Tuesday, 7th January 2025

Bhagya Lakshmi Serial: ಕುಸಿದಿದ್ದ ಭಾಗ್ಯಾಳಿಗೆ ಮತ್ತೊಂದು ಆಘಾತ: ಕಾಲೇಜಿನಿಂದ ಸಸ್ಪೆಂಡ್‌ ಆದ ತನ್ವಿ

Bhagyalakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಜನರ ಮನ್ನಣೆಗೆ ಪಾತ್ರವಾಗಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಾಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ.

ಸದ್ಯ ಭಾಗ್ಯಾ-ತಾಂಡವ್‌ ಡಿವೋರ್ಸ್‌ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿದೆ. ಇದರ ನಡುವೆ ತನ್ವಿ ಕಾಲೇಜಿನಲ್ಲಿ ಭಾಗ್ಯಾಳನ್ನು ತಾಂಡವ್‌ ಮನೆಯಿಂದ ಹೊರ ಹಾಕಿರುವ ವಿಚಾರ ತಿಳಿದಿದೆ. ತನ್ನನ್ನು ರೇಗಿಸಿದ ಕ್ಲಾಸ್‌ಮೆಟ್‌ಗಳಿಗೆ ತನ್ವಿ ಹಾಕಿ ಸ್ಟಿಕ್‌ನಿಂದ ಹೊಡೆಯುತ್ತಾಳೆ. ಅದೇ ಸಮಯಕ್ಕೆ ಅಲ್ಲಿಗೆ ಪ್ರಿನ್ಸಿಪಾಲ್‌ ಬಂದು ತನ್ವಿಯನ್ನು ಆಫೀಸಿಗೆ ಬರಲು ಹೇಳಿ ಪೋಷಕರಿಗೂ ವಿಷಯ ಮುಟ್ಟಿಸುತ್ತಾರೆ.

ಹೋಟೆಲ್​ನಲ್ಲಿದ್ದ ಭಾಗ್ಯಾ ಕಾಲೇಜಿಗೆ ಬಂದು, ನೀನು ಮಾಡಿದ್ದು ತಪ್ಪು ಎಲ್ಲರ ಬಳಿ ಕ್ಷಮೆ ಕೇಳು ಎಂದು ಮಗಳಿಗೆ ಹೇಳುತ್ತಾಳೆ. ನಾನು ತಪ್ಪು ಮಾಡಿಲ್ಲ, ಇವರೆಲ್ಲಾ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ನಾನು ಅವರಿಗೆ ಹೊಡೆದದ್ದು ಎಂದು ತನ್ವಿ ಹೇಳುತ್ತಾಳೆ. ನೀನು ಅವರನ್ನು ಹೊಡೆದದ್ದಕ್ಕೆ ಅವರ ಅಪ್ಪ-ಅಮ್ಮ ಬೇಜಾರು ಮಾಡಿಕೊಳ್ಳುತ್ತಾರೆ ಸಾರಿ ಕೇಳು ಎಂದು ಮಗಳಿಗೆ ಬುದ್ಧಿವಾದ ಹೇಳುತ್ತಾಳೆ. ಬಳಿಕ ತನ್ವಿ ಸಾರಿ ಕೇಳುತ್ತಾಳೆ.

ಆದರೆ, ಪ್ರಿನ್ಸಿಪಾಲ್‌ ಈ ರೀತಿಯ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಅವಶ್ಯಕತೆ ಇಲ್ಲ, ಸಸ್ಪೆಂಡ್‌ ಮಾಡುತ್ತಿದ್ದೇನೆ ಎನ್ನುತ್ತಾರೆ. ಈ ಮಾತು ಕೇಳಿ ಭಾಗ್ಯಾಗೆ ಶಾಕ್‌ ಆಗಿದೆ. ದಯವಿಟ್ಟು ವಿದ್ಯಾರ್ಥಿಗಳ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡುತ್ತಾಳೆ. ಆದರೆ, ಇದಕ್ಕೆ ಪ್ರಿನ್ಸಿಪಾಲ್‌ ಒಪ್ಪುವುದಿಲ್ಲ. ತನ್ವಿ ತಾನು ಕಾಲೇಜಿನಿಂದ ಸಸ್ಪೆಂಡ್‌ ಆದ ವಿಚಾರನ್ನು ಮನೆಯಲ್ಲಿ ಹೇಳಿ ಅಳುತ್ತಾಳೆ. ಒಟ್ಟಾರೆ ಭಾಗ್ಯಲಕ್ಷ್ಮೀ ಧಾರಾವಾಹಿ ದಿನದಿಂದ ದಿನಕ್ಕೆ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ.

ಇನ್ನು ತನ್ನನ್ನು ತಾನು ಸಂಪೂರ್ಣವಾಗಿ ಬದಲಾಯಿಸಿಕೊಂಡು ತನ್ನ ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಟ್ಟಿರುವ ಭಾಗ್ಯಳ ಈ ದಿಟ್ಟ ತಿರುವಿನ ಕ್ಷಣವನ್ನು ಸಂಭ್ರಮಿಸಲು ಕಲರ್ಸ್ ಕನ್ನಡ ‘‘ನಾನು ಭಾಗ್ಯ’’ ಅನ್ನುವ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನಕ್ಕೆಂದೇ #IAMBHAGYA ಅನ್ನುವ ಹ್ಯಾಷ್ ಟ್ಯಾಗ್ ಆರಂಭಿಸಲಾಗಿದೆ. ಇದರ ಮುಖಾಂತರ ಎಲ್ಲ ಹೆಣ್ಣುಮಕ್ಕಳನ್ನು ಸಮಾಜದ ಒತ್ತಡಗಳನ್ನು ಮೀರಿ ತಮ್ಮ ಕನಸನ್ನು ಬೆಂಬತ್ತುವಂತೆ ಉತ್ತೇಜಿಸುವುದು ಕಲರ್ಸ್ ಕನ್ನಡದ ಉದ್ದೇಶ.

BBK 11: ಕನ್ಫೆಷನ್ ರೂಮ್​ನಲ್ಲಿರುವ ಚೈತ್ರಾ ಕುಂದಾಪುರ ರೀ ಎಂಟ್ರಿ ಯಾವಾಗ?: ಇಲ್ಲಿದೆ ಮಾಹಿತಿ