Thursday, 28th November 2024

Haveri News: ಶಿಗ್ಗಾಂವಿಯಲ್ಲಿ ಬಿಜೆಪಿ ಸೋಲಿಗೆ ನಾನಾ ಕಾರಣ; ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ; ಶಿವಾನಂದ ಮ್ಯಾಗೇರಿ

Haveri News

ಹಾವೇರಿ: ಶಿಗ್ಗಾಂವಿ- ಸವಣೂರ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಅವರ ಸೋಲಿಗೆ ನಾನಾ ಕಾರಣಗಳಿವೆ. ಸೋಲನ್ನು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಅವರೇ ಶಾಸಕರಾಗುತ್ತಾರೆ ಎಂದು ಶಿಗ್ಗಾಂವಿ-ಸವಣೂರ ಕ್ಷೇತ್ರದ (Haveri News) ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | R Ashok: ಕಾಂಗ್ರೆಸ್‌ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ; ಆರ್‌. ಅಶೋಕ್‌ ಆರೋಪ

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಿವಾನಂದ ಮ್ಯಾಗೇರಿ, ಶಿವಾನಂದ ಪಾಟೀಲ್, ಅನೀಲ್ ಸಾತಣ್ಣನವರ ಹಾಗೂ ಇತರೆ ಮುಖಂಡರು ಮಾತನಾಡಿ, ಮಾಜಿ ಸಿಎಂ, ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ನಮ್ಮ ನಾಯಕರು. ಬಿಜೆಪಿ ಪಕ್ಷಕ್ಕೆ ದ್ರೋಹ ಮಾಡಿರುವ ಶ್ರೀಕಾಂತ ದುಂಡಿಗೌಡ್ರ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಮೇಲೆ ಬೊಮ್ಮಾಯಿ ಅವರ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಅವು ಸತ್ಯಕ್ಕೆ ದೂರವಾದುದು, ಬಿಜೆಪಿಯ ಶಿಸ್ತು ಸಮಿತಿಯು ಪಕ್ಷ ದ್ರೋಹ ಕೆಲಸ ಮಾಡಿರುವ ಬಗ್ಗೆ ಸಾಕ್ಷ್ಯಾಧಾರದ ಮೇಲೆ ಈ ಇಬ್ಬರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದಾರೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಅವರು ಸ್ವಾರ್ಥ ರಾಜಕಾರಣಿ ಅಲ್ಲ. ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರುವ ದ್ರೋಹಿಗಳನ್ನು ಆ ದೇವರು ಸಹಿಸಲ್ಲ. ಅವರಿಗೆ ನೋವು ಕೊಟ್ಟವರಿಗೆ ಆ ದೇವರು ಕ್ಷಮಿಸಲ್ಲ. ಕುತಂತ್ರದಿಂದ ಚುನಾವಣೆ ಗೆದ್ದು ಬೀಗಿದ್ದಾರೆ ಎಂದು ಆರೋಪಿಸಿದ ಅವರು, ಚುನಾವಣೆ ಬರುತ್ತೇ-ಹೋಗುತ್ತೆ ಸೋಲಿನ ಬಗ್ಗೆ ನಮಗೂ ಅರಿವಾಗಿದೆ. ಆಡಿಕೊಳ್ಳುವವರು ಸತ್ಯ ತಿಳಿದು ಮಾತನಾಡಲಿ, ಇದನ್ನು ಅವರು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಈ ಸುದ್ದಿಯನ್ನೂ ಓದಿ | K-4 Ballistic Missile: ಜಲಾಂತರ್ಗಾಮಿ ನೌಕೆಯಿಂದ 3,500 ಕಿ.ಮೀ. ವ್ಯಾಪ್ತಿಯ ಪರಮಾಣು ಸಾಮರ್ಥ್ಯದ ಕ್ಷಿಪಣಿಯ ಯಶಸ್ವಿ ಉಡಾವಣೆ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಾನಂದ ಪಾಟೀಲ್, ಅನೀಲ್ ಸಾತಣ್ಣನವರ, ಮಂಜುನಾಥ ನಂಜಪ್ಪನವರ, ಸಂಜೀವ ಮಡಿವಾಳರ, ಸತೀಶ ಬಾಣದವರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.