Thursday, 31st October 2024

ಗ್ರಾ.ಪಂ ಚುನಾವಣೆಗೆ ಇಂದು ಅಧಿಸೂಚನೆ, ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು : ರಾಜ್ಯದ 5,762 ಗ್ರಾಮಪಂಚಾಯಿತಿಗಳಿಗೆ ಡಿ.22 ಮತ್ತು 27 ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆಗೆ ಸೋಮವಾರ (ಇಂದು) ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವೂ ಆರಂಭವಾಗಲಿದೆ.

ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಿದ್ದು, ಮೊದಲ ಹಂತದಲ್ಲಿ 117 ತಾಲೂಕುಗಳು, 3,042 ಗ್ರಾಮ ಪಂಚಾಯಿತಿಗಳಿಗೆ ಡಿ.22 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಡಿ.11 ಕೊನೆಯ ದಿನವಾಗಿದ್ದು, ಡಿ. 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಗೆ ಡಿ. 14 ಕಡೇ ದಿನವಾಗಿದೆ. ಡಿಸೆಂಬರ್ 22 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.