Sunday, 22nd December 2024

Chikkaballapur Crime: ಐಎಫ್‌ಬಿ ಕಂಪನಿ ಸೇವೆಯ ಹೆಸರಿನಲ್ಲಿ ಲಕ್ಷಾಂತರ ವಂಚನೆ

ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕಂಪನಿ ಏಜೆಂಟರು

ಚಿಕ್ಕಬಳ್ಳಾಪುರ : ಐ ಎಫ್ ಬಿ ವಾಷಿಂಗ್ ಮಷೀನ್ ಕಂಪನಿ ಹೆಸರಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ನಡೆದಿದೆ.

ವಿವೇಕಾನಂದ ಎಂಟರ್‌ಪ್ರೆöÊಸಸ್ ಮಾಲೀಕ ಚರಣ್ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಐಎಫ್‌ಬಿ ವಾಷಿಂಗ್ ಮಿಷನ್ ಕೊಳ್ಳುವ ಯಾವುದೇ ಗ್ರಾಹಕರಿಗೆ ಇವರು ಉಚಿತವಾಗಿ ಮನೆಗೆ ಹೋಗಿ ಸೇವೆ ಕೊಡುತ್ತಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಇವರಂತೆ ಕಂಪನಿಯ ಹೆಸರು ಹೇಳಿಕೊಂಡು ಗ್ರಾಹಕರ ಮನೆಗೆ ಹೋಗುತ್ತಿದ್ದ ಮಂಡ್ಯ ಶ್ರೀರಂಗಪಟ್ಟಣ ತುರುವೇಕೆರೆ ಮೂಲದ ಅರ್ಜುನ್, ದರ್ಶನ್, ಮಂಜುನಾಥ್ ಎಂಬ ಖದೀಮರು ನಾವೇ ಐಎಫ್‌ಬಿ ಕಂಪನಿ ಸೇವಾದಾರರು ಎಂದು ಗ್ರಾಹಕರ ಮನೆಗೆ ತರಳಿ ಯಂತ್ರದಲ್ಲಿರುವ ಅಸಲಿ ಯಂತ್ರಗಳನ್ನು ಕಳಸಿಕೊಂಡು ನಕಲಿ ಮತ್ತು ಕಳಪೆ ವಸ್ತುಗಳನ್ನು ಅದಕ್ಕೆ ಹಾಕಿ ಸಾವಿರಾರು ರೂಪಾಯಿ ಸೇವಾಶುಲ್ಕವಾಗಿ ಪಡೆದು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ. ಈಬಗ್ಗೆ ಕಳೆದ ೨ ತಿಂಗಳಿ0ದ ಪದೇ ಪದೇ ಗ್ರಾಹಕರಿಂದ ದೂರು ಬರುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಐಎಫ್‌ಬಿ ಕಂಪನಿ ಅಧಿಕೃತ ಸೇವಾದಾರರಾದ ಚರಣ್ ಖದೀಮರ ಹೆಡೆಮುರಿ ಕಟ್ಟಲು ತೀರ್ಮಾನಿಸಿ ಹೊಂಚುಹಾಕಿದ್ದು ಶನಿವಾರ ಇವರು ಬೀಸಿದ ಬಲೆಗೆ ಅವರು ಬಿದ್ದಿದ್ದಾರೆ.

ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಸಮೀಪದ ಮನೆಯೊಂದಕ್ಕೆ ಸೇವೆ ನೀಡುವ ನೆಪದಲ್ಲಿ ಬಂದಿದ್ದ ಖದೀಮ ರನ್ನು ವಿವೇಕಾನಂದ ಎಂಟರ್‌ಪ್ರೆöÊಸಸ್ ಮಾಲೀಕ ಹಾಗೂ  ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರ ಚರಣ್ ಮತತು ತಂಡ ದಿಢೀರ್ ದಾಳಿ ನಡೆಸಿ ೫ ಮಂದಿಯ ಪೈಕಿ ಮೂವರನ್ನು ಪೊಲೀಸರಿಗೆ ಒಪ್ಪಿಸಿ ವಂಚಕರ ಬೃಹತ್ ಜಾಲ ಬೇಧಿಸಲು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚರಣ್ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಈ ತಂಡ ಕಳೆದ ಐದಾರು ತಿಂಗಳಿ0ದ ಸುಮಾರು ೪೦೦ ರಿಂದ ೫೦೦ ಮಂದಿಗೆ ಟೋಪಿ ಹಾಕಿದ್ದಾರೆ. ಯಂತ್ರದ ಕ್ಲೀನಿಂಗ್ ಪೌಂಡರ್ ಬದಲಿಸುತ್ತೇವೆ ಎಂದು ಹೇಳಿ ಉಪ್ಪನ್ನು ತುಂಬಿದ್ದಾರೆ. ಇದರ ಬೆಲೆ ೧೦ ರೂಪಾಯಿ ಇದ್ದರೆ ೩೦೦ ರೂಪಾಯಿ ಬಿಲ್ ಮಾಡಿದ್ದಾರೆ.ನೀರಿನ ಫಿಲ್ಟರ್ ಒಂದಕ್ಕೆ ಕಂಪನಿಯಲ್ಲಿ ೨೬೦೦ ರೂಪಾಯಿ ಇದ್ದರೆ ಇವರು ಕಡಿಮೆ ಬೆಲೆಗೆ ನೀಡು ತ್ತೇವೆ ಎಂದು ಕಂಪನಿ ವಸ್ತುಗಳನ್ನು ಲಪಟಾಯಿಸಿ ನಕಲು ವಸ್ತುಗಳನ್ನು ಹಾಕಿ ಯಂತ್ರಗಳು ಹಾಳಾಗುವಂತೆ ಮಾಡಿ ಗ್ರಾಹಕರಿಗೆ ಲಕ್ಷಾಂತರ ಹಣ ವಂಚನೆ ಮಾಡಿದ್ದಾರೆ.ವಂಚನೆಯೇ ಇವರ ಕಸುಬಾಗಿದ್ದು ಸುಮಾರು ೫೦೦ ಮಂದಿ ಇರಬಹುದು ಎಂದು ಶಂಕಿಸಲಾಗಿದೆ. ಈಗ ಬಂಧನಕ್ಕೆ ಒಳಗಾಗಿರುವವರನ್ನು ಪೊಲೀಸರು ಬಾಯಿ ಬಿಡಿಸಿದರೆ ಇವರ ಮೋಸ ಬಯಲಿಗೆ ಬರಲಿದೆ ಎಂದು ತಿಳಿಸಿದರು.

ಒಟ್ಟಾರೆ ಗ್ರಾಹಕರು ಸೇವೆಯ ಹೆಸರಿನಲ್ಲಿ ಮನೆಬಾಗಿಲಿಗೆ ಬರುವವರನ್ನು ಮನೆಯೊಳಗೆ ಬಿಟ್ಟುಕೊಂಡರೆ ಯಂತ್ರಗಳಷ್ಟೇ ಮಾಯವಾಗಲ್ಲ, ವಡವೆ ವಸ್ತçದ ಜತೆಗೆ ಪ್ರಾಣವೂ ಹೋಗಬಹುದು ಎಂಬ ಎಚ್ಚರಿಕೆಯನ್ನು ನಕಲಿ ವಂಚಕರ ಪ್ರಕರಣ ಬಯಲು ಮಾಡಿದೆ.