Friday, 27th December 2024

Nail Art Expert Interview: ಯುವತಿಯರನ್ನು ಆಕರ್ಷಿಸುತ್ತಿರುವ ನೇಲ್ ಆರ್ಟ್ ಟ್ರೆಂಡ್ ಬಗ್ಗೆ ಇಲ್ಲಿದೆ ಉಪಯುಕ್ತ ಟಿಪ್ಸ್

Nail Art Expert Interview

ಸಂದರ್ಶನ: ಶೀಲಾ ಸಿ. ಶೆಟ್ಟಿ

ಇತ್ತೀಚೆಗೆ ಬ್ಯೂಟಿ ಲೋಕದಲ್ಲಿ ನೇಲ್ ಆರ್ಟ್ ಡಿಸೈನ್ಸ್ ಟ್ರೆಂಡ್‌ನದ್ದೇ ಮಾತು! ಹೌದು, ನೇಲ್ ಆರ್ಟ್ ಎಂಬುದು ಇತ್ತೀಚೆಗೆ ಯುವತಿಯರ, ಮಹಿಳೆಯರ ಬ್ಯೂಟಿ ಲಿಸ್ಟ್ ಸೇರಿದೆ. ವೈವಿಧ್ಯಮಯ ಡಿಸೈನ್‌ಗಳಿಂದ ಸೌಂದರ್ಯ ಪ್ರಿಯರನ್ನು ಬರಸೆಳೆದಿದೆ. ಸ್ಟಾರ್, ಸೆಲೆಬ್ರೆಟಿಗಳಿಂದಿಡಿದು ಸಾಮಾನ್ಯ ಮಾನಿನಿಯರನ್ನು ಆಕರ್ಷಿಸಿದೆ ಎನ್ನುತ್ತಾರೆ ಕಾಸ್ಮಿಕ್ ಲ್ಯಾಶಸ್ ಮತ್ತು ನೇಲ್ಸ್ (ಕ್ಲಾನ್) ಸಂಸ್ಥಾಪಕಿ ಹಾಗೂ ನೇಲ್ ಆರ್ಟ್ ಎಕ್ಸ್‌ಪರ್ಟ್ (Nail Art Expert Interview) ರಂಜಿತಾ ಅಮರ್‌ನಾಥ್.

ವಿಶ್ವವಾಣಿ ನ್ಯೂಸ್‌ನೊಂದಿಗೆ ನೇಲ್ ಆರ್ಟ್ ಬಗ್ಗೆ ನೀಡಿದ ಸಂದರ್ಶನದಲ್ಲಿ ನೇಲ್ ಆರ್ಟ್ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿರುವ ಅವರು ಟ್ರೆಂಡ್, ಫ್ಯಾಷನ್ ಫಾಲೋ ಮಾಡುವ ಬಗ್ಗೆ ತಿಳಿಸಿದ್ದಲ್ಲದೇ, ಓದುಗರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

ರಂಜಿನಿ ಅಮರ್‌ನಾಥ್, ನೇಲ್ ಆರ್ಟ್ ಎಕ್ಸ್‌ಪರ್ಟ್

ಮೊದಲೆಲ್ಲಾ ಸೆಲೆಬ್ರೆಟಿಗಳ ಬ್ಯೂಟಿ ಲಿಸ್ಟ್‌ನಲ್ಲಿದ್ದ ನೇಲ್ ಆರ್ಟ್ ಡಿಸೈನ್ಸ್ ಇದೀಗ ಸಾಮಾನ್ಯ ಮಹಿಳೆಯರನ್ನು ತಲುಪಿದೆ. ಈ ಬಗ್ಗೆ ಹೇಳಿ?

ಇಂದು ಸೆಲೆಬ್ರೆಟಿಗಳ ಮುಖಾಂತರ ಸಾಮಾನ್ಯ ಯುವತಿಯರು ಕೂಡ ನೇಲ್ ಆರ್ಟ್ ನತ್ತ ಮುಖ ಮಾಡುತ್ತಿದ್ದಾರೆ. ಅವರವರ ಕ್ಷೇತ್ರಕ್ಕೆ ಅನುಗುಣವಾಗಿ ಡಿಸೈನ್ಸ್ ಕಸ್ಟಮೈಸ್ಡ್ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು.

ಚಿತ್ರಕೃಪೆ: ಕಾಸ್ಮಿಕ್ ಲ್ಯಾಶಸ್ & ನೇಲ್ಸ್

ನೇಲ್ ಆರ್ಟ್ ಡಿಸೈನ್ಸ್ ಕೇವಲ ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವೇ?

