ಲಕ್ನೋ: ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಆಸ್ಪತ್ರೆಯೊಂದರ ಹೊರಗೆ ವ್ಯಕ್ತಿಯೊಬ್ಬರನ್ನು ಐದಾರು ಕಿಡಿಗೇಡಿಗಳು ಸೇರಿ ಕ್ರೂರವಾಗಿ ಥಳಿಸಿದ್ದು ಕೊಲೆಗೈದಿರುವ(Murder Case), ಈ ಘಟನೆಯ ದೃಶ್ಯ ಆಸ್ಪತ್ರೆಯ ಹೊರಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ವ್ಯಕ್ತಿಯ ತಲೆಬುರುಡೆ ಒಡೆದಿದ್ದು ಆತ ಸಾವನ್ನಪ್ಪಿದ್ದಾನೆ(UP horror).
ಅನಿರುದ್ಧ್ ರೈ ಸಾವನ್ನಪ್ಪಿದ ವ್ಯಕ್ತಿ. ಇವರು ಭೂ ವಿವಾದದ ಬಗ್ಗೆ ವಾಗ್ವಾದ ನಡೆಸಿದ ನಂತರ ಇತ್ತೀಚೆಗೆ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ. ರೈ ಅವರು ಆಸ್ಪತ್ರೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕುಗಳಲ್ಲಿ ಬಂದ ಐದರಿಂದ ಆರು ಮಂದಿ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
यूपी के आजमगढ़ जिला अस्पताल में हुई मारपीट में घायल अनिरुद्ध राय की मौत…?
— Ajai Bhadauria (@AjaiBhadauriya) December 2, 2024
चिकित्सालय का CCTV फुटेज आया सामने…!
पुलिस और गार्ड के सामने युवक को पीटा गया।
आजमगढ़ के कंधरापुर थाना क्षेत्र का मामला…@myogiadityanath @brajeshpathakup @Uppolice ये कैसा #रामराज्य …??? pic.twitter.com/WthZWKSvgS
ಸಿಸಿಟಿವಿಯಲ್ಲಿ ರೆಕಾರ್ಡ್ ಆದ ವಿಡಿಯೊದಲ್ಲಿ ದಾಳಿಕೋರರು ರೈ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಈ ನಡುವೆ ರೈ ಅವರನ್ನು ಥಳಿಸದಂತೆ ಆರೋಪಿಗಳನ್ನು ತಡೆಯಲು ಮಹಿಳೆಯೊಬ್ಬರು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೆಲವು ಸೆಕೆಂಡುಗಳ ನಂತರ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹಲವಾರು ಜನ ಸುತ್ತಲೂ ನಿಂತಿದ್ದರು. ಯಾರು ಅವರ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ. ಅವರನ್ನು ವಾರಣಾಸಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆತ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ರೈ ಅವರ ತಲೆಬುರುಡೆ ಬಲವಾದ ಏಟು ಬಿದ್ದು ಬುರುಡೆ ಒಡೆದಿದೆ. ಇದು ಅವರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಪೊಲೀಸರು ತಂಡಗಳನ್ನು ರಚಿಸಿದ್ದು, ಆರೋಪಿಗಳನ್ನು ಹುಡುಕುತ್ತಿದ್ದಾರೆ. ಪವನ್ ರೈ ಎಂಬ ವ್ಯಕ್ತಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
“ನಾವು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ದೇವೆ. ಶೀಘ್ರದಲ್ಲೇ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ” ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಲಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಚಾರ್ಜ್ನಿಂದ ಮೊಬೈಲ್ ತೆಗೆಯುವಾಗ ಕರೆಂಟ್ ಶಾಕ್! ಮಹಿಳೆ ದಾರುಣ ಸಾವು
ಈ ಹಿಂದೆ ಕೂಡ ಬೈಕ್ ಸವಾರನೊಬ್ಬ ವೃದ್ಧ ಪಾದಚಾರಿಯೊಬ್ಬರ ಮೇಲೆ ಕ್ರೂರವಾಗಿ ದಾಳಿ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅವರು ಸಾವನ್ನಪ್ಪಿದ ಘಟನೆ ಹೈದರಾಬಾದ್ನ ಅಲ್ವಾಲ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿತ್ತು. 65 ವರ್ಷದ ಆಂಜನೇಯಲು ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್ ಸವಾರನಿಗೆ ನಿಧಾನವಾಗಿ ಹೋಗುವಂತೆ ಹೇಳಿದಕ್ಕೆ ಆತ ಕೋಪಗೊಂಡು ವೃದ್ಧ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.