Friday, 27th December 2024

IPL 2025: ಕೊಹ್ಲಿ ಅಲ್ಲ ಈತನೇ ಆರ್‌ಸಿಬಿಯ ಮುಂದಿನ ನಾಯಕ

ಬೆಂಗಳೂರು: ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ(IPL 2025) ವಿರಾಟ್‌ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗುತ್ತಾರೆ ಎಂದು ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಇದೀಗ ಆರ್​​​ಸಿಬಿ ತಂಡದ ಯುವ​ ಬ್ಯಾಟರ್​​ ರಜತ್​ ಪಾಟಿದಾರ್​ಗೆ ನಾಯಕತ್ವ ಪಟ್ಟ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈ ಬಗ್ಗೆ ಮುಖ್ಯ ಕೋಚ್​​​ ಆ್ಯಂಡಿ ಫ್ಲವರ್​ ಮಾತಾಡಿದ್ದು, ರಜತ್​ ಪಾಟಿದಾರ್​​ ಹೊಡಿಬಡಿ ಆಟಗಾರ. ಇವರು ಸ್ಪಿನ್ನರ್​​ಗಳ ವಿರುದ್ಧ ಮುನ್ನುಗ್ಗಿ​ ಬ್ಯಾಟ್​ ಬೀಸುತ್ತಾರೆ. ಜತೆಗೆ ಪಾಟಿದಾರ್​ ಒಳ್ಳೆಯ ಲೀಡರ್​​. ದೇಶೀಯ ಟೂರ್ನಿಯಲ್ಲಿ ಅವರ ನಾಯಕತ್ವ ನೋಡಿದ್ದೇನೆ. ದೂರದೃಷ್ಟಿಯಿಂದ ರಜತ್​ ಪಾಟಿದಾರ್​ ಅವರಲ್ಲಿ ಲೀಡರ್​ಶೀಪ್​ ಕ್ವಾಲಿಟಿ ಬೆಳೆಸೋದು ಮುಖ್ಯ ಎಂದರು. ಅವರ ಈ ಹೇಳಿಕೆ ನೋಡುವಾಗ ಪಾಟಿದಾರ್ ಆರ್‌ಸಿಬಿ ನಾಯಕನಾಗುವುದು ಬಹುತೇಖ ಖಚಿತ ಎನ್ನುವಂತಿದೆ.

ಪಾಟಿದಾರ್ 2024ರ ಐಪಿಎಲ್‌ನಲ್ಲಿ ಆರ್​​ಸಿಬಿ ತಂಡದ ಬ್ಯಾಟಿಂಗ್‌ ಬಲವಾಗಿದ್ದರು. ಆರಂಭದ ಕೆಲವು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾದರೂ ಆ ಬಳಿಕ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿ ಅಬ್ಬರಿಸಿದ್ದರು. ಇದುವರೆಗೂ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಪಟಿದಾರ್, 37.74 ಸರಾಸರಿ, 158.85 ಸ್ಟ್ರೈಕ್‌ರೇಟ್‌ನಲ್ಲಿ 799 ರನ್ ಗಳಿಸಿದ್ದಾರೆ. 112 ರನ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.

ವಿರಾಟ್​ ಕೊಹ್ಲಿ 2013ರಲ್ಲಿ ಆರ್​ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್​ಸಿಬಿಯನ್ನು ಮುನ್ನಡೆಸಿದ್ದರು. ಭಾರತ ತಂಡದ ಮೂರು ಮಾದರಿಯ ನಾಯಕತ್ವದ ಒತ್ತಡದಿಂದ ಅವರು ಐಪಿಎಲ್‌ ನಾಯಕತ್ವದಿಂದ ಕೆಳಗಿಳಿದಿದ್ದರು. 

ಇದನ್ನೂ ಓದಿ 100 ಮೀಟರ್ ಓಟದಲ್ಲಿ ಭಾರೀ ಸಂಚಲನ ಮೂಡಿಸಿದ 16ರ ಪೋರ

ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ(ರಿಟೇನ್‌), ರಜತ್‌ ಪಾಟೀದಾರ್‌(ರಿಟೇನ್‌), ಯಶ್‌ ದಯಾಳ್‌(ರಿಟೇನ್‌), ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ), ಫಿಲ್​ ಸಾಲ್ಟ್​ (11.50 ಕೋಟಿ), ಜಿತೇಶ್​ ಶರ್ಮ (11 ಕೋಟಿ), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ), ರಸಿಕ್​ ಸಲಾಂ (6 ಕೋಟಿ), ಸುಯಶ್​ ಶರ್ಮ (2.60 ಕೋಟಿ). ಭುವನೇಶ್ವರ್​ ಕುಮಾರ್​ (10.75 ಕೋಟಿ), ಕೃನಾಲ್​ ಪಾಂಡ್ಯ (5.75 ಕೋಟಿ), ಟಿಮ್​ ಡೇವಿಡ್​ (3 ಕೋಟಿ), ಜೇಕಬ್​ ಬೆಥೆಲ್​ (2.60 ಕೋಟಿ), ದೇವದತ್​ ಪಡಿಕ್ಕಲ್​ (2 ಕೋಟಿ), ನುವಾನ್​ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್​ (1.50 ಕೋಟಿ), ಸ್ವಪ್ನಿಲ್​ ಸಿಂಗ್​ (50 ಲಕ್ಷ), ಮನೋಜ್​ ಭಾಂಡಗೆ (30 ಲಕ್ಷ), ಸ್ವಸ್ತಿಕ್​ ಚಿಕರ (30 ಲಕ್ಷ), ಮೋಹಿತ್​ ರಾಥೀ (30 ಲಕ್ಷ), ಅಭಿನಂದನ್​ ಸಿಂಗ್​ (30 ಲಕ್ಷ), ಲುಂಗಿ ಎನ್​ಗಿಡಿ (1 ಕೋಟಿ).