ಬೆಂಗಳೂರು: ಕಳೆದ ಎರಡು ಮೂರು ದಿನದ ಹಿಂದೆ ತನ್ನ ಮನೆಯೆ ಬಾಲ್ಕನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ(Self Harming) ಮಾಡಿಕೊಂಡಿದ್ದ ಯುವತಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿ ಮೊಬೈಲ್ ಪೌಚ್ ನಲ್ಲಿ ಸಿಕ್ಕ ಡೆತ್ ನೋಟ್ ನಲ್ಲಿ ಯುವತಿ ಸಾವಿನ ಸೀಕ್ರೆಟ್ ರಿವೀಲ್ ಆಗಿದ್ದು, ಆಕೆ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನ ರಾಜಾಜಿನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಅವರು ಇಬ್ಬರು ಕಾಲೇಜಿನಲ್ಲಿ ಕ್ಲಾಸ್ಮೇಟ್ಗಳು. ಚೆನ್ನಾಗಿ ಓದಿದ್ರೆ ಒಳ್ಳೆಯ ಕೆಲಸ ಮಾಡ್ಕೊಂಡು ಲೈಫ್ ಸೆಟಲ್ ಮಾಡ್ಕೋತಿದ್ರು. ಆದರೆ ಆನ್ ಲೈನ್ ಗೇಮಿಂಗ್ ನಲ್ಲಿ ಗೀಳಿಗೆ ಬಿದ್ದಿದ್ದರು. ಗೇಮ್ ಜೊತೆ BMW ಆಸೆಗೆ ಗೆಳೆಯನಿಗೆ ಚಿನ್ನಾಭರಣ ಕೊಟ್ಟಿದ್ದ ಯುವತಿ ತನ್ನ ಉಸಿರನ್ನೇ ಕಳೆದುಕೊಂಡಿದ್ದಾಳೆ. ಸ್ನೇಹಿತೆಯ ಸಾವಿಗೆ ಕಾರಣವಾಗಿದ್ದವ ಪೊಲೀಸ್ ಕಸ್ಟಡಿಗೆ ಸೇರಿದ್ದಾನೆ.
ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಓದ್ತಿದ್ದ ಯುವತಿ ಪ್ರಿಯಾಂಕ ಕಳೆದ ಎರಡು ಮೂರು ದಿನಗಳ ಹಿಂದೆ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಳು. ಇದೀಗ ಆಕೆಯ ಪೌಚ್‌ನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ತನಿಖೆ ವೇಳೆ ಆಕೆ ಆತ್ಮಹತ್ಯೆಗೆ ಆಕೆಯ ಕಾಲೇಜಿನಲ್ಲಿಯೇ ಓದ್ತಿದ್ದ ದಿಗಂತ್ ಕಾರಣ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಇವರಿಬ್ಬರೂ ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ದಿಗಂತ್ ಹಾಗೂ ಪ್ರಿಯಾಂಕ ಇಬ್ಬರು ಸ್ನೇಹಿತರಾಗಿದ್ದರು. ದಿಗಂತ್ ಜೊತೆ ಸೇರಿ ಪ್ರಿಯಾಂಕ ಆನ್ ಲೈನ್ ಗೇಮಿಂಗ್ ನಲ್ಲಿ ಹಣ ಹೊಡಿಕೆ ಗೀಳಿಗೆ ಬಿದ್ದಿದ್ದಳು. ಆನ್ಲೈನ್ ನಲ್ಲಿ ಹಣ ಹೊಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತದೆ. ಬಿಎಮ್ ಡ್ಯೂ ಕಾರ್ ತಗೋಬಹುದು ಅಂತ ದಿಗಂತ್ ಆಸೆ ತೋರಿಸಿದ್ದ..
ದಿಗಂತ್ ಮಾತು ನಂಬಿ ಮನೆಯಲ್ಲಿ ತಂದೆ ತಾಯಿಗೆ ಗೊತ್ತಿಲ್ಲದ ಸುಮಾರು 15 ಲಕ್ಷದಷ್ಟು ಹಣ, ಚಿನ್ನಭಾರಣವನ್ನು ಆಕೆ ದಿಗಂತ್ ಗೆ ನೀಡಿದ್ದಳು. ಆದರೆ ಚಿನ್ನಾಭರವನ್ನು ಅಡವಿಟ್ಟ ದಿಗಂತ್ ಆನ್ ಲೈನ್ ಗೇಮ್ ನಲ್ಲಿ ಹೊಡಿಕೆ ಮಾಡಿದ್ದಿನಿ ಅಂತ ಪ್ರಿಯಾಂಕಗೆ ನಂಬಿಸಿ ಐಶಾರಾಮಿ ಜೀವನ ನಡೆಸಿದ್ದ. ಹಲವು ದಿನ ಕಳೆದ್ರೂ ಹಣ, ಚಿನ್ನಾಭರಣ ವಾಪಸ್ಸ್ ನೀಡದೆ ದಿಗಂತ್ ಸತಾಯಿಸುತ್ತಿದ್ದ. ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ರು ಕೇರ್ ಮಾಡಿಲ್ಲ.
ಇತ್ತ ಮನೆಯಲ್ಲಿ ಗೊತ್ತಾದ್ರೆ ಏನ್ ಆಗುತ್ತದೆ ಎಂಬ ಭಯದಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಪ್ರಿಯಾಂಕ ಮನನೊಂದು ಶುಕ್ರವಾರ ಬೆಳ್ಳಗೆ ಮನೆಯ ಬಾಲ್ಕನಿಯ ಹೊರಗೆ ಬಟ್ಟೆಯಿಂದ ನೇಣು ಹಾಕಿಕೊಂಡಿದ್ದಾಳೆ. ಪ್ರಿಯಾಂಕ ಮೊಬೈಲ್ ಪರಿಶೀಲನೆ ನಡೆಸಿದಾಗ ಪೌಚ್ ನಲ್ಲಿ ಇಂಗ್ಲಿಷ್ ಬರೆದಿದ್ದ ಡೆತ್ ನೊಟ್ ಪತ್ತೆಯಾಗಿದೆ.. ಅದ್ರಲ್ಲಿ ನನ್ನ ಸಾವಿಗೆ ದಿಗಂತ್ ಕಾರಣ ಅಂತಾ ಘಟನೆ ಬಗ್ಗೆ ಕಂಪ್ಲೀಟ್ ಆಗಿ ಉಲ್ಲೇಖಿಸಿದ್ದಾಳೆ. ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಜಾಜಿನಗರ ಪೊಲೀಸರು ಆರೋಪಿ ದಿಗಂತ್ ನನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Double Murder: ಬೆಂಗಳೂರಿನ ಶೆಡ್‌ನಲ್ಲಿ ಡಬಲ್ ಮರ್ಡರ್: ಬಸ್ ಕ್ಲೀನರ್‌ಗಳ ಕೊಲೆ