ಮುಂಬೈ: ಬಾಲಿವುಡ್‌ನ ಖ್ಯಾತ ನಟ ವಿಕ್ರಾಂತ್ ಮಾಸ್ಸೆ (Vikrant Massey ) ಇತ್ತೀಚೆಗೆ ತಮ್ಮ ಚಿತ್ರರಂಗಕ್ಕೆ ವಿದಾಯ ಹೇಳಿ ಕೊಂಚ ಬಿಡುವು ತೆಗೆದುಕೊಳ್ಳುತ್ತೇನೆ ಎಂದು ಘೋಷಿಸಿದ್ದರು. 12th ಫೇಲ್ ಹಾಗೂ ದಿ ಸಬರಮತಿ ರೀಪೋರ್ಟ್‌ನಂತಹ ಹಿಟ್ ಚಿತ್ರಗಳನ್ನು ನೀಡಿದ ನಟನ ದಿಢೀರ್ ನಿವೃತ್ತಿ, ಸಿನಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಇದೀಗ ನಿರ್ದೇಶಕರೊಬ್ಬರು ಮಾಸ್ಸೆ ನಿವೃತ್ತಿಯ ಹಿಂದಿನ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. (Viral news)
ಇನ್ಸ್ಟಾಗ್ರಾಂನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಹಂಚಿಕೊಂಡಿದ್ದ ವಿಕ್ರಾಂತ್ ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ನಿಮ್ಮೆಲ್ಲರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ. ಈಗ ಮುಂದೆ ಹೆಜ್ಜೆ ಇಡುತ್ತಾ.. ಮನೆಗೆ ಹಿಂತಿರುಗಲು ಇದು ಸಮಯ ಎಂದು ನಾನು ಅರಿತುಕೊಂಡಿದ್ದೇನೆ. ಪತಿಯಾಗಿ, ತಂದೆ ಮತ್ತು ಮಗನಾಗಿ, ಮತ್ತು ನಟನಾಗಿಯೂ ಸಹ. ಆದ್ದರಿಂದ 2025 ರಲ್ಲಿ, ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗುತ್ತೇವೆ. ಕಳೆದ 2 ಚಲನಚಿತ್ರಗಳು ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ಎಂದೆಂದಿಗೂ ಋಣಿ’’ ಎಂದು ನಟ ಪೋಸ್ಟ್ ಹಾಕಿದ್ದರು.
ಆದರೆ ನಟ ತಮ್ಮ ನಿವೃತ್ತಿ ಹಿಂದಿನ ಕಾರಣವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ನಿರ್ದೇಶಕರೊಬ್ಬರು ವಿಕ್ರಾಂತ್ ನಿವೃತ್ತಿಯ ಬಗ್ಗೆ ಮಾತನಾಡಿದ್ದು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು ವಿಕ್ರಾಂತೆ ಮಾಸ್ಸೆ ಈ ನಿರ್ಧಾರಕ್ಕೆ ಬಲವಾದ ಕಾರಣವಿದೆ. ಅವರು ಎಲ್ಲವನ್ನೂ ಯೋಚಿಸಿಯೇ ನಿವೃತ್ತಿ ತೆಗೆದುಕೊಂಡಿದ್ದಾರೆ. ಈಗಾಗಲೇ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದಿವೆ. ಆದರೆ ಮಾಸ್ಸೆ ತನ್ನನ್ನು ತಾನು ಅತಿಯಾಗಿ ಎಕ್ಸ್‌ಪೋಸ್ ಮಾಡಲು ಹೆದರುತ್ತಿದ್ದರು. ತೆರೆ ಮೇಲೆ ತನ್ನನ್ನು ನೋಡಿ ಜನರಿಗೆ ಬಹಳ ಬೇಗ ಬೇಸರ ಬರಬಹುದು ಎಂಬ ಆಲೋಚನೆಯಿಂದ ಕೊಂಚ ವಿರಾಮ ತೆಗೆದುಕೊಂಡಿರಬಹುದು ಎಂದಿದ್ದಾರೆ.
ಅವರು ಬಹಳ ಉತ್ಸುಕವಿರುವಂತಹ ವ್ಯಕ್ತಿ. ಎನೋ ದೊಡ್ಡ ಯೋಜನೆಯನ್ನೇ ಇಟ್ಟುಕೊಂಡಿದ್ದಾರೆ. ಸಂಪೂರ್ಣ ಹೊಸತನದಿಂದ ತೆರೆ ಮೇಲೆ ಕಾಣಿಸಿಕೊಳ್ಳುವ ಯೋಜನೆಯೂ ಇರಬಹುದು ಎಂದು ಹೇಳಿದ್ದಾರೆ. ಮತ್ತೊಂದು ವಿಷಯ ಬಹಿರಂಗ ಪಡಿಸಿದ ಅವರು ಈ ವಿರಾಮವು ಡಾನ್ 3 ನೊಂದಿಗೆ ಏನನ್ನಾದರೂ ಸಂಬಂಧ ಹೊಂದಿರಬಹುದು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Vikrant Massey: ʻದಿ ಸಬರಮತಿ ರಿಪೋರ್ಟ್ʼ ಸಿನಿಮಾದ ನಂತರ ನನ್ನ 9 ತಿಂಗಳ ಮಗನಿಗೂ ಬೆದರಿಕೆ ಬರ್ತಾ ಇದೆ; ನಟ ವಿಕ್ರಾಂತ್ ಮಾಸ್ಸೆ ಆತಂಕ