ಪಾವಗಡ: ಸ್ವಂತ ಮಾವನೇ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಹುನ್ನಾರ (Land grabbing) ನಡೆಸಿದ್ದಾರೆ ಎಂದು ಆರೋಪಿಸಿ ಭೂಮಿಯ ವಾರಸುದಾರರು, ಪಾವಗಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬಾಬಾ ಫಕೃದ್ದೀನ್ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ.
ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಪಳವಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 404/4ರ 3 ಎಕರೆ 20 ಗುಂಟೆ ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಪಳವಳ್ಳಿ ಗ್ರಾಮದ ವಾಸಿ ಬಾಬಾ ಫಕೃದ್ದೀನ್ ಹಾಗೂ ಅವರ ಕುಟುಂಬ ಸದಸ್ಯರು ಹಲ್ಲೆ ನಡೆಸಿ ದೌರ್ಜನ್ಯ ಎಸಕ್ಕಿದ್ದಾರೆ ಎಂಬುದಾಗಿ ಮೊಹಮ್ಮದ್ ಬುರ್ಹಾನ್, ಮೆಹಬೂಬ್ ಜಾನ್, ಸೋನಿರ ಬಾನು ಆರೋಪಿದ್ದಾರೆ.
ನಮ್ಮ ಅತ್ತೆ ಫಕ್ರುಬಿ ಅವರ ಜಮೀನಿನ ನಕಲಿ ದಾಖಲಾತಿಗಳು ಸೃಷ್ಟಿ ಮಾಡಿ ಮಾವ ಬಾಬಾ ಫಕೃದ್ದೀನ್ ಜಮೀನು ಕಬಳಿಸಲು ಪ್ರಯತ್ನಿಸಿದ್ದಾನೆ. ನಮ್ಮ ಅತ್ತೆ ದಿನಾಂಕ 2022ರ ಫೆ.17ರಂದು ಮತಪಟ್ಟಿದ್ದರೆ, ವಂಶವೃಕ್ಷದಲ್ಲಿ 8-4-2022ರ ಏ.8ರಂದು ಹೆಬ್ಬೆಟ್ಟು ಹಾಕಿರುವ ವಂಶವೃಕ್ಷ ಸಿದ್ಧಗೊಳಿಸಿ ಜಮೀನು ಕಬಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾನೆ. ಇನ್ನು ನಕಲಿ ದಾಖಲೆಗಳು ಸೃಷ್ಟಿ ಮಾಡಲು ಸಹಕರಿಸಿದ ಅಧಿಕಾರಿಗಳ ಮೇಲೂ ಕ್ರಮ ಕೈಗೊಂಡು ನಮಗೆ ನ್ಯಾಯ ಕಲ್ಪಿಸಬೇಕಾಗಿ ದೂರುದಾರರು ಕೋರಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಟ್ರಕ್ ಏರಿ ಯುಪಿಯಿಂದ ಬಿಹಾರಕ್ಕೆ ಬಂದ ಬೃಹತ್ ಹೆಬ್ಬಾವು! ವಿಡಿಯೊ ನೋಡಿ
ಅವಧಿ ಮುಗಿದ ಆಹಾರ ನೀಡಿದ್ದೇ ಕೋಣನಕುರಿಕೆ ಶಾಲೆಯ ಮಕ್ಕಳ ಅಸ್ವಸ್ಥತೆಗೆ ಕಾರಣ!
ಪಾವಗಡ: ತಾಲೂಕಿನ ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆ ಮಕ್ಕಳು ಅಸ್ವಸ್ಥಗೊಳ್ಳಲು ಅವಧಿ ಮುಗಿದ ಆಹಾರ ನೀಡಿದ್ದೇ ಕಾರಣ ಎಂಬ ಅಂಶ ಅಧಿಕಾರಿಗಳ ಪರಿಶೀಲನೆ ವೇಳೆ ಬಯಲಾಗಿದೆ. ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ, ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮೂರ್ನಾಲ್ಕು ಮಕ್ಕಳಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಹೀಗಾಗಿ ಅಧಿಕಾರಿಗಳು ಶಾಲೆಗೆ (Pavagada News) ಭೇಟಿ ಪರಿಶೀಲನೆ ನಡೆಸಿದಾಗ ಘಟನೆಗೆ ಕಾರಣ ತಿಳಿದು ಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು, ಶಾಲೆಗೆ ಶನಿವಾರ ಹೋಗಿ ಬಿಸಿಯೂಟಕ್ಕೆ ಬಳಸುತ್ತಿದ್ದ ಆಹಾರ ಪದಾರ್ಥಗಳು ಪರಿಶೀಲನೆ ಮಾಡಿದ್ದು, ಈ ವೇಳೆ ಸತ್ಯಾಸತ್ಯತೆ ಹೊರ ಬಂದಿದೆ. ಅವಧಿ ಮುಗಿದ ಮೂರ್ನಾಲ್ಕು ತಿಂಗಳ ನಂತರದ ಆಹಾರ ಪದಾರ್ಥಗಳನ್ನು ನೀಡಿದ್ದೇ, ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ಕಾರಣ ತಿಳಿದು ಬಂದಿದೆ.
ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲನೆ ಮಾಡಿದಾಗ ಈ ವಿಷಯ ಬಹಿರಂಗಪಟ್ಟಿದೆ. ಇನ್ನು ಶಾಲೆಗಳಿಗೆ ಮೇಲಧಿಕಾರಿಗಳು ಸರಿಯಾಗಿ ಭೇಟಿ ನೀಡುತ್ತಿಲ್ಲ, ಮೂಲಭೂತ ಸೌಕರ್ಯಗಳು ಇಲ್ಲ. ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಗೆಳೆಯನ ಜತೆ ಹೆಂಡತಿ, ನಾದಿನಿ ಸಲುಗೆ; ಪ್ರಶ್ನಿಸಿದ ಗಂಡನನ್ನು ಕಡಗದಿಂದ ಗುದ್ದಿ ಕೊಲೆ!