Thursday, 5th December 2024

IPL 2025: ಆರ್‌ಸಿಬಿಗೆ ವಿರಾಟ್‌ ಕೊಹ್ಲಿಯೇ ನಾಯಕ ಎನ್ನಲು ಕಾರಣ ತಿಳಿಸಿದ ಆರ್‌ ಅಶ್ವಿನ್‌!

IPL 2025: 'Virat Kohli is going to captain': Ravichandran Ashwin predicts Royal Challengers Bengaluru skipper

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನಾಯಕ ಯಾರಾಗುತ್ತಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಅವರು, ಆರ್‌ಸಿಬಿಗೆ ವಿರಾಟ್‌ ಕೊಹ್ಲಿ ನಾಯಕರಾಗಬೇಕೆಂದು ಹೇಳಿದ್ದರು. ಅದರಂತೆ ಇದೀಗ ಟೀಮ್‌ ಇಂಡಿಯಾ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಕೂಡ ಆರ್‌ಸಿಬಿಗೆ ವಿರಾಟ್‌ ಕೊಹ್ಲಿಯೇ ನಾಯಕರಾಗಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

2022ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ ಫಾಫ್‌ ಡು ಪ್ಲೆಸಿಸ್‌ ಅವರನ್ನು ಖರೀದಿಸಿದ್ದ ಬೆಂಗಳೂರು ಫ್ರಾಂಚೈಸಿ ನಾಯಕತ್ವವನ್ನು ನೀಡಿತ್ತು. ಅದರಂತೆ ಅವರು ಮೂರು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು. ಆದರೆ, ಇವರ ನಾಯಕತ್ವದಲ್ಲಿಯೂ ಬೆಂಗಳೂರು ತಂಡ ಚೊಚ್ಚಲ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಫಾಫ್‌ ಡು ಪ್ಲೆಸಿಸ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಆರ್‌ಟಿಎಂ ಮೂಲಕ ಉಳಿಸಿಕೊಳ್ಳಲು ನಿರಾಕರಿಸಿತ್ತು. ಅಂತಿಮವಾಗಿ ಫಾಫ್‌ ಡೆಲ್ಲಿ ಕ್ಯಾಪಿಟಲ್ಸ್‌ ಪಡೆಗೆ ಸೇರ್ಪಡೆಯಾಗಿದ್ದಾರೆ.

IPL 2025: ʻರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ವಿರಾಟ್‌ ಕೊಹ್ಲಿಯೇ ನಾಯಕʼ-ಎಬಿ ಡಿವಿಲಿಯರ್ಸ್!

ಮತ್ತೊಂದು ಕಡೆ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿರುವ ಯಾವುದೇ ಆಟಗಾರ ನಾಯಕನಾಗುವ ಯಾವುದೇ ಅರ್ಹತೆಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಕ್ಯಾಪ್ಟನ್ಸಿಗೆ ಮರಳಬಹುದೆಂದು ಹೇಳಲಾಗುತ್ತಿದೆ. ಅದರಂತೆ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕನಾಗುವುದು ಖಚಿತ ಎಂದು ಆರ್‌ ಅಶ್ವಿನ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

“ರಾಯಲ್‌ ಚಾಲೆಂಜರರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿಯೇ ನಾಯಕನಾಗಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ನಾಯಕನನ್ನು ಹುಡುಕಲಿಲ್ಲ ಎಂಬುದು ನನ್ನ ಭಾವನೆ. ಅಲ್ಲದೆ ತಂಡದಲ್ಲಿಯೂ ಕೂಡ ನಾಯಕರಾಗುವ ಅರ್ಹತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡಕ್ಕೆ ವಿರಾಟ್‌ ಕೊಹ್ಲಿ ಬಿಟ್ಟು ಬೇರೆ ಯಾರೂ ಕೂಡ ನಾಯಕರಾಗುವುದಿಲ್ಲ,” ಎಂದು ತಾವು ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಆರ್‌ ಅಶ್ವಿನ್‌ ಭವಿಷ್ಯ ನುಡಿದಿದ್ದಾರೆ.

IND vs AUS: ವಿರಾಟ್‌ ಕೊಹ್ಲಿ ಅಲ್ಲ, ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಎಕ್ಸ್‌ ಫ್ಯಾಕ್ಟರ್‌ ಎಂದ ರವಿಶಾಸ್ತ್ರಿ!

