Wednesday, 25th December 2024

Bengaluru power cut: ಬೆಂಗಳೂರಿನಲ್ಲಿ ಇಂದು ಈ ಏರಿಯಾಗಳಲ್ಲಿ ಪವರ್‌ ಕಟ್‌

power-cut

ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ಭಾನುವಾರ ಸಹ ಪವರ್‌ ಕಟ್‌ ಇರಲಿದೆ. 220/66/11 ಕೆವಿ ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 08.12.2024 (ಭಾನುವಾರ) ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 03:30 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru power cut) ಉಂಟಾಗಲಿದೆ.

ಪೀಣ್ಯ ಗ್ರಾಮ, ಎಸ್ ಆರ್ ಎಸ್ ರಸ್ತೆ, 4ನೇ ಬ್ಲಾಕ್, ಎಂಇಐ ಕಾರ್ಖಾನೆ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜೆಕೆಡಬ್ಲೂ ಲೇಔಟ್, ಬೈರವೇಶ್ವರ ನಗರ, 10ನೇ ಕ್ರಾಸ್, 1ನೇ ಕ್ರಾಸ್, 1ನೇ ಹಂತ ಪೀಣ್ಯ ಕೈಗಾರಿಕಾ ಪ್ರದೇಶ, 3ನೇ ಕ್ರಾಸ್, 4ನೇ ಅಡ್ಡರಸ್ತೆ, ಎಸ್ ಎಸ್ ಟ್ರೇಜ್ ಏರಿಯಾ 1ನೇ ಕ್ರಾಸ್, ಅನುಸೋಲಾರ್ ರಸ್ತೆ, ಚೇರದ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಮೈಸೂರು ಇಂಜಿನಿಯರ್ ರಸ್ತೆ, ಸನ್ ರೈಸ್ ಕಾಸ್ಟಿಂಗದ ರಸ್ತೆ, 3ನೇ ಹಂತ, ವೈಷ್ಣವಿ ಮಾಲ್+ ಕಾವೇರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Namma Metro: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿ; ಒಂದೇ ದಿನ 9.20 ಲಕ್ಷ ಜನ ಓಡಾಟ

ಬೆಂಗಳೂರು : ಬೆಂಗಳೂರಿನ (Bengaluru news) ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಓಡಾಟದಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ದಿನ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ ಕಂಡಿದ್ದು, ಶುಕ್ರವಾರ ಗರಿಷ್ಠ ಪ್ರಮಾಣ ತಲುಪಿದೆ.

ಈ ವಿಷಯದ ಕುರಿತಾಗಿ ಬಿಎಂಆರ್‌ಸಿಎಲ್ ಮಾಹಿತಿಯನ್ನು ಹಂಚಿಕೊಂಡಿದೆ. ʼನಮ್ಮ ಮೆಟ್ರೋ’ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಡಿ. 6ರಂದು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ 9.20 ಲಕ್ಷ ಕ್ಕೂ ಅಧಿಕ ಪ್ರಯಾಣಿಕರು ಸಂಚಾರ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಬಿಎಂಆರ್‌ಸಿಎಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿದೆ.

ನೇರಳೆ ಮಾರ್ಗದಲ್ಲಿ 4,39,616 ಜನ ಪ್ರಯಾಣಿಸಿದ್ದು, ಹಸಿರು ಮಾರ್ಗದಲ್ಲಿ 3,12,248 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಿಂದ ಮಾರ್ಗ ಬದಲಿಸುವ ಮೂಲಕ 1,67,617 ಜನ ಪ್ರಯಾಣಿಸಿದ್ದಾರೆ. ಕಳೆದ ಆಗಸ್ಟ್ 14ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 9.17 ಲಕ್ಷ ಮಂದಿ ಸಂಚರಿಸುವ ಮೂಲಕ ದಾಖಲೆ ಸೃಷ್ಟಿಸಿತ್ತು. ಇದೀಗ ನಮ್ಮ ಮೆಟ್ರೋದಲ್ಲಿ 9.20 ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುವ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭ 2026ರ ಡಿಸೆಂಬರ್‌ಗೆ