ಜಮ್ಮು ಕಾಶ್ಮೀರ: ಪೊಲೀಸ್ ವಾಹನದೊಳಗೆ ಇಬ್ಬರು ಸಿಬ್ಬಂದಿಯ (Two policemen found dead) ಮೃತದೇಹ (Crime News) ಭಾನುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ (Jammu and Kashmir’s Udhampur) ಪತ್ತೆಯಾಗಿದೆ. ಇವರನ್ನು ಕೊಲ್ಲಲು ಎಕೆ- 47 ರೈಫಲ್ ಬಳಸಲಾಗಿದೆ. ಇದು ಸೋದರ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣದ ಶಂಕೆ ಇದೆ ಎಂದು ಉಧಂಪುರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಎಸ್ಪಿ ಉಧಂಪುರ ಅಮೋದ್ ಅಶೋಕ್ ನಾಗ್ಪುರೆ, ಭಾನುವಾರ ಬೆಳಗ್ಗೆ 6.30ಕ್ಕೆ ಘಟನೆ ನಡೆದಿದೆ. ಸೋಪೋರ್ನಿಂದ ತಲ್ವಾರ ತರಬೇತಿ ಕೇಂದ್ರಕ್ಕೆ ಈ ಇಬ್ಬರು ಪೊಲೀಸ್ ಅಧಿಕಾರಿಗಳು ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.
ಸೋಪೋರ್ನಿಂದ ತಲ್ವಾರದಲ್ಲಿರುವ ತರಬೇತಿ ಕೇಂದ್ರದ ಕಡೆಗೆ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇವರ ಹತ್ಯೆಗೆ ಎಕೆ – 47 ರೈಫಲ್ ಬಳಸಿರುವುದು ಸಾಬೀತಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.
ಮೃತ ಸಿಬ್ಬಂದಿಯ ಮರಣೋತ್ತರ ಪರೀಕ್ಷೆ ಮತ್ತು ಇತರ ಕಾರ್ಯವಿಧಾನಗಳಿಗಾಗಿ ಜಿಎಂಸಿ ಉಧಂಪುರಕ್ಕೆ ಕರೆದೊಯ್ಯಲಾಗಿದೆ. ಈ ಘಟನೆಯ ಹಿಂದಿನ ಸತ್ಯವನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನೊಂದಿಗೆ (ಎಸ್ಒಜಿ) ಕೆಲಸ ಮಾಡುವ ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಒ) ಜಮ್ಮುವಿನ ವೇವ್ ಮಾಲ್ ಬಳಿ ಶವವಾಗಿ ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಕಾನ್ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆಗೆ ಹಾಜರಾಗಲು ಎಸ್ಪಿಒ ಕಥುವಾದಿಂದ ಅವರು ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಕಥುವಾ ಪಟ್ಟಣದ ವಾರ್ಡ್ ಸಂಖ್ಯೆ 17ರ ಮನೀಶ್ವರ್ ಸಿಂಗ್ ಅವರ ಪುತ್ರ 21 ವರ್ಷದ ಕಮಲದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಎಸ್ಪಿಒ ಪರೀಕ್ಷೆಯ ನಂತರ ಅವರು ತಮ್ಮ ತಂದೆಯೊಂದಿಗೆ ಮಾತನಾಡಿದ್ದರು ಮತ್ತು ಮದುವೆಗೆ ವೇವ್ ಮಾಲ್ನಲ್ಲಿ ಶಾಪಿಂಗ್ ಮಾಡಲು ಸ್ವಲ್ಪ ಹಣವನ್ನು ಕೇಳಿದ್ದರು. ತನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಸಿಂಗ್ ಶಂಕಿಸಿದ್ದು, ಪ್ರಕರಣದ ತನಿಖೆ ಮತ್ತು ಮಾಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸುವಂತೆ ಲೆಫ್ಟಿನೆಂಟ್ ಗವರ್ನರ್, ಡಿಜಿ ಮತ್ತು ಕಥುವಾ ಮತ್ತು ಜಮ್ಮು ಜಿಲ್ಲೆಗಳ ಎಸ್ಎಸ್ಪಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Physical Abuse: ಕಸ್ಟಮರ್ ಕೇರ್ನಲ್ಲಿ ಪರಿಚಯ, ಹೋಟೆಲ್ಗೆ ಕರೆದೊಯ್ದುಅತ್ಯಾಚಾರ: ಯುವಕನ ಮೇಲೆ ಯುವತಿಯ ದೂರು
ಕಳೆದ ತಿಂಗಳು ಇದೇ ರೀತಿಯ ಶವ ಪತ್ತೆಯಾಗಿತ್ತು. ಜಮ್ಮುವಿನ ಕಿಶ್ತ್ವಾರ್ ಪ್ರದೇಶದಲ್ಲಿ ಭಯೋತ್ಪಾದಕರು ಅಪಹರಿಸಿ ಗುಂಡಿಕ್ಕಿ ಕೊಂದ ಒಂದು ದಿನದ ಅನಂತರ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯ (ವಿಡಿಜಿ) ಮೃತದೇಹಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಇಬ್ಬರು ನಾಪತ್ತೆಯಾದ ಸುಮಾರು 24 ಗಂಟೆಗಳ ಬಳಿಕ ಭದ್ರತಾ ಪಡೆಗಳು ಪಾಂಡ್ಗ್ವಾರಿ ಪ್ರದೇಶದ ನದಿಯ ಬಳಿ ಅವರ ಮೃತದೇಹಗಳನ್ನು ಪತ್ತೆ ಹಚ್ಚಿವೆ.