Monday, 23rd December 2024

Murder Case: ಗೆಳೆಯನ ಜತೆ ಹೆಂಡತಿ, ನಾದಿನಿ ಸಲುಗೆ; ಪ್ರಶ್ನಿಸಿದ ಗಂಡನನ್ನು ಕಡಗದಿಂದ ಗುದ್ದಿ ಕೊಲೆ!

Murder Case

ಬೆಂಗಳೂರು: ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ ಗಂಡನನ್ನು ಕಡಗದಿಂದ ಮನಸೋ ಇಚ್ಛೆ ಗುದ್ದಿ ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ (36) ಎಂಬಾತನ ಮೇಲೆ ಹಲ್ಲೆಗೈದು ಸಾವಿಗೆ ಕಾರಣರಾಗಿದ್ದ ಕಾರ್ತಿಕ್ (27, ಚೇತನ್‌ ಕುಮಾರ್ ಎನ್. ಜಿ (33) ಬಂಧಿತ ಆರೋಪಿಗಳು.

ಅಭಿಷೇಕ್ ಹಾಗೂ ಆತನ ಸಹೋದರ‌ ಅವಿನಾಶ್‌, ಹಾಸನ ಜಿಲ್ಲೆಯ ಹಿರಿಸಾವೆ ಮೂಲದ ಸಹೋದರಿಯರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಸಹೋದರಿಯರಿಬ್ಬರಿಗೂ ಪರಿಚಿತನಾಗಿದ್ದ ಆರೋಪಿ ಕಾರ್ತಿಕ್, ಮನೆಗೆ ಬರುವುದು, ಫೋನ್‌ನಲ್ಲಿ ಸದಾ ಮಾತನಾಡುವುದನ್ನು ಆರಂಭಿಸಿದ್ದ. ಆರು ತಿಂಗಳ ಹಿಂದೆ ಈ ವಿಚಾರ ತಿಳಿದ ಸಹೋದರರಿಬ್ಬರು ಬುದ್ಧಿವಾದ ಹೇಳಿದಾಗ ಇಬ್ಬರ ಪತ್ನಿಯರೂ ಪತಿಯರಿಂದ ದೂರವಾಗಿದ್ದರು.

ನವೆಂಬರ್ 27ರಂದು ರಾತ್ರಿ 8 ಗಂಟೆ ಸುಮಾರಿಗೆ ಬ್ಯಾಡರಹಳ್ಳಿಯ ಅನುಪಮಾ ಸ್ಕೂಲ್ ಬಳಿ ಆರೋಪಿ ಕಾರ್ತಿಕ್‌ನನ್ನು ಭೇಟಿಯಾಗಿದ್ದ ಅಭಿಷೇಕ್, ತನ್ನ ಹೆಂಡತಿ ಹಾಗೂ ಸಹೋದರನ ಪತ್ನಿಯೊಂದಿಗೆ ಸಲುಗೆ ಮುಂದುವರಿಸದಂತೆ ಕಾರ್ತಿಕ್‌ಗೆ ತಿಳಿಸಿದ್ದ. ಆ ಸಮಯದಲ್ಲಿ ಕಾರ್ತಿಕ್ ಜತೆಗಿದ್ದ ಪತ್ನಿ ಮತ್ತು ನಾದಿನಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಆರೋಪಿ ಕಾರ್ತಿಕ್ ಹಾಗೂ ಆತನ ಸಹಚರ ಚೇತನ್ ಕುಮಾರ್, ಅಭಿಷೇಕ್‌ ಮೇಲೆ ಕೈ ಕಡಗದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ವಿಷಯ ತಿಳಿದು ಗಲಾಟೆ ಬಿಡಿಸಲು ಹೋದ ಸಹೋದರ ಅವಿನಾಶ್ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು.

