗ ಚೈತನ್ಯ ಅವರಿಂದ ಡಿವೋರ್ಸ್‌(Divorce) ಪಡೆದ ನಂತರ ಎದುರಿಸಿದ ಟೀಕೆ ಮತ್ತು ಅಪಮಾನಗಳ ಕುರಿತು ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಇತ್ತೀಚೆಗಷ್ಟೇ ಮಾತನಾಡಿರುವ ಸಮಂತಾ “ಡಿವೋರ್ಸ್‌ ಪಡೆದ ನಂತರ ನನಗೆ ʼಸೆಕೆಂಡ್‌ ಹ್ಯಾಂಡ್‌ʼ,ಯೂಸ್ಡ್‌ʼ ಎಂಬ ಹಣೆಪಟ್ಟಿಗಳನ್ನು ಕಟ್ಟಿದರು. ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕು. ಈಗಲೂ ಲಿಂಗ ತಾರತಮ್ಯವಿದೆ. ಮೇಲ್‌ ಡಾಮಿನೇಟ್‌ ಎಂಬುದು ಭಾರತವನ್ನು ಆವರಿಸಿಕೊಂಡಿದೆ” ಎಂದಿದ್ದರು.

ಈ ಸುದ್ದಿಯನ್ನೂ ಓದಿ:Aishwarya Rai: ಡಿವೋರ್ಸ್‌ ರೂಮರ್ ನಡುವೆ ಐಶ್ವರ್ಯ ರೈ ಇನ್ಸ್ಟಾ ಪೋಸ್ಟ್‌ ಫುಲ್‌ ವೈರಲ್‌! ಅಂತಹದ್ದೇನಿದೆ?