Wednesday, 25th December 2024

Viral News: ರೈಲು ಶೌಚಾಲಯದಿಂದ ವಿಚಿತ್ರ ಶಬ್ದ; ಬಾಗಿಲು ಒಡೆದ ಅಧಿಕಾರಿಗಳಿಗೆ ಶಾಕ್‌!

Viral News

ಗೋರಖ್‌ಪುರ : ಗೋರಖ್‌ಪುರದಿಂದ ಹೊರಟಿದ್ದ ರೈಲಿನಲ್ಲಿ ಆರ್‌ಪಿಎಫ್‌ ಸಿಬ್ಬಂದಿ ವಾಡಿಕೆಯ ಗಸ್ತು ನಡೆಸುತ್ತಾ ತಮ್ಮ ರಾತ್ರಿ ಕರ್ತವ್ಯದ ಭಾಗವಾಗಿ ಪ್ರತಿ ಬೋಗಿಯನ್ನು ಪರಿಶೀಲಿಸುತ್ತಿದ್ದರಂತೆ. ಆ ವೇಳೆ ಅವರು ಶೌಚಾಲಯದ ಮೂಲಕ ಹಾದುಹೋಗುವಾಗ ಒಳಗಿನಿಂದ ವಿಚಿತ್ರ ಶಬ್ದವನ್ನು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಆಗ ಕುತೂಹಲಗೊಂಡ ಆರ್‌ಪಿಎಫ್‌ ಸಿಬ್ಬಂದಿ ಶೌಚಾಲಯದ ಬಳಿ ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ್ದಾರೆ. ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಲವಾರು ಪ್ರಯತ್ನಗಳ ನಂತರ, ಅವರು ಬಲವಂತವಾಗಿ ಬಾಗಿಲು ತೆರೆದಾಗ ಇಬ್ಬರು ಮಕ್ಕಳು ಒಳಗೆ ಇರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್‌(Viral News) ಆಗಿದೆ.

ಮಕ್ಕಳಿಗೆ ತಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಾಗಲಿಲ್ಲವಂತೆ. ಯಾರೋ ಅವರನ್ನು ಅಲ್ಲಿಗೆ ಕರೆತಂದಿದ್ದಾರೆ ಎಂದು ಮಾತ್ರ ಹೇಳಿದ್ದಾರೆ. ಅವರನ್ನು ಪತ್ತೆ ಮಾಡಲು ತಕ್ಷಣ ಆರ್‌ಪಿಎಫ್‌ ಅಧಿಕಾರಿಗಳು ರೈಲ್ವೆ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ.  ಅವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Viral News

ಭಾರತೀಯ ರೈಲ್ವೆ ಮಕ್ಕಳ ಸುರಕ್ಷತೆಗೆ ಬದ್ಧವಾಗಿದೆ ಮತ್ತು ‘ಆಪರೇಷನ್ ನನ್ಹೆ ಫರಿಶ್ತೆ’ ಎಂಬ ಮಕ್ಕಳ ರಕ್ಷಣಾ ಅಭಿಯಾನವನ್ನು ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಆರ್‌ಪಿಎಫ್‌ ಸಿಬ್ಬಂದಿಗಳು, ನಿಲ್ದಾಣಗಳು ಮತ್ತು ರೈಲುಗಳನ್ನು ಪರಿಶೀಲಿಸುವ ಮೂಲಕ ಅಪಹರಣಕ್ಕೊಳಗಾದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಪತ್ತೆಯಾದ ಮಕ್ಕಳನ್ನು ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.

ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಮಾತನಾಡಿ, 2024ರ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಈಶಾನ್ಯ ರೈಲ್ವೆಯ ನಿಲ್ದಾಣಗಳು ಮತ್ತು ರೈಲುಗಳಲ್ಲಿ ತೊಂದರೆಗೀಡಾದ 644 ಮಕ್ಕಳನ್ನು ಆರ್‌ಪಿಎಫ್‌ ಯಶಸ್ವಿಯಾಗಿ ರಕ್ಷಿಸಿದೆ ಎಂದು ಹೇಳಿದ್ದಾರೆ.

ಆಪರೇಷನ್ ‘ನನ್ಹೆ ಫರಿಷ್ತೆ’ ಹಲವಾರು ಮಕ್ಕಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2023-24ರಲ್ಲಿ ಈಶಾನ್ಯ ರೈಲ್ವೆಯಲ್ಲಿ 368 ಮಕ್ಕಳನ್ನು ರಕ್ಷಿಸಲಾಗಿದೆ. ಅಕ್ಟೋಬರ್ 2024 ರ ಹೊತ್ತಿಗೆ, ಈ ಸಂಖ್ಯೆ 644ಕ್ಕೆ ಏರಿದೆ, ಈಗಾಗಲೇ 433 ಹುಡುಗರು ಮತ್ತು 211 ಹುಡುಗಿಯರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ:ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬರ್ತಿದ್ದಂತೆ ಕಾರಾಗೃಹದ ಗೇಟ್ ಬಳಿ ಈ ಭೂಪ ಮಾಡಿದ್ದೇನು ಗೊತ್ತಾ?ವಿಡಿಯೊ ಇದೆ

ಈ ಮಕ್ಕಳಲ್ಲಿ ಓಡಿಹೋದ, ಕಾಣೆಯಾದ, ಬೇರ್ಪಟ್ಟ, ನಿರ್ಗತಿಕ, ಅಪಹರಣಕ್ಕೊಳಗಾದ, ಮಾನಸಿಕವಾಗಿ ತೊಂದರೆಗೊಳಗಾದ ಮತ್ತು ಮನೆಯಿಲ್ಲದ ಮಕ್ಕಳು ಸೇರಿದ್ದಾರೆ. ಮಕ್ಕಳ ರಕ್ಷಣೆಗೆ ಮತ್ತಷ್ಟು ಸಹಾಯ ಮಾಡಲು, ಈಶಾನ್ಯ ರೈಲ್ವೆಯ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿಗಳು ಲಭ್ಯವಿದೆ.