ಇಬ್ಬರ ಬಂಧನ
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಭಿಷೇಕ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಅಭಿಷೇಕ್ ಮೃತಪಟ್ಟಿದ್ದಾನೆ. ಆರೋಪಿಗಳ ವಿರುದ್ಧ ಸಹೋದರ ಅವಿನಾಶ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿಗಳಾದ ಕಾರ್ತಿಕ್ ಹಾಗೂ ಚೇತನ್ ಕುಮಾರ್‌ನನ್ನು ಬಂಧಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Earthquake: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಪಿಸಿದ ಭೂಮಿ; ಸ್ಥಳೀಯರಲ್ಲಿ ಆತಂಕ

ಯುವತಿಗೆ ಕಿರುಕುಳ ನೀಡಿದ ಅಂಕಲ್‌ಗೆ ಧರ್ಮದೇಟು; ಚಪಲ ಚೆನ್ನಿಗರಾಯನ ಕೃತ್ಯಕ್ಕೆ ತಕ್ಕ ಶಾಸ್ತಿ!

Viral Video

ಭೋಪಾಲ್‌: ಇ- ರಿಕ್ಷಾದಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದು ಪಾದ ಮುಟ್ಟಿ ಕ್ಷಮೆ ಕೇಳಲು ಒತ್ತಾಯಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (Madhya Pradesh’s Gwalior) ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ. ಪಾದವ್ ಪೊಲೀಸ್ ಠಾಣಾ ವ್ಯಾಪ್ತಿಯ ( Padav police station) ಫೂಲ್‌ಬಾಗ್ ಚೌಕದಲ್ಲಿ ಇ-ರಿಕ್ಷಾದೊಳಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಯುವತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಶನಿವಾರ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇ-ರಿಕ್ಷಾದೊಳಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಯುವತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸರಗೊಂಡ ಯುವತಿ ಇ-ರಿಕ್ಷಾದಿಂದ ಹೊರಬಂದು ವ್ಯಕ್ತಿಯನ್ನು ರಿಕ್ಷಾದಿಂದ ಹೊರಗೆಳೆದು ಸಾರ್ವಜನಿಕವಾಗಿ ನಿಂದಿಸಿದ್ದಾಳೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಯುವತಿಗೆ ಸಾಥ್ ನೀಡಿದ್ದಾರೆ. ಅವರು ಸೇರಿ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದು ಯುವತಿಯ ಪಾದ ಮುಟ್ಟಿ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಸಾಕಷ್ಟು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಸಂಪೂರ್ಣ ಘಟನೆಯನ್ನು ವಿಡಿಯೋವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಆರೋಪಿ ವ್ಯಕ್ತಿ ಯುವತಿ ಮತ್ತು ಮಹಿಳೆಯ ಪಾದಗಳನ್ನು ಮುಟ್ಟಿ ಕ್ಷಮೆ ಯಾಚಿಸುತ್ತಿರುವುದನ್ನು ಕಾಣಬಹುದು. ಈ ಕುರಿತು ಪ್ರತಿಕ್ರಿಯಿಸಿರುವ ಪಾದವ್ ಠಾಣೆ ಪೊಲೀಸರು, ಈ ಬಗ್ಗೆ ಯುವತಿ ಇನ್ನೂ ಔಪಚಾರಿಕವಾಗಿ ದೂರು ದಾಖಲಿಸಿಲ್ಲ ಎಂದು ತಿಳಿಸಿದ್ದಾರೆ. ದೂರು ನೀಡಿದರೆ ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಸರು.

Viral Video: ಮಹಿಳೆಗೆ ಡಿಕ್ಕಿ ಹೊಡೆದು ಕೆಲ ದೂರ ಎಳೆದೊಯ್ದ ಕಾರು- ಭೀಕರ ದೃಶ್ಯ ವೈರಲ್

ಕಳೆದ ಎಪ್ರಿಲ್‌ನಲ್ಲಿ ಭೋಪಾಲ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಇದರಲ್ಲಿ ಯುವತಿಯೊಬ್ಬಳು ಆರೋಪಿಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.