ಆಗ್ರಾ: ತಾಯಿಯನ್ನು ಕರುಣಾಮಯಿ ಎಂದು ಕರೆಯುತ್ತಾರೆ. ಆದರೆ ಇಲ್ಲೊಬ್ಬ ತಾಯಿ ಮಾಡಿದ ಘನಕಾರ್ಯ ನೋಡಿದರೆ ಅಸಹ್ಯ ಪಡುವಂತಿದೆ. ಉತ್ತರ ಪ್ರದೇಶದ ಆಗ್ರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ನವಜಾತ ಶಿಶುವೊಂದು(Newborn Baby Rescue) ಅನಾಥವಾಗಿ ಪತ್ತೆಯಾಗಿದೆ. ವೈಟಿಂಗ್ ರೂಂನಲ್ಲಿ ಮಗು ನೆಲದ ಮೇಲೆ ಬಿದ್ದಿರುವುದನ್ನು ಜನರು ನೋಡಿದ್ದಾರೆ. ಆದರೆ ಹೊಕ್ಕುಳಬಳ್ಳಿ ಇನ್ನೂ ಹಾಗೇ ಇದ್ದುದರಿಂದ ಮಗು ಕೆಲವು ಕ್ಷಣಗಳ ಹಿಂದೆ ಜನಿಸಿದೆ ಎಂಬುದು ತಿಳಿಯುತ್ತದೆ. ಮಗುವಿನ ತಾಯಿ ನವಜಾತ ಶಿಶುವಿಗೆ ಜನ್ಮ ನೀಡಿ ಅದನ್ನು ನಿಲ್ದಾಣದಲ್ಲಿ ಬಿಟ್ಟು ನಂತರ ಕಣ್ಮರೆಯಾಗಿದ್ದಾಳೆ.
ರೈಲ್ವೆ ನಿಲ್ದಾಣದಲ್ಲಿದ್ದ ಜನರು ಮಗು ಅಳುವುದನ್ನು ಕೇಳಿದ ನಂತರ ಆಶ್ಚರ್ಯಚಕಿತರಾಗಿ ಮಗುವನ್ನು ಹುಡುಕಲು ಶುರುಮಾಡಿದ್ದಾರೆ. ಆದರೆ ರೈಲ್ವೆ ನಿಲ್ದಾಣದ ವೈಟಿಂಗ್ ರೂಂನ ಹೊರಗೆ ಮಗು ಅನಾಥವಾಗಿ ಮಲಗಿರುವುದನ್ನು ನೋಡಿ ಜನರು ಆಘಾತಕ್ಕೊಳಗಾದರು. ತಕ್ಷಣ ಜನರು ಈ ಘಟನೆಯನ್ನು ಕಂಟೋನ್ಮೆಂಟ್ ಜಿಆರ್‌ಪಿ (ಸರ್ಕಾರಿ ರೈಲ್ವೆ ಪೊಲೀಸ್) ಗೆ ತಿಳಿಸಿದ್ದಾರೆ. ನಂತರ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅವರು ಮಗುವನ್ನು ಎಸ್ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಅಲ್ಲಿ ಮಗುವಿನ ಹೊಕ್ಕುಳ ಬಳ್ಳಿಯನ್ನು ಕತ್ತರಿಸಲಾಯಿತು. ಮಗುವನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು, ನವಜಾತ ಶಿಶುವಿನ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
यूपी में आगरा कैंट स्टेशन के वेटिंग रूम के फर्श पर आज लोगों ने एक नवजात बच्चे को पड़ा देखा. बच्चा का जन्म कुछ देर पहले ही हुआ था और उसकी नाल भी नहीं कटी थी,
— Madan Mohan Soni (आगरा वासी) (@madanjournalist) December 2, 2024
लेकिन अचंभित करने वाली बात ये है कि बच्चे को जन्म देने के बाद ही उसकी मां गायब थी. वह उसे फर्श पर पड़ा छोड़कर चली गई थी. pic.twitter.com/P6sIIz70n8
ಅಪರಿಚಿತ ಮಹಿಳೆ ವೈಟಿಂಗ್ ರೂಂನ ಶೌಚಾಲಯದ ಹೊರಗೆ ಮಗುವಿಗೆ ಜನ್ಮ ನೀಡಿದ ಘಟನೆ ಸಂಭವಿಸಿದೆ ಎಂದು ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವಜಾತ ಶಿಶುವಿನ ತಾಯಿಯನ್ನು ಪತ್ತೆ ಮಾಡಲು ಹುಡುಕಾಟ ಆರಂಭಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಮಾಯಣ ನಾಟಕ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಹಂದಿಯನ್ನು ಕೊಂದು ಹಸಿ ಮಾಂಸ ತಿಂದ ನಟ! ವಿಡಿಯೊ ಇದೆ
ರೈಲ್ವೆ ನಿಲ್ದಾಣದಲ್ಲಿದ್ದ ಜನರು ಮಗುವನ್ನು ಆರೈಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಅವರಲ್ಲಿ ಕೆಲವರು ಮಗುವನ್ನು ತಮಗೆ ನೀಡುವಂತೆ ಅಧಿಕಾರಿಗಳನ್ನು ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಮಗುವನ್ನು ಯಾರಿಗೂ ನೀಡದೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಜಿಆರ್‌ಪಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ನವಜಾತ ಶಿಶುವನ್ನು ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.