Thursday, 19th December 2024

LPG Cylinder: 450 ರೂ.ಗೆ ಗ್ಯಾಸ್ ಸಿಲಿಂಡರ್ ಪಡೆಯುವುದು ಹೇಗೆ?

LPG Cylinder

ಬಡವರು, ಮಹಿಳೆಯರು ಮತ್ತು ರೈತರಿಗಾಗಿ ಭಾರತ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು (government scheme) ಪರಿಚಯಿಸಿದೆ. ಕೋಟ್ಯಂತರ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಡಿಮೆ ಆದಾಯ ಹೊಂದಿರುವ ಜನರಿಗಾಗಿ ಅತ್ಯಂತ ಕಡಿಮೆ ಬೆಲೆಗೆ (LPG Cylinder) ಸರ್ಕಾರ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ.

ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು ನೀಡುತ್ತವೆ. ಪಡಿತರ ಚೀಟಿದಾರರಿಗೆ ಕಡಿಮೆ ದರದಲ್ಲಿ ಪಡಿತರ ಸೌಲಭ್ಯ ಸಿಗುವುದಲ್ಲದೆ ಸರಕಾರ ಇತರ ಸೌಲಭ್ಯಗಳನ್ನೂ ನೀಡುತ್ತದೆ. ಇದೀಗ ರಾಜಸ್ಥಾನ ಸರಕಾರ 450 ರೂ. ಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು ಅಗ್ಗದ ಎಲ್ ಪಿಜಿ ಸಿಲಿಂಡರ್ ಗಳನ್ನು ಖರೀದಿಸಲು ಬಯಸಿದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

450 ರೂ.ಗೆ ಲಭ್ಯವಾಗಲಿದೆ ಗ್ಯಾಸ್ ಸಿಲಿಂಡರ್

ರಾಜಸ್ಥಾನದ ಭಜನ್ ಲಾಲ್ ಸರ್ಕಾರವು ಉಜ್ವಲ ಯೋಜನೆಯಡಿ (Ujjwala scheme) 450 ರೂ. ಗೆ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ (National Food Security Act) ರಾಜಸ್ಥಾನದ ಕಾನೊದಲ್ಲಿನ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳಲಿವೆ. 450 ರೂ. ಗೆ ಗ್ಯಾಸ್ ಸಿಲಿಂಡರ್ ಪಡೆಯಲು ಜನರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಯೋಜನೆಯ ಲಾಭ ಪಡೆಯಲು ಬಯಸುವವರು ತಮ್ಮ ಎಲ್‌ಪಿಜಿ ಐಡಿಯನ್ನು ಪಡಿತರ ಚೀಟಿಗೆ ಲಿಂಕ್ ಮಾಡಬಹುದು.

LPG Cylinder

ಎಷ್ಟು ಕುಟುಂಬಗಳಿಗೆ ಸಿಗಲಿದೆ ಪ್ರಯೋಜನ?

ಸರ್ಕಾರದ ವರದಿಯ ಪ್ರಕಾರ ರಾಜಸ್ಥಾನ ಸರ್ಕಾರದ ಈ ಯೋಜನೆಯಡಿ ಸುಮಾರು 68 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಈ ಕುಟುಂಬಗಳು ಕೇವಲ 450 ರೂ. ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯಲಿದೆ. ರಾಜಸ್ಥಾನದಲ್ಲಿ ಒಟ್ಟು 1,07,35,000ಕ್ಕೂ ಹೆಚ್ಚು ಕುಟುಂಬಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪಟ್ಟಿಯಲ್ಲಿ ಸೇರಿವೆ.

ಈ ಸುದ್ದಿಯನ್ನೂ ಓದಿ: RBI Monetary Policy Meeting: ಬಡ್ಡಿದರ ಇಳಿಕೆಯಾಗುತ್ತಾ? ಕೆಲವೇ ಕ್ಷಣಗಳಲ್ಲಿ ಆರ್‌ಬಿಐನಿಂದ ಮಹತ್ವದ ನಿರ್ಧಾರ ಪ್ರಕಟ

ಪಡಿತರ ಚೀಟಿಗಳ ಇ-ಕೆವೈಸಿ ಅಗತ್ಯ

ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಅಂದರೆ ಅವರು ಪಡಿತರ ಚೀಟಿಯಲ್ಲಿ ಎಲ್ ಪಿಜಿ ಐಡಿ ಸೀಡಿಂಗ್ ಅನ್ನು ಮಾತ್ರ ಪಡೆಯಬೇಕಾಗಿಲ್ಲ. ಆದರೆ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ಮತ್ತೆ ಲಿಂಕ್ ಮಾಡಬೇಕಾಗಿದೆ.