Thursday, 28th November 2024

Viral News: 40 ಸಾವಿರ ಕೋಟಿ ರೂ. ಸಂಪತ್ತು ತೊರೆದು ಬೌದ್ಧ ಸನ್ಯಾಸಿಯಾದ ಮಲೇಷಿಯಾದ ಬ್ಯುಸಿನೆಸ್ ಟೈಕೂನ್‌ನ ಏಕಮಾತ್ರ ಪುತ್ರ!

ಕೌಲಾಲಂಪುರ: ಎಳೆಯ ಪ್ರಾಯದಲ್ಲೇ ತಮ್ಮ ಶ್ರೀಮಂತಿಕೆಯನ್ನು ತೊರೆದು ಸನ್ಯಾಸ ಜೀವನವನ್ನು ಆಯ್ದುಕೊಳ್ಳುವ ಹಲವಾರು ಘಟನೆಗಳು ನಮ್ಮ ಮುಂದಿವೆ. ಅದರಲ್ಲೂ ತಮ್ಮ ಕುಟುಂಬದ ಶ್ರೀಮಂತಿಕೆಯನ್ನು ತ್ಯಜಿಸಿ ಜೈನ ಅಥವಾ ಬೌದ್ಧ ಸನ್ಯಾಸಿಗಳಾದವರ ಹಲವಾರು ಕಥೆಗಳನ್ನು ನಾವು ಕೇಳಿದ್ದೇವೆ. ಇದೀಗ ಇಂತಹುದೇ ಒಂದು ಘಟನೆಯಲ್ಲಿ ಮಲೇಷಿಯಾದ ಬ್ಯುಸಿನೆಸ್ ಟೈಕೂನ್, ಬಿಲಿಯಾಧಿಪತಿ ಆನಂದ ಕೃಷ್ಣನ್ ಅವರ ಏಕಮಾತ್ರ ಪುತ್ರ ತನ್ನ ಕುಟುಂಬದ ಕೋಟ್ಯಂತರ ರೂಪಾಯಿ ಸಂಪತ್ತನ್ನು ತೊರೆದು ಬೌದ್ಧ ಸನ್ಯಾಸಿಯಾಗುವ (Buddhist monk) ಮೂಲಕ ಜಗತ್ತಿನ ಹುಬ್ಬೇರುವಂತೆ ಮಾಡಿದ್ದಾರೆ. ಈ ಸುದ್ದಿ ಸದ್ಯ ವೈರಲ್ (Viral News) ಆಗಿ ಟ್ರೆಂಡಿಂಗ್ ನಲ್ಲಿದೆ.

ತನ್ನ ಪುತ್ರ ಭೌತಿಕ ಸಂಪತ್ತನ್ನು ತೊರೆದು ಸನ್ಯಾಸ ಜೀವನವನ್ನು ಸ್ವೀಕರಿಸಿದ ಬಳಿಕ ಉದ್ಯಮಿ ಆನಂದ ಕೃಷ್ಣನ್ (Ananda Krishnan) ಅವರು ಇಂದು (ನ. 28)ರಂದು ತಮ್ಮ 86ನೆಯ ವಯಸ್ಸಿನಲ್ಲಿ ನಿಧನರಾಗುವ ಮೂಲಕ ತನ್ನ ಪ್ರೀತಿಪಾತ್ರರನ್ನು ಮಾತ್ರವಲ್ಲದೇ ಮಲೇಷಿಯಾ ಜನರನ್ನು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದ್ದಾರೆ.

