ಭೋಪಾಲ್: ಮಧ್ಯಪ್ರದೇಶದ ರಾಜ್ಗಢ್ನಲ್ಲಿ ಕಳ್ಳನೊಬ್ಬ ಪೆಟ್ರೋಲ್ ಪಂಪ್ಗೆ ನುಗ್ಗಿ ಹಣವನ್ನು ಕದಿಯಲು ಪ್ರಯತ್ನಿಸಿದ್ದಾನೆ. ಆದರೆ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುವಂತೆ ಅಲ್ಲಿದ್ದ ದೇವರ ಪೋಟೊದ ಮುಂದೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಸಿಸಿಟಿವಿ ವಿಡಿಯೊದಲ್ಲಿ, ಮಾಸ್ಕ್ ಧರಿಸಿದ ಕಳ್ಳ ಪೆಟ್ರೋಲ್ ಪಂಪ್ ಕಚೇರಿಯ ಬಳಿ ರಹಸ್ಯವಾಗಿ ಬಂದು ನಿಧಾನವಾಗಿ ಬಾಗಿಲು ತೆರೆದು ಅದನ್ನು ಸುರಕ್ಷಿತವಾಗಿ ಮುಚ್ಚಿದ್ದಾನೆ. ನಂತರ ಅವನು ತಿರುಗುತ್ತಿದ್ದಂತೆ, ಅಲ್ಲಿಯೇ ಮೂಲೆಯಲ್ಲಿರುವ ಸಣ್ಣ ದೇವರ ಪೀಠವನ್ನು ನೋಡಿದ್ದಾನೆ. ಆಗ ಅವನು ದೇವರ ಪೀಠದ ಬಳಿ ಹೋಗಿ ಮೊದಲು ತಲೆ ಬಾಗಿ ದೇವರಿಗೆ ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸಿದ್ದಾನೆ. ನಂತರ, ಹಣವನ್ನು ಎಲ್ಲಿ ಅಡಗಿಸಿಟ್ಟಿರಬಹುದು ಎಂದು ಹುಡುಕಿದ್ದಾನೆ. ಹಾಗೇ ಸಿಸಿಟಿವಿ ಕ್ಯಾಮೆರಾವನ್ನು ಹಾಳು ಮಾಡಲು ಸಹ ಪ್ರಯತ್ನಿಸಿದ್ದಾನೆ. ಆದರೆ ಹಾಗೆ ಮಾಡಲು ಸಾಧ್ಯವಾಗದೆ ಪ್ರಯತ್ನವನ್ನು ನಿಲ್ಲಿದ್ದಾನೆ ಕೊನೆಗೆ ಅವನು ಮೇಜಿನ ಕೆಲವು ಡ್ರಾಯರ್ಗಳನ್ನು ತೆರೆಯಲು ಪ್ರಯತ್ನಿಸಿದ್ದಾನೆ.
ಪೊಲೀಸರ ಪ್ರಕಾರ, ಅವನು ಪರಾರಿಯಾಗುವ ಮೊದಲು ಪೆಟ್ರೋಲ್ ಪಂಪ್ನಿಂದ ಸುಮಾರು 1.6 ಸಾವಿರ ರೂ.ಗಳನ್ನು ಕದ್ದಿದ್ದಾನೆ. ಕಳ್ಳತನದ ಸಮಯದಲ್ಲಿ, ಪೆಟ್ರೋಲ್ ಪಂಪ್ ನೌಕರರು ಸೋಯತ್ ಕಲಾನ್-ಸುಜಲ್ಪುರ ಹೆದ್ದಾರಿಯಲ್ಲಿರುವ ಆಯಿಲ್ ಬ್ಯಾಂಕಿನಲ್ಲಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
चोरी करने से पहले भगवान से लिया आशीर्वाद : Madhya Pradesh में Rajgarh जिले में एक चोर ने एक पेट्रोल पंप के कार्यालय में घुसकर लगभग 1.6 लाख रूपए चुराए #viralvideo #MadhyaPradesh #MPNews pic.twitter.com/KJcUyq48yz
— Webdunia Hindi (@WebduniaHindi) December 8, 2024
ಕಳ್ಳನು ಹಣ ಕದ್ದು ಓಡುವ ಹೊತ್ತಿಗೆ, ಪೆಟ್ರೋಲ್ ಪಂಪ್ ನೌಕರರು ಎಚ್ಚರಗೊಂಡು ಅವನನ್ನು ಬೆನ್ನಟ್ಟಲು ಪ್ರಯತ್ನಿಸಿದರು ಆದರೆ ವಿಫಲರಾದರು. ಪೊಲೀಸರು ಕಚೇರಿಯಿಂದ ಕಬ್ಬಿಣದ ರಾಡ್ ಮತ್ತು ಸೀರೆಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.ಕಳ್ಳತನ ಮಾಡುವಾಗ ದೇವರಿಗೆ ಕೈ ಮುಗಿದ ಕಳ್ಳನ ಭಕ್ತಿ ನೆಟ್ಟಿಗರನ್ನು ಸೆಳೆದಿದೆ.
ಈ ಸುದ್ದಿಯನ್ನೂ ಓದಿ: ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ರೆಸ್ಟ್ ಹೌಸ್ಗೆ ಕರೆದ ಪಿಡಬ್ಲ್ಯೂಡಿ ಎಂಜಿನಿಯರ್; ಮುಂದೇನಾಯ್ತು? ವಿಡಿಯೊ ಇದೆ
ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಥಾಣೆಯ ಕಳ್ಳನೊಬ್ಬ ಹನುಮಾನ್ ದೇವಸ್ಥಾನದಿಂದ ದೇಣಿಗೆ ಪೆಟ್ಟಿಗೆಯನ್ನು ಕದಿಯುವ ಮೊದಲು ದೇವರ ಆಶೀರ್ವಾದವನ್ನು ಕೋರಿದ್ದಾನೆ. ಈ ಘಟನೆಯನ್ನು ದೇವಾಲಯದ ಅರ್ಚಕ ಮಹಂತ್ ಮಹಾವೀರ್ ದಾಸ್ ಮಹಾರಾಜ್ ವರದಿ ಮಾಡಿದ್ದಾರೆ. ರಾತ್ರಿಯ ವೇಳೆ ಅರ್ಚಕರು ಯಾವುದೋ ಕೆಲಸಕ್ಕಾಗಿ ಹೊರಗೆ ಹೋದಾಗ ಕಳ್ಳತನ ನಡೆದಿದೆ. ಅವರು ಹಿಂತಿರುಗಿದಾಗ, 1,000 ರೂ.ಗಳನ್ನು ಹೊಂದಿರುವ ದೇಣಿಗೆ ಪೆಟ್ಟಿಗೆ ಕಾಣೆಯಾಗಿರುವುದನ್ನು ನೋಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನೌಪಾಡಾ ಪೊಲೀಸರು ದೇವಾಲಯದೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳನನ್ನು ಬಂಧಿಸಿದ್ದಾರೆ.