Sunday, 22nd December 2024

BBK 11: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಜೈಲಿಗೆ ಹೋದ ಚೈತ್ರಾ: ಇದೆಲ್ಲ ಮಂಜು ಪ್ಲ್ಯಾನ್?

Chaithra Kundapura in Jail (1)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಟಾಸ್ಕ್​ಗಳ ಕಾವು ಏರುತ್ತಿದ್ದು, ಬಿಗ್ ಬಾಸ್ ಪ್ರತಿದಿನ ನೀಡುತ್ತಿರುವ ಆಟ ಕಠಿಣವಾಗುತ್ತಿದೆ. ಸ್ಪರ್ಧಿಗಳ ನಡುವಣ ಸಂಬಂಧ ಕೂಡ ದೂರವಾಗುತ್ತಿದ್ದು, ಒಬ್ಬರನ್ನೊಬ್ಬರು ಟಾರ್ಗೆಟ್ ಮಾಡುತ್ತಿರುವುದು ಜೋರಾಗಿದೆ. ಇದರ ಪರಿಣಾಮ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಎರಡನೇ ಬಾರಿ ಜೈಲು ಸೇರಿದ್ದಾರೆ.

ಈ ವಾರ ಚೈತ್ರಾ ಅವರು ಕಳಪೆ ಸ್ಪರ್ಧಿಯಾಗಿದ್ದಾರೆ. ಉಗ್ರಂ ಮಂಜು, ಗೋಲ್ಡ್‌ ಸುರೇಶ್‌, ಭವ್ಯಾ ಸೇರಿದಂತೆ ಅನೇಕರು ಚೈತ್ರಾ ಅವರಿಗೆ ಕಳಪೆ ಪಟ್ಟವನ್ನು ನೀಡಿದರು. ಎಲ್ಲೋ ಒಂದಷ್ಟು ವಾತಾವರಣ ಕೆಡಲು ಚೈತ್ರಾ ಕಾರಣ ಎಂದು ಮಂಜು ಕಾರಣ ನೀಡಿದ್ದಾರೆ. ಕಳಪೆ ಪಟ್ಟವನ್ನು ಕೊಟ್ಟಿದ್ದಕ್ಕೆ ಏಕಾಏಕಿ ಕೋಪಗೊಂಡ ಚೈತ್ರಾ ಕೂಗಾಡಿದ್ದಾರೆ. ನಾನು ನಿಮಗೆಲ್ಲಾ ಈಸಿಯಾಗಿ ಟಾರ್ಗೆಟ್ ಆಗಿದ್ದೀನಿ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ಅವರು, ಹೆಚ್ಚು ಮಾತನಾಡದೇ ಕಳಪೆಗೆ ರಿಸನ್​ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಜೈಲಿಗೆ ಹೋದ ಕೂಡಲೇ ಚೈತ್ರಾ ಅವರು ಮೋಕ್ಷಿತಾ ಹಾಗೂ ಐಶ್ವರ್ಯಾ ಮುಂದೆ ಮಂಜಣ್ಣ ತಮ್ಮ ಟೀಮ್​ಗೆ ಕಣ್ ಸನ್ನೆ ಮಾಡಿದ್ರು ಅಂತ ಹೇಳಿದ್ದಾರೆ. ಈ ಮೂಲಕ ಎಲ್ಲ ಒಟ್ಟಿಗೆ ಪ್ಲ್ಯಾನ್‌ ಮಾಡಿ ಕಳಪೆ ಕೊಟ್ಟಿದ್ದಾರೆ ಎಂದು ಚೈತ್ರಾ ಹೇಳಿದ್ದಾರೆ. ಚೆನ್ನಾಗಿ ಆಡಿದರೂ ಕೂಡ ನನಗೆ ಕಳಪೆ ನೀಡಿದ್ದಾರೆ, ಈ ಮನೆಯಲ್ಲಿ ವ್ಯಕ್ತಿಗೇ ಬೆಲೆ ಇಲ್ಲ ಮಾತಿಗೆಲ್ಲಿಂದ ಬೆಲೆ ಎಂದು ಹೇಳಿ ಚೈತ್ರಾ ಜೈಲು ಸೇರಿದ್ದಾರೆ.

ಗೌತಮಿ ಮನೆಯ ಕ್ಯಾಪ್ಟನ್:

ಮೋಕ್ಷಿತಾ ಪೈ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹಿಂದೆ ಸರಿದ ಕಾರಣ ಗೌತಮಿ ಜಾಧವ್​ಗೆ ಕ್ಯಾಪ್ಟನ್ಸಿ ಟಾಸ್ಕಕ್​ಗೆ ಅರ್ಹತೆ ಪಡೆಯಲು ಟಾಸ್ಕ್ ಒಂದನ್ನು ಆಡಲು ಅವಕಾಶ ಸಿಕ್ಕಿತು. ಇವರಿಗೆ ಸಹಾಯಕರಾಗಿ ಧನರಾಜ್ ಆಚಾರ್ ಬಂದರು. ಇದರಲ್ಲಿ ಗೌತಮಿ ಹಾಗೂ ಶಿಶಿರ್ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೌತಮಿ ಜಾಧವ್ ಗೆದ್ದು ಬೀಗಿದ್ದಾರೆ. ಮನೆಯ ಕ್ಯಾಪ್ಟನ್ ಕ್ವೀನ್ ಆಗಿ ಕ್ಯಾಪ್ಟನ್ ರೂಮ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಹನ್ನೊಂದನೆ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

BBK 11: ಬಿಗ್ ಬಾಸ್​ನಿಂದ ಹೊರಬಂದ ಬೆನ್ನಲ್ಲೇ ದಿಢೀರ್ ಆಸ್ಪತ್ರೆಗೆ ದಾಖಲಾದ ಶೋಭಾ ಶೆಟ್ಟಿ