ಮಲೆಷಿಯಾದ ಟಾಪ್ ತ್ರೀ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆನಂದ ಕೃಷ್ಣನ್ ಅವರು ಅಲ್ಲಿ AK ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಅವರ ಏಕಮಾತ್ರ ಪುತ್ರ 18 ವರ್ಷದ ಅಜಹನ್ ಸಿರಿಪನ್ಯೋ (Ajahn Siripanyo) ಇದೀಗ ತನ್ನ ತಂದೆಯ 40 ಸಾವಿರ ಕೋಟಿ ರೂ. ಬೃಹತ್ ಉದ್ಯಮವನ್ನು ತೊರೆದು ಬೌದ್ಧ ಸನ್ಯಾಸಿಯಾಗುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈ ಸುದ್ದಿ, ಲೇಖಕ ರಾಬಿನ್ ಶರ್ಮಾ (Robin Sharma) ಅವರ ಟಾಪ್ ಸೆಲ್ಲಿಂಗ್ ಪುಸ್ತಕವಾಗಿರುವ ‘ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ’ಯ (‘The Monk Who Sold His Ferrari’) ಕಾಲ್ಪನಿಕ ಕಥೆಯಂತಿದೆ. ಸಿರಿಪನ್ಯೋ ಇದೀಗ ಥಾಯ್-ಮಲೇಷಿಯನ್ ಬೌದ್ಧ ಸನ್ಯಾಸಿ ರೀತಿಯಲ್ಲಿ ತಮ್ಮ ಜೀವನವನ್ನು ಕಳೆಯಲು ನಿರ್ಧರಿಸಿದ್ದಾರೆ ಮತ್ತು ಆ ಮೂಲಕ ಆಧ್ಯಾತ್ಮದ ಚರಮಸೀಮೆಯನ್ನು ತಲುಪುವ ಗುರಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: Susan Wojcicki: ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಯೂಟ್ಯೂಬ್ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಕೊನೆಯ ಪತ್ರ ಬಹಿರಂಗ

ತಮ್ಮ ದೇಶದ ಹೆಮ್ಮೆಯ ಉದ್ಯಮಿಯ ಪುತ್ರ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸ ಜೀವನಕ್ಕೆ ಕಾಲಿಟ್ಟ ಸಂದರ್ಭವನ್ನು ಮಲೇಷಿಯನ್ನರು ಸಂಭ್ರಮಿಸಿದ್ದು, ‘ನಮೋ ಬುದ್ಧ ನಮಃ’ ಎಂದು ಬುದ್ಧನ ಗುಣಗಾನದಲ್ಲಿ ತೊಡಗಿದ್ದಾರೆ.

ಸಿರಿ ಪನ್ಯೋ ತನ್ನ ಹದಿನೆಂಟರ ಹರೆಯದಲ್ಲೇ ಐಷಾರಾಮಿ ಬದುಕಿನತ್ತ ಒಲವನ್ನು ತೋರದೇ ಬೌದ್ಧ ಅಡವಿ ಸನ್ಯಾಸಿಯಾಗುವ ಹಾದಿಯನ್ನು ಆರಿಸಿದ್ದು ವಿಶೇಷವಾಗಿದೆ. ತಾನು ಸನ್ಯಾಸಿಯಾದರೂ ತನ್ನ ಕುಟುಂಬದವರ ಮತ್ತು ಪ್ರೀತಿಪಾತ್ರರ ಬಂಧವನ್ನು ತೊರೆಯದಿರಲು ಸಿರಿಪನ್ಯೋ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸಿರಿಪನ್ಯೋ ಅವರು ತನ್ನ ತಾಯಿಯ ಕುಟುಂಬಸ್ಥರಿಗೆ ನಮನ ಸಲ್ಲಿಸಲು ಥಾಯ್ಲೆಂಡ್‌ಗೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ಬೌದ್ಧ ಧರ್ಮದ ಬಗ್ಗೆ ಒಲವು ಬೆಳೆದು ಇದೀಗ ಅವರು ಬೌದ್ಧ ಸನ್ಯಾಸಿಯಾಗುವ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವಾಯ್ತು ಎಂಬ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ಬೌದ್ಧ ಸನ್ಯಾಸಿಯದ ಬಳಿಕ ಇದಿಗ ಸಿರಿಪನ್ಯೋ ಅವರು ಥಾಯ್ಲೆಂಡ್-ಮಯನ್ಮಾರ್ ಗಡಿ ಭಾಗದಲ್ಲಿರುವ ಡಟೌ ಡುಮ್ ಮೊನಸ್ಟ್ರಿಯಲ್ಲಿ ಅಡವಿ ಸನ್ಯಾಸಿ ಜೀವನವನ್ನು ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ.