Friday, 27th December 2024

Geometric Jewel Fashion: ಯುವತಿಯರ ಜ್ಯುವೆಲ್ ಫ್ಯಾಷನ್‌ನಲ್ಲಿ ಜೆಮೆಟ್ರಿಕ್ ಡಿಸೈನ್‌ನ ಫಂಕಿ ಆಭರಣಗಳು!

Geometric Jewel Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜೆಮೆಟ್ರಿಕ್ ಡಿಸೈನ್‌ನ ಜ್ಯುವೆಲರಿಗಳು ಇದೀಗ ಯುವತಿಯರ ಕಿವಿಗಳನ್ನು ಅಲಂಕರಿಸುತ್ತಿವೆ. ವೃತ್ತ, ತ್ರಿಭುಜ, ಚೌಕ, ಆಯಾತಾಕಾರ, ವಜ್ರಾಕೃತಿ, ಷಟ್ಬುಜ ಸೇರಿದಂತೆ ನಾನಾ ಆಕಾರದ ಜೆಮೆಟ್ರಿಕ್ ಆಕ್ಸೆಸರೀಸ್‌ಗಳು (Geometric Jewel Fashion) ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿದ್ದು, ಯುವತಿಯರನ್ನು ಅಲಂಕರಿಸುತ್ತಿವೆ. ಕಿವಿಯೊಲೆ ಮಾತ್ರವಲ್ಲ, ಕೈಬೆರಳಿನ ಉಂಗುರಗಳು, ಕತ್ತನ್ನು ಅಲಂಕರಿಸುವ ಸರದ ಪೆಂಡೆಂಟ್‌ಗಳು, ಚೈನ್‌ಗಳು, ಕೈ ಬಳೆ-ಬ್ರೇಸ್ಲೆಟ್‌ಗಳು ಈ ಕೆಟಗರಿಯಲ್ಲಿ ಕಾಣಿಸಿಕೊಂಡಿವೆ.

ಚಿತ್ರಕೃಪೆ: ಪಿಕ್ಸೆಲ್

ನಾನಾ ಆಕಾರದ ಕಿವಿಯೊಲೆಗಳು

ಅಂದಹಾಗೆ, ತ್ರಿಕೋನ, ವೃತ್ತಾಕಾರ, ಚತುರ್ಭುಜ ಹೀಗೆ ಅತಿ ಹೆಚ್ಚು ವೆರೈಟಿಗಳ ಪ್ರಯೋಗಕ್ಕೆ ಇಯರ್ ರಿಂಗ್ಸ್ ಅವಕಾಶ ನೀಡುತ್ತದೆ. ಹ್ಯಾಂಗಿಗ್ಸ್‌ನ ತುದಿಯಲ್ಲಿ ರೆಕ್ಟಾಂಗಲ್, ಟ್ರಯಾಂಗಲ್, ಸ್ಕ್ವೇರ್ ಆಕೃತಿಯ ಇಯರಿಂಗ್‌ಗಳು ಪಾಪುಲರ್ ಆಗಿವೆ. ನಾನಾ ಆಕಾರದ ಬಿಗ್ ಸ್ಟಡ್ಸ್ ಕೂಡ ಟ್ರೆಂಡಿಯಾಗಿವೆ. ಮಿಕ್ಸ್ ಮ್ಯಾಚ್ ಉಡುಪು ಧರಿಸುವಾಗ ಇಂತಹ ಕಿವಿಯೋಲೆಗಳು ಟ್ರೆಂಡಿ ಆಗಿ ಕಾಣಿಸುತ್ತವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.

ವಿಭಿನ್ನ ಆಕಾರದ ಜೆಮೆಟ್ರಿಕಲ್ ಉಂಗುರಗಳು

ಮಾಮೂಲಿ ದುಂಡಗಿನ ಉಂಗುರ ಹಾಕಿ ಹಾಕಿ ಬೋರು ಅನ್ನುವರಿಗೆ ಇದು ಉತ್ತಮ ಚಾಯ್ಸ್. ನಿಮ್ಮ ಅಂದದ ಬೆರಳಿಗೆ ಒಪ್ಪುವಂತಹ ತರೇಹವಾರಿ ಆಕಾರದ ಉಂಗುರಗಳನ್ನು ಆರಿಸಿಕೊಳ್ಳಬಹುದು. ಅಲ್ಲದೆ ಒಂದು ಬೆರಳಿಗೆ ಒಂದೇ ಉಂಗುರ ತೊಡುವ ಬದಲು ಬೆರಳ ತುದಿಯಿಂದ ಕೊನೆಯವರೆಗೆ ನಿಮಗಿಷ್ಟ ಬಂದಷ್ಟು ಉಂಗುರ ಧರಿಸಬಹುದು. ಅಲ್ಲದೆ ಒಂದೊಂದು ಬೆರಳಿಗೆ ಒಂದೊಂದು ಆಕೃತಿ ಧರಿಸಿದರೂ ಲುಕ್ ಚೆನ್ನಾಗಿರುತ್ತದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಘವ್.

ಜೆಮೆಟ್ರಿಕ್ ಡಿಸೈನ್‌ನ ನೆಕ್ಚೈನ್ಸ್ ಹಾಗೂ ಪೆಂಡೆಂಟ್ಸ್

ತೆಳ್ಳನೆಯ ಸರಕ್ಕೆ ನಾನಾ ಶೇಪ್‌ನ ಜೆಮೆಟ್ರಿಕ್ ಸ್ಟೈಲಿಶ್ ಪೆಂಡೆಂಟ್‌ಗಳು ಬಂದಿವೆ. ಕೆಲವು ಫಂಕಿ ಲುಕ್ ನೀಡುವ ತೆಳುವಾದ ತಂತಿಯ ಜೆಮೆಟ್ರಿಕ್ ಆಕಾರದ ನೆಕ್ಚೈನ್‌ಗಳು ಕೂಡ ದೊರೆಯುತ್ತಿವೆ ಎನ್ನುತ್ತಾರೆ ಮಾರಾಟಗಾರರು.

ವಕ್ರವಾಗಿರುವ ಬಳೆಗಳು

ಧರಿಸುವ ಬಳೆ ಅಂದ್ರೆ ದುಂಡಗೇ ಇರಬೇಕಾಗಿಲ್ಲ. ದುಂಡಗಿನ ಕೈಗೆ ಟ್ರಯಾಂಗಲ್, ಆಫ್ ಸರ್ಕಲ್, ರೆಕ್ಟಾಂಗಲ್ ಸೇರಿದಂತೆ ವಿವಿಧಾಕಾರದ ಬಳೆಗಳು ಅಥವಾ ಬ್ರೆಸ್ಲೆಟ್‌ಗಳು ಈ ಸೀಸನ್‌ನ ಜೆಮೆಟ್ರಿಕಲ್ ಜ್ಯುವೆಲರಿ ಡಿಸೈನ್‌ನಲ್ಲಿ ಬಂದಿವೆ. ಲಾಂಗ್ ಸ್ಕರ್ಟ್, ಸಲ್ವಾರ್‌ಗಳ ಜತೆಗೆ ಈ ರೀತಿ ಬಗೆ ಬಗೆಯ ನಾನಾ ಆಕಾರದ ಬಳೆಗಳನ್ನು ಮಿಕ್ಸ್ ಮಾಡಿ ಧರಿಸಬಹುದು. ಡಿಫರೆಂಟ್ ಲುಕ್ ಪಡೆಯಬಹುದು ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.

ಈ ಸುದ್ದಿಯನ್ನೂ ಓದಿ | Star Saree: ಹಳದಿ ಸೀರೆಯಲ್ಲಿ ರಶ್ಮಿಕಾ ಮಂದಣ್ಣರಂತೆ ಕಾಣಲು ಹೀಗೆ ಮಾಡಿ!

ಜೆಮೆಟ್ರಿಕಲ್ ಜ್ಯುವೆಲ್ ಪ್ರಿಯರಿಗೆ 5 ಸಿಂಪಲ್ ಟಿಪ್ಸ್

ಫಂಕಿ ಲುಕ್‌ಗೆ ಇವನ್ನು ಆಯ್ಕೆ ಮಾಡಬಹುದು.
ಕ್ಯಾಶುವಲ್ ಔಟ್‌ಫಿಟ್‌ಗೆ ಇವು ಮ್ಯಾಚ್ ಆಗುತ್ತವೆ.
ಔಟಿಂಗ್ ಹಾಗೂ ಪಾರ್ಟಿವೇರ್ ಜತೆಗೂ ಇವು ಹೊಂದುತ್ತವೆ.
ಟ್ರೆಡಿಷನಲ್ ಔಟ್‌ಫಿಟ್‌ಗೆ ಇವು ಮ್ಯಾಚ್ ಆಗುವುದಿಲ್ಲ.
ಟೀನೇಜ್ ಯುವತಿಯರಿಗೆ ಇವು ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)