ನವದೆಹಲಿ: ಲೋಕಸೇವಾ ಆಯೋಗದ(UPSC Result 2024) ಮುಖ್ಯ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. 2024ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು UPSCಯ ಅಧಿಕೃತ ವೆಬ್ಸೈಟ್ upsc.gov.inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಅಂತಿಮ ಫಲಿತಾಂಶದ ಪ್ರಕಟಣೆಯ ದಿನಾಂಕದಿಂದ 15 ದಿನಗಳ ಒಳಗೆ ಆಯೋಗದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಮತ್ತು 30 ದಿನಗಳ ಅವಧಿಯವರೆಗೆ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಲಸಲಾಗಿದೆ.
ಲೋಕ ಸೇವಾ ಆಯೋಗದ ಮುಖ್ಯ ಪರೀಕ್ಷೆ 2024 ಅನ್ನು ಸೆಪ್ಟೆಂಬರ್ 20, 21, 22, 28, ಮತ್ತು 29, 2024 ರಂದು ನಡೆಸಲಾಯಿತು. ಇದು ಎರಡು ಸೆಶನ್ಗಳಲ್ಲಿ ನಡೆದಿತ್ತು. ಮೊದಲ ಪಾಳಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೇ ಪಾಳಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ.
1056 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ನೋಂದಣಿ ಪ್ರಕ್ರಿಯೆಯು ಫೆಬ್ರವರಿ 14 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 5, 2024 ರಂದು ಕೊನೆಗೊಂಡಿತು. ಪೂರ್ವಭಾವಿ ಪರೀಕ್ಷೆಯನ್ನು ಜೂನ್ 16, 2024 ರಂದು ನಡೆಸಲಾಯಿತು ಮತ್ತು ಫಲಿತಾಂಶವನ್ನು ಜುಲೈ 1, 2024 ರಂದು ಪ್ರಕಟಿಸಲಾಯಿತು.
✨ UPSC CSE Mains 2024 Result ✨https://t.co/H661YDWxkZ pic.twitter.com/CA7EaTjILZ
— UPSCprep.com (@UPSCprepIAS) December 9, 2024
UPSC CSE ಮುಖ್ಯ ಫಲಿತಾಂಶವನ್ನು ಈ ರೀತಿ ಪರಿಶೀಲಿಸಿ:
- UPSC upsc.gov.in ನ ಅಧಿಕೃತ ವೆಬ್ಸೈಟ್ಗೆ ಹೋಗಿ.
- ಮುಖಪುಟದಲ್ಲಿ ಲಭ್ಯವಿರುವ UPSC ನಾಗರಿಕ ಸೇವಾ ಮುಖ್ಯ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅಭ್ಯರ್ಥಿಗಳು ದಾಖಲಾತಿ ಸಂಖ್ಯೆಯನ್ನು ಪರಿಶೀಲಿಸಬಹುದಾದ ಹೊಸ ಪುಟವು ತೆರೆಯುತ್ತದೆ.
- ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಪ್ರತಿಯನ್ನು ಇಟ್ಟುಕೊಳ್ಳಿ.
ಈ ಸುದ್ದಿಯನ್ನೂ ಓದಿ: PSI Exam: ಪಿಎಸ್ಐ ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್