ಲಕ್ನೋ: ಕೆಲವರು ಮೊಬೈಲ್ ಚಾರ್ಚ್ಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಈಗಾಗಲೇ ಮೊಬೈಲ್ ಚಾರ್ಜರ್ನ ಶಾಕ್ ಹೊಡೆದು ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಆದರೂ ಜನ ಮತ್ತದೇ ತಪ್ಪು ಮಾಡುತ್ತಿರುತ್ತಾರೆ. ಈಗ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಚಾರ್ಜ್ನಲ್ಲಿದ್ದ ಫೋನ್ ತೆಗೆಯುವಾಗ ಕರೆಂಟ್ ಶಾಕ್ ಹೊಡೆದು(Electric Shock) ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಲ್ಲಿಯಾ ಗ್ರಾಮವೊಂದರಲ್ಲಿ ಇತ್ತೀಚೆಗೆ ನಡೆದಿದೆ.
ಪೊಲೀಸರ ಪ್ರಕಾರ, ಸಾರಂಗ್ಪುರ ಗ್ರಾಮದ ನಿವಾಸಿ ನೀತು (22) ಎಂಬುವವರು ಮೊಬೈಲ್ ಫೋನ್ ಅನ್ನು ಚಾರ್ಚ್ನಿಂದ ತೆಗೆಯುತ್ತಿದ್ದಾಗ ಕರೆಂಟ್ ಶಾಕ್ ಹೊಡೆದಿದೆ. ಆಗ ಅವರು ಕಿರುಚಾಟ ಕೇಳಿ ಜನ ಅವರ ಬಳಿ ಬಂದಾಗ ಅವರು ಫೋನ್ಗೆ ಅಂಟಿಕೊಂಡಿರುವುದನ್ನು ನೋಡಿದ್ದಾರೆ. ಅವರು ಕೋಲಿನಿಂದ ಬಡಿದು ಬೇರ್ಪಡಿಸಿ ಬನ್ಸ್ದಿಹ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ನೀತು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಬನ್ಸ್ದಿಹ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕಟ್ರ್ (ಎಸ್ಎಚ್ಒ) ಸಂಜಯ್ ಸಿಂಗ್ ತಿಳಿಸಿದ್ದಾರೆ. ಮತ್ತು ಈ ಪ್ರಕರಣದಲ್ಲಿ ಕುಟುಂಬದಿಂದ ಯಾವುದೇ ದೂರು ಬಂದಿಲ್ಲ ಎನ್ನಲಾಗಿದೆ.
ಈ ಮಧ್ಯೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಯಂತ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕರಿಯಾ ಖುರ್ದ್ ಗ್ರಾಮದಲ್ಲಿ, ಇತ್ತೀಚೆಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಹಥೌಡಿ ಗ್ರಾಮದ ಬಿಂದು ದೇವಿ (50) ಸಂಜೆ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಭತ್ತದ ಕೊಯ್ಲು ಯಂತ್ರ ಅವರಿಗೆ ಡಿಕ್ಕಿ ಹೊಡೆದಿದೆ. ಚಿಕಿತ್ಸೆಗೆಂದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರಂತೆ.
ಇದನ್ನೂ ಓದಿ:ಕಾಲಭೈರವನಿಗೆ ಸಿಗರೇಟ್ ಅರ್ಪಿಸಿದ ಭೂಪ; ನೆಟ್ಟಿಗರಿಂದ ಆಕ್ರೋಶ
ಬಿಂದು ದೇವಿ ಅವರ ಪತಿ ರಾಧಾ ಕಿಶನ್ ರಾಮ್ ನೀಡಿದ ದೂರಿನ ಮೇರೆಗೆ ಕೊಯ್ಲು ಯಂತ್ರದ ಅಪರಿಚಿತ ಚಾಲಕನ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಗಡ್ವಾರ್ ಪೊಲೀಸ್ ಠಾಣೆಯ ಉಸ್ತುವಾರಿ ಮೂಲ್ ಚಂದ್ ಚೌರಾಸಿಯಾ ತಿಳಿಸಿದ್ದಾರೆ.