Thursday, 28th November 2024

Lottery Winner: 1,804 ಕೋಟಿ ರೂ. ಜಾಕ್‌ಪಾಟ್ ಗೆದ್ದ! ರಾತ್ರಿ ಬೆಳಗಾಗುವಷ್ಟರಲ್ಲಿ ದೇಶದ ಶ್ರೀಮಂತ!

Lottery Winner

ಬ್ರಿಟಿಷ್ ವ್ಯಕ್ತಿಯೊಬ್ಬರು (British man) ರಾಷ್ಟ್ರೀಯ ಲಾಟರಿಯಲ್ಲಿ 1,804 ಕೋಟಿ ರೂ. ನ ಜಾಕ್‌ಪಾಟ್ ಗೆದ್ದಿದ್ದು (Lottery Winner), ಇದು ರಾಷ್ಟ್ರೀಯ ಲಾಟರಿ ಇತಿಹಾಸದಲ್ಲಿ ಮೂರನೇ ಅತೀ ದೊಡ್ಡ ರಾಷ್ಟ್ರೀಯ ಲಾಟರಿ (National Lottery) ವಿಜೇತರಾಗಿ ಆಯ್ಕೆಯಾಗಿದ್ದಾರೆ. ಇವರೀಗ ಯುಕೆಯ ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿದ್ದಾರೆ.

ಜಾಕ್‌ಪಾಟ್ ವೊಂದು ಬ್ರಿಟಿಷ್ ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸಿದೆ. ಲಾಟರಿಯಲ್ಲಿ 177 ಮಿಲಿಯನ್ ಡಾಲರ್ ಅಂದರೆ ಅಂದಾಜು 1,804 ಕೋಟಿ ರೂ. ಗೆದ್ದಿದ್ದಾರೆ. ರಾಷ್ಟ್ರೀಯ ಲಾಟರಿ ಪ್ರಕಾರ, ಮಂಗಳವಾರ ನಡೆದ ಡ್ರಾದಲ್ಲಿ ಈ ಬಹುಮಾನ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಲ್ವಿನ್‌ನ ಹಿರಿಯ ವಿಜೇತರ ಸಲಹೆಗಾರ ಆಂಡಿ ಕಾರ್ಟರ್, ವಿಜಯವನ್ನು ಅಸಾಮಾನ್ಯ ಎಂದು ವಿವರಿಸಿದರು.

ವಾಹ್, 177 ಮಿಲಿಯನ್ ಪೌಂಡ್‌ಗಳ ಜಾಕ್‌ಪಾಟ್ ಗೆದ್ದಿರುವ ಯುಕೆ ಟಿಕೆಟ್ ಹೊಂದಿರುವ ಏಕೈಕ ವ್ಯಕ್ತಿಗೆ ಇದು ನಂಬಲಾಗದ ರಾತ್ರಿಯಾಗಿದೆ ಎಂದು ಹೇಳಿದ್ದಾರೆ.

ಈ ಗೆಲುವು ಅವರನ್ನು ರಾಷ್ಟ್ರೀಯ ಲಾಟರಿಯ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ. ಯಾಕೆಂದರೆ ಅವರು ಸಾರ್ವಕಾಲಿಕ ಮೂರನೇ ಅತಿದೊಡ್ಡ ರಾಷ್ಟ್ರೀಯ ಲಾಟರಿ ವಿಜೇತರಾಗಿದ್ದಾರೆ. ಕ್ರಿಸ್‌ಮಸ್‌ಗೆ ಮುಂಚಿತವಾಗಿ ಇದು ಅದ್ಭುತ ಗೆಲುವಾಗಿದೆ. ಈ ಅದ್ಭುತ ಬಹುಮಾನವನ್ನು ಪಾವತಿಸಲು ನಾವು ಕಾಯಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಸ್ಪರ್ಧಿಯು ತಮ್ಮ ಟಿಕೆಟ್‌ ಪರಿಶೀಲಿಸಿ ನಮಗೆ ಕರೆ ಮಾಡಲು ಒತ್ತಾಯಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿಬಿಸಿ ವರದಿ ಪ್ರಕಾರ ಜಾಕ್ಪಾಟ್ ಗೆದ್ದ ವ್ಯಕ್ತಿ ಬಹುಮಾನ ಸ್ವೀಕರಿಸಿದ ಬಳಿಕ ಅವರು ಬ್ರಿಟಿಷ್ ಸಂಗೀತ ಐಕಾನ್‌ಗಳಾದ ಹ್ಯಾರಿ ಸ್ಟೈಲ್ಸ್ ಮತ್ತು ಅಡೆಲೆಗಿಂತ ಶ್ರೀಮಂತರಾಗುತ್ತಾರೆ. ವಿಜೇತರು ಅನಾಮಧೇಯರಾಗಿ ಉಳಿಯಬಹುದು.

Viral News: 40 ಸಾವಿರ ಕೋಟಿ ರೂ. ಸಂಪತ್ತು ತೊರೆದು ಬೌದ್ಧ ಸನ್ಯಾಸಿಯಾದ ಮಲೇಷಿಯಾದ ಬ್ಯುಸಿನೆಸ್ ಟೈಕೂನ್‌ನ ಏಕಮಾತ್ರ ಪುತ್ರ!

2022ರ ಜುಲೈ 19ರಂದು ಅತೀ ದೊಡ್ಡ ಗೆಲುವು ದಾಖಲಿಸಿದ ವ್ಯಕ್ತಿ ಅನಾಮಧೇಯರಾಗಿ ಉಳಿದಿದ್ದು, ಅವರು 195 ಮಿಲಿಯನ್‌ ಡಾಲರ್ ಬಹುಮಾನ ಮೊತ್ತವನ್ನು ಪಡೆದಿದ್ದರು. ಅದೇ ವರ್ಷದ ಆರಂಭದಲ್ಲಿ ಗ್ಲೌಸೆಸ್ಟರ್‌ನ ಜೋ ಮತ್ತು ಜೆಸ್ ಥ್ವೈಟ್ ಅವರು ಲಕ್ಕಿ ಡಿಪ್ ಟಿಕೆಟ್‌ನೊಂದಿಗೆ 184.2 ಮಿಲಿಯನ್ ಡಾಲರ್ ಗೆದ್ದರು. ಇದು ಆ ವರ್ಷದ ದಾಖಲೆಯಾಗಿ ಉಳಿದಿದೆ.