ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹತ್ತನೇ ವಾರ ಮುಕ್ತಾಯದ ಹಂತದಲ್ಲಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 12 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಶೋಭಾ ಶೆಟ್ಟಿ ತಮ್ಮ ಸ್ವಚ್ಚೆಯಿಂದ ಬಿಗ್ ಬಾಸ್ ಮನೆ ತೊರೆದು ಹೊರಬಂದರು. ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಡೇಂಜರ್ ಝೋನ್ಗೆ ಬಂದಿದ್ದರು. ಆದರೆ, ಅನಾರೋಗ್ಯದ ಕಾರಣ ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿ ಶೋಭಾ ಮನೆ ತೊರೆದರು.
ಇದೀಗ ಈ ವಾರ ಮನೆಯಿಂದ ಯಾರು ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. 10ನೇ ವಾರ ಮನೆಯಿಂಂದ ಹೊರಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿ ನಡೆಯಿತು. ಬೆನ್ನಿಗೆ ಚೂರಿ ಚುಚ್ಚುವ ಮುಖಾಂತರ ನಾಮಿನೇಟ್ ಮಾಡಬೇಕಿತ್ತು.
ಈ ವಾರದ ನಾಮಿನೇಷನ್ನಲ್ಲಿ ವಾದ – ಪ್ರತಿವಾದಕ್ಕೂ ಅವಕಾಶ ನೀಡಲಾಗಿತ್ತು. ಇದರಲ್ಲಿ ಉಗ್ರಂ ಮಂಜು, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಭವ್ಯಾ ಗೌಡ, ಐಶ್ವರ್ಯಾ ಶಿಂಧೋಗಿ, ರಜತ್ ಕಿಶನ್ ಹಾಗೂ ಗೋಲ್ಡ್ ಸುರೇಶ್ ನಾಮಿನೇಟ್ ಆದರು. ಇವರಲ್ಲಿ ಯಾರು ಮನೆಯಿಂದ ಔಟ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಆದರೆ, ಈ ವಾರದ ಟ್ವಿಸ್ಟ್ ಏನೆಂದರೆ ನೋ ಎಲಿಮಿನೇಷನ್ ವೀಕ್. ಹೌದು, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಇರುವುದಿಲ್ಲ ಎಂದು ಹೇಳಲಾಗಿದೆ. ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ಮಂಗಳವಾರ ಆಗುತ್ತದೆ. ಆದರೆ, ಈ ವಾರ ಇದು ಅಂತ್ಯಗೊಂಡಿದ್ದು ಗುರುವಾರದ ಸಂಚಿಕೆಯಲ್ಲಿ. ಗುರುವಾರದ ಸಂಚಿಕೆ ಮುಕ್ತಾಯವಾದ ಬೆನ್ನಲ್ಲೇ ವೋಟಿಂಗ್ ಲೈನ್ಸ್ ಓಪನ್ ಆಗಬೇಕಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಕಳೆದರೂ.. ವೋಟಿಂಗ್ ಲೈನ್ಸ್ ತೆರೆದಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ಇಲ್ಲ ಎಂದು ಹೇಳಲಾಗಿದೆ.
ಈ ವಾರ ಎಲಿಮಿನೇಷನ್ ಇಲ್ಲ ನಿಜ. ಆದರೆ, ಇದರಲ್ಲಿ ಬಿಗ್ ಬಾಸ್ ಏನಾದರು ಟ್ವಿಸ್ಟ್ ನೀಡುತ್ತಾರ ಎಂಬ ಕುತೂಹಲ ಕೂಡ ಇದೆ. ಅಂದರೆ ಫೇಕ್ ಎಲಿಮಿನೇಷನ್ ನಡೆಸಿ ಒಬ್ಬರನ್ನು ಸೀಕ್ರೆಟ್ ರೂಮ್ನಲ್ಲಿ ಬಿಗ್ ಬಾಸ್ ಇಡುತ್ತಾರೆ ಎಂಬ ಮಾತುಕೂಡಿದೆ. ಕಳೆದ ಎರಡು ಸೀಸನ್ನಿಂದ ಸೀಕ್ರೆಟ್ ರೂಮ್ ಎಂಬ ಕಾನ್ಸೆಪ್ಟ್ ಅನ್ನು ಕನ್ನಡ ಬಿಗ್ ಬಾಸ್ನಲ್ಲಿ ಕೈಬಿಡಲಾಗಿದೆ. ಆದರೆ, ಈ ಬಾರಿ ಅದನ್ನು ಮತ್ತೆ ಶುರುಮಾಡುತ್ತಾರ ಎಂಬುದು ನೋಡಬೇಕಿದೆ.
BBK 11: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಜೈಲಿಗೆ ಹೋದ ಚೈತ್ರಾ: ಇದೆಲ್ಲ ಮಂಜು ಪ್ಲ್ಯಾನ್?