Thursday, 26th December 2024

Good news: ಕರ್ನಾಟಕದಲ್ಲಿ ಹೊಸದಾಗಿ 3 ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

kendriya vidyalaya

ನವದೆಹಲಿ: ಕೇಂದ್ರ ಸರ್ಕಾರವು (Central Government) ದೇಶದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ (Good News) ನೀಡಿದೆ. ದೇಶದಲ್ಲಿ 85 ಕೇಂದ್ರೀಯ ವಿದ್ಯಾಲಯಗಳು (kendriya vidyalaya) ಮತ್ತು 28 ಹೊಸ ನವೋದಯ ವಿದ್ಯಾಲಯಗಳನ್ನು (Navodaya vidyalaya) ತೆರೆಯುವುದಾಗಿ ಘೋಷಿಸಿದೆ. ಇದರಲ್ಲಿ ಕರ್ನಾಟಕದಲ್ಲಿ ಮೂರು ಕೇಂದ್ರೀಯ ವಿದ್ಯಾಲಯಗಳು ಬರಲಿವೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕರ್ನಾಟಕದಲ್ಲಿ ಮೂರು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಗರಿಷ್ಠ 13 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುವುದು. 28 ಹೊಸ ನವೋದಯ ವಿದ್ಯಾಲಯಗಳನ್ನು ತೆರೆಯುವುದಾಗಿ ಘೋಷಿಸಲಾಗಿದ್ದು, ಗರಿಷ್ಠ ಎಂಟು ನವೋದಯ ವಿದ್ಯಾಲಯಗಳನ್ನು ಅರುಣಾಚಲ ಪ್ರದೇಶದಲ್ಲಿ ತೆರೆಯಲಾಗುವುದು.

ಮುಂದಿನ ಎಂಟು ವರ್ಷಗಳಲ್ಲಿ ಈ ಶಾಲೆಗಳನ್ನು ತೆರೆಯಲು 8,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗುವುದು. ಇವೆಲ್ಲವೂ ಪ್ರಧಾನಮಂತ್ರಿ-ಶ್ರೀ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಂಪುಟದಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ದೇಶದ 19 ರಾಜ್ಯಗಳಲ್ಲಿ ಈ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುವುದು ಎಂದು ಹೇಳಿದರು. ಇವುಗಳಲ್ಲಿ ದೆಹಲಿಯ ಖಜೂರಿ ಖಾಸ್‌ನಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಸಹ ತೆರೆಯಲಾಗುವುದು. ಹೊಸದಾಗಿ 85 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯುವುದರಿಂದ 82 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಯಾವ ರಾಜ್ಯದಲ್ಲಿ ಎಷ್ಟು ಹೊಸ ಕೇಂದ್ರೀಯ ಶಾಲೆ?

ಜಮ್ಮು-ಕಾಶ್ಮೀರ-13
ಮಧ್ಯಪ್ರದೇಶ-11
ರಾಜಸ್ಥಾನ – 09
ಒಡಿಶಾ – 08
ಆಂಧ್ರ ಪ್ರದೇಶ – 08
ಉತ್ತರ ಪ್ರದೇಶ – 05
ಉತ್ತರಾಖಂಡ – ನಾಲ್ಕು
ಛತ್ತೀಸ್‌ಗಢ- ನಾಲ್ಕು
ಹಿಮಾಚಲ ಪ್ರದೇಶ – ನಾಲ್ಕು
ಕರ್ನಾಟಕ-ಮೂರು ಮತ್ತು ಒಂದು ಅಪ್‌ಗ್ರೇಡ್
ಗುಜರಾತ್ – ಮೂರು
ಮಹಾರಾಷ್ಟ್ರ-3
ಜಾರ್ಖಂಡ್ – ಎರಡು
ತಮಿಳುನಾಡು – ಎರಡು
ತ್ರಿಪುರ-ಎರಡು-
ದೆಹಲಿ-1
ಅರುಣಾಚಲ ಪ್ರದೇಶ-ಎ
ಅಸ್ಸಾಂ-ಒಂದು-ಕೇರಳ-ಒಂದು
ಯಾವ ರಾಜ್ಯದಲ್ಲಿ ಎಷ್ಟು ಹೊಸ ನವೋದಯಗಳು ತೆರೆಯಲಿವೆ?
ಅರುಣಾಚಲ ಪ್ರದೇಶ – ಎಂಟು –
ತೆಲಂಗಾಣ-ಏಳು- ಅಸ್ಸಾಂ-ಆರು-
ಮಣಿಪುರ-ಮೂರು-
ಬಂಗಾಳ-ಎರಡು-
ಕರ್ನಾಟಕ-ಎ-
ಮಹಾರಾಷ್ಟ್ರ-1