ಉತ್ತಮ ಆಟಗಾರರನ್ನು ಖರೀದಿಸಿರುವ ಆರ್‌ಸಿಬಿ

2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿಯು ಒಳ್ಳೆಯ ಆಟಗಾರರನ್ನು ಖರೀದಿಸಿದೆ. ಮೊದಲನೇ ನಿರಾಶೆ ಮೂಡಿಸಿದ್ದ ಬೆಂಗಳೂರು ಫ್ರಾಂಚೈಸಿ, ಎರಡನೇ ದಿನ ಸ್ಟಾರ್‌ ಆಟಗಾರರನ್ನು ಖರೀದಿಸಿತ್ತು. ಟಿಮ್‌ ಡೇವಿಡ್‌, ಜಾಶ್‌ ಹೇಝಲ್‌ವುಡ್‌, ಫಿಲ್‌ ಸಾಲ್ಟ್‌, ಜಿತೇಶ ಶರ್ಮಾ, ಲಿಯಾಮ್‌ ಲಿವಿಂಗ್‌ಸ್ಟೋನ್‌, ಕೃಣಾಲ್‌ ಪಾಂಡ್ಯ ಸೇರಿದಂತೆ ಕೆಲ ಉತ್ತಮ ಆಟಗಾರರನ್ನು ಖರೀದಿಸಿದೆ.

“ಆರ್‌ಸಿಬಿ ಪಾಲಿಗೆ ಇದು ಭಯಾನಕ ಆಕ್ಷನ್‌ ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಅವರು ತುಂಬಾ ಸಮಯ ಕಾಯುವ ಮೂಲಕ ಒಳ್ಳೆಯ ಕಾಂಬಿನೇಷನ್‌ ಆಟಗಾರರನ್ನು ಖರೀದಿಸಿದೆ. ಹಲವು ಫ್ರಾಂಚೈಸಿಗಳು ಆತುರದಲ್ಲಿ ಸಾಕಷ್ಟು ಕೋಟಿ ರೂ. ಗಳನ್ನು ಖರ್ಚು ಮಾಡಿತು. ಆದರೆ, ಆರ್‌ಸಿಬಿ ಈ ಕೆಲಸವನ್ನು ಮಾಡಲಿಲ್ಲ. ಇವರು ತಾಳ್ಮೆಯಿಂದ ಇರುವ ಮೂಲಕ ಸರಿಯಾದ ಸಮಯದಲ್ಲಿ ಒಳ್ಳೆಯ ಆಟಗಾರರನ್ನು ಖರೀದಿಸಿತು. ಏಕೆಂದರೆ ಒಟ್ಟಾರೆ ತಂಡ ಮುಖ್ಯವಾಗಿತ್ತದೆ. ನನ್ನ 12 ಮತ್ತು 14 ಆಟಗಾರರು ತುಂಬಾ ಮುಖ್ಯ,ʼ ಎಂದು ಅಶ್ವಿನ್‌ ತಿಳಿಸಿದ್ದಾರೆ.

IPL 2025: ಆರ್‌ಸಿಬಿಗೆ ಸೇರಿದ ಬೆನ್ನಲ್ಲೆ 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಲಿಯಾಮ್ ಲಿವಿಂಗ್‌ಸ್ಟೋನ್‌!

“ನಮ್ಮ ತವರು ಕಂಡೀಷನ್ಸ್‌ನಲ್ಲಿ ಯಾವುದು ಕೆಲಸ ಮಾಡುತ್ತದೆ? ಇದರ ಆಧಾರದ ಮೇಲೆ ತಂಡವನ್ನು ಕಟ್ಟಬೇಕೆಂಬುದು ನನ್ನ ಉದ್ದೇಶ. ಆರ್‌ಟಿಎಂ ಇದ್ದರೂ ಕೂಡ ನಾನು ಅದನ್ನು ಬಳಸಿಕೊಳ್ಳಲು ಆಗುವುದಿಲ್ಲ. ನನಗೆ ಬೇಕಾದ ಆಟಗಾರರನ್ನು ಖರೀದಿಸುವ ಮೂಲಕ ಹರಾಜನ್ನು ಮುಗಿಸುತ್ತೇನೆ. ಹರಾಜಿನ ಕೊನೆಯವರೆಗೂ ತಂತ್ರವನ್ನು ಅನುಸರಿಸುತ್ತೇನೆ,” ಎಂದು ಟೀಮ್‌ ಇಂಡಿಯಾ ಸ್ಪಿನ್ನರ್‌ ಹೇಳಿದ್ದಾರೆ.