Friday, 27th December 2024

Pushpa 2: ʻಕರ್ಣಿ ಸೇನೆ ನಿಮ್ಮ ಮನೆಗೆ ನುಗ್ಗಿ ಥಳಿಸುತ್ತೆʼ- ಪುಷ್ಪ 2 ನಿರ್ಮಾಪಕರಿಗೆ ಬೆದರಿಕೆ

Shekhawat

ನವದೆಹಲಿ: ರಜಪೂತ ನಾಯಕ ರಾಜ್ ಶೇಖಾವತ್(Raj Shekhawat) ‘ಪುಷ್ಪ 2′(Pushpa 2) ಚಿತ್ರವು ‘ಕ್ಷತ್ರಿಯ’ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ. ಚಿತ್ರದಲ್ಲಿ ಫಹದ್ ಫಾಸಿಲ್ ಐಪಿಎಸ್ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ನಟಿಸಿದ್ದು, ಇದರಿಂದ ಆ ಸಮುದಾಯಕ್ಕೆ ಅವಮಾನ ಆಗಿದೆ ಎಂದು ಕರ್ಣಿ ಸೇನೆಯ ನಾಯಕ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಶೇಖಾವತ್‌, ಪುಷ್ಪಾ 2 ಚಿತ್ರದಲ್ಲಿ ಶೇಖಾವತ್ ನೆಗೆಟಿವ್ ಪಾತ್ರವಿದೆ, ಕ್ಷತ್ರಿಯರಿಗೆ ಮತ್ತೊಮ್ಮೆ ಅವಮಾನ, ಕರ್ಣಿ ಸೈನಿಕರು ಸಿದ್ಧರಾಗಿ, ಚಿತ್ರದ ನಿರ್ಮಾಪಕರನ್ನು ಶೀಘ್ರದಲ್ಲೇ ಥಳಿಸಲಾಗುವುದು” ಎಂದು ಹೇಳಿದ್ದಾರೆ. ಚಿತ್ರದಲ್ಲಿನ ‘ಶೆಖಾವತ್’ ಪದವನ್ನಿಟ್ಟುಕೊಂಡು ಪದೇ ಪದೆ ಆ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

“ಚಿತ್ರವು ಕ್ಷತ್ರೀಯರಿಗೆ ಘೋರ ಅವಮಾನ ಮಾಡಿದೆ. ‘ಶೇಖಾವತ್’ ಸಮುದಾಯವನ್ನು ಕಳಪೆಯಾಗಿ ಪ್ರಸ್ತುತಪಡಿಸಲಾಗಿದೆ. ಈ ಉದ್ಯಮವು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಕ್ಷತ್ರೀಯರನ್ನು ಅವಮಾನಿಸುತ್ತಿದೆ ಮತ್ತು ಅವರು ಪದೇ ಪದೆ ಕೆಲಸ ಮಾಡುತ್ತಿದೆ. ಸಿನಿಮಾದ ನಿರ್ಮಾಪಕರು ಚಿತ್ರದಿಂದ ‘ಶೇಖಾವತ್’ ಪದದ ನಿರಂತರ ಬಳಕೆಯನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ, ಕರ್ಣಿ ಸೇನೆಯು ಅವರನ್ನು ಅವರ ಮನೆಯೊಳಗೆ ನುಗ್ಗಿ ಥಳಿಸುತ್ತದೆ ಮತ್ತು ಯಾವುದೇ ಮಟ್ಟಕ್ಕೆ ಹೋಗಲು ಸಿದ್ದವಾಗಿದೆ. ಎಂದು ರಾಜ್ ಶೇಖಾವತ್ ಎಚ್ಚರಿಕೆ ನೀಡಿದ್ದಾರೆ.

ಏತನ್ಮಧ್ಯೆ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಬಾಕ್ಸ್ ಆಫೀಸ್‌ನಲ್ಲಿ ಘರ್ಜಿಸುತ್ತಿದೆ. ಗುರುವಾರ ಚಿತ್ರ ಬಿಡುಗಡೆ ಮಾಡಿದಾಗಿನಿಂದ ಚಿತ್ರಮಂದಿರಗಳು ‘ಹೌಸ್‌ಫುಲ್’ ಪ್ರದರ್ಶನಗಳಿಗೆ ಸಾಕ್ಷಿಯಾಗುತ್ತಿವೆ. ‘ಪುಷ್ಪ 2’ ಚಿತ್ರತಂಡದ ಪ್ರಕಾರ, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ 294 ಕೋಟಿ ರೂ. ಕಲೆಕ್ಷನ್‌ ಗಳಿಸಿದೆ. ಆಮೂಲಕ ಪುಷ್ಪ 2 ಹಿಂದಿ ಭಾಷೆಯಲ್ಲಿ ಶಾರುಖ್ ಖಾನ್ ಅವರ ಜವಾನ್‌ನ ಆರಂಭಿಕ ದಿನದ ದಾಖಲೆಯನ್ನು ಬ್ರೇಕ್‌ ಮಾಡಿದೆ.

ಈ ಸುದ್ದಿಯನ್ನೂ ಓದಿ: Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ಕೊಂಚ ತಗ್ಗಿದ ‘ಪುಷ್ಪ 2’ ಕಲೆಕ್ಷನ್‌; 2 ದಿನದ ಗಳಿಕೆ ಎಷ್ಟು?