ಖಂಡಿತಾ ಇಲ್ಲ! ಕಾರ್ಯಕ್ರಮಗಳನ್ನು ಅಟೆಂಡ್ ಮಾಡುವಾಗ ಮಾತ್ರವಲ್ಲ, ನಮ್ಮ ದಿನಚರಿಯ ಬ್ಯೂಟಿ ಕಾನ್ಸೆಪ್ಟ್‌ನಲ್ಲೂ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ನ್ಯಾಚುರಲ್ ಆಗಿ ಕಾಣಬಹುದಾದ ಯಾವುದೇ ಎಕ್ಸ್‌ಟೆನ್ಷನ್ ಬಳಸದೇ ಇರುವ ಉಗುರುಗಳಿಗೆ ಕಡಿಮೆ ಸಮಯದಲ್ಲಿ, ಸಿಂಪಲ್ ಅಥವಾ ಆಕರ್ಷಕ ಡಿಸೈನ್ ಮಾಡಬಹುದಾದ ಜೆಲ್ ಪಾಲಿಶ್ ನೇಲ್ ಆರ್ಟ್‌ ಅನ್ನು ಉದ್ಯೋಗಸ್ಥ ಯುವತಿಯರು ಡಿಸೈನ್ ಮಾಡಿಸಬಹುದು.

ಯಾವ ಬಗೆಯ ನೇಲ್ ಆರ್ಟ್ ಡಿಸೈನ್ಸ್ ಸದ್ಯ ಟ್ರೆಂಡ್‌ನಲ್ಲಿದೆ?

ವೆಡ್ಡಿಂಗ್ ಥೀಮ್, ಬೇಬಿ ಶವರ್ ಥೀಮ್ ಹಾಗೂ ಸೀಸನ್ ಡಿಸೈನ್ಸ್!

ಸೆಲೆಬ್ರೆಟಿಗಳಂತೆ ಕಾಣಿಸಲು ಯಾವ ಬಗೆಯ ನೇಲ್ ಆರ್ಟ್ ಡಿಸೈನ್ ಮಾಡಿಸಬೇಕಾಗುತ್ತದೆ?

ಅಕ್ರಾಲಿಕ್ ನೇಲ್ ಆರ್ಟ್ ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಇನ್ನು, ಹೊಳೆಯುವ ಸ್ವರೋಸ್ಕಿ ಸ್ಟೋನ್‌ಗಳನ್ನು ಬಳಸಿ ಮಾಡುವ, ಡಿಸೈನ್‌ನಂತೂ ಅಮೋಘ!

ನೇಲ್ ಆರ್ಟ್ ಡಿಸೈನ್ ಮಾಡಿಸಿದರೆ ಮನೆಕೆಲಸ ಮಾಡಬಹುದೇ?

ಖಂಡಿತಾ, ಮಾಡಬಹುದು. ಎಕ್ಸ್‌ಟೆನ್ಷನ್ ಮಾಡಿಸಿದಲ್ಲಿ, ಉಗುರುಗಳನ್ನು ಬಳಸುವಾಗ ಕೊಂಚ ಜಾಗ್ರತೆ ವಹಿಸಬೇಕು. ಇನ್ನು, ನ್ಯಾಚುರಲ್ ಉಗುರಿಗೆ ಡಿಸೈನ್ ಮಾಡಿಸಿದಲ್ಲಿ, ಎಷ್ಟೇ ಕೆಲಸ ಮಾಡಿದರೂ, ನೀರಿನಲ್ಲಿ ಕೈ ಅದ್ದಿದರೂ ಬಣ್ಣ ಮಾಸದು.

ಈ ಸುದ್ದಿಯನ್ನೂ ಓದಿ | Suryakanti Jumki Fashion: ಹುಡುಗಿಯರನ್ನು ಸೆಳೆದ 3 ಬಗೆಯ ಸೂರ್ಯಕಾಂತಿ ಜುಮಕಿಗಳಿವು

ನೇಲ್ ಆರ್ಟ್ ಪ್ರಿಯರಿಗೆ ನೀವು ನೀಡುವ ಸಿಂಪಲ್ 5 ಟಿಪ್ಸ್?

  • ನಿಮ್ಮ ಸ್ಕಿನ್ ಟೋನ್‌ಗೆ ಅನುಗುಣವಾಗಿ ಡಿಸೈನ್ ಮಾಡಿಸಿ.
  • ನ್ಯಾಚುರಲ್ ಲುಕ್ ನೀಡುವ ಡಿಸೈನ್ ಕೂಡ ನಿಮ್ಮದಾಗಿಸಿಕೊಳ್ಳಬಹುದು.
  • ಉಗುರು ಬೆಳೆದ ನಂತರವೂ ನೇಲ್ ಆರ್ಟ್ ಡಿಸೈನ್ಸ್ ಕೆಲಕಾಲ ಕಾಪಾಡಲು ಫಿಲ್ಲರ್ ಮಾಡಿಸಬಹುದು.
  • ಸೀಸನ್‌ಗೆ ತಕ್ಕ ನೇಲ್ ಆರ್ಟ್ ಮಾಡಿಸಿ, ಟ್ರೆಂಡ್ ಸೆಟ್ಟರ್ ಆಗಬಹುದು.
  • ಯಾವುದೇ ಚಿತ್ರವನ್ನು ತೋರಿಸಿ, ಕಸ್ಟಮೈಸ್ಡ್ ಡಿಸೈನ್ ಮಾಡಿಸಬಹುದು.

(ಲೇಖಕಿ ಫ್ಯಾಷನ್ ಪತ್ರಕರ್ತೆ)