Friday, 27th December 2024

Viral News: ಸ್ವಂತ ಸಹೋದರನೊಂದಿಗೆ ಹಾಸಿಗೆ ಹಂಚಿಕೊಂಡು ಪತ್ನಿಯ ಕೈಯಲ್ಲಿ ಸಿಕ್ಕಿಬಿದ್ದ ಪತಿ; ಮುಂದೇನಾಯ್ತು…?

Viral News

ನವದೆಹಲಿ: ಸ್ವಂತ ಸಹೋದರನ ಜತೆ ಅನೈತಿಕ ಸಂಬಂಧ ಹೊಂದಿದ್ದ ಪತಿಯೊಬ್ಬ ರೆಡ್‌ಹ್ಯಾಂಡಾಗಿ ಪತ್ನಿ ಕೈಗೆ ಸಿಕ್ಕಿಬಿದ್ದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ವಿದೇಶಿ ಮಹಿಳೆಯೊಬ್ಬರು ಪತಿ ವೈವಾಹಿಕ ಜೀವನದಲ್ಲಿ ತನಗೆ ದ್ರೋಹ ಮಾಡಿದ್ದು, ಈ ಸತ್ಯವು ತಾನು ನಿರೀಕ್ಷಿಸಿದ್ದಕ್ಕಿಂತ ಕೆಟ್ಟದಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತನ್ನ ಪತಿ ಆತನ ಸ್ವಂತ ಸಹೋದರನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದು, ಆತ ತನಗೆ ದ್ರೋಹ ಮಾಡಿದ್ದಾನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಮಹಿಳೆಯ ಪತಿ ಅವರ ಮೇಲೆ ಸ್ವಲ್ಪವೂ ಪ್ರೀತಿ ತೋರಿಸುತ್ತಿರಲಿಲ್ಲವಂತೆ. ಇದನ್ನು ಗಮನಿಸಿದ ಅವರು ತನ್ನ ಪತಿಯ ಮೇಲೆ ಅನುಮಾನಗೊಂಡು ಅದನ್ನು ಪರೀಕ್ಷಿಸಿದಾಗ ಆಕೆಗೆ ಘೋರ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾರಂತೆ. ರೆಡ್ಡಿಟ್ ಪೋಸ್ಟ್‌ನಲ್ಲಿ, ಈ ಆಘಾತಕಾರಿ ಘಟನೆಗಳನ್ನು ವಿವರಿಸಿದ್ದಾರೆ.

Viral News

ಪತಿಯ ಅಸಹ್ಯಕರ ನಡವಳಿಕೆಯ ಬಗ್ಗೆ ತಿಳಿದ ನಂತರ ಮಹಿಳೆ ಆತನ ಜೊತೆ ಇದ್ದರೆ ನರಕದಲ್ಲಿ ಇದ್ದಂತೆ ಎಂದು ಹೇಳಿದ್ದಾರೆ. ಅವರು ಮತ್ತು ಅವರ ಪತಿ ಒಟ್ಟು ಎಂಟು ವರ್ಷಗಳ ಕಾಲ ಒಟ್ಟಿಗೆ ಇದ್ದರು ಮತ್ತು ಐದು ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ. ಒಂದು ದಿನ, ಮಹಿಳೆ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಭೇಟಿ ಮಾಡಲು  ತನ್ನ ಗಂಡನನ್ನು ಮನೆಯಲ್ಲಿ ಬಿಟ್ಟು ತಾಯಿಯ ಮನೆಗೆ ಹೋಗಿದ್ದಾರಂತೆ. ಪತ್ನಿ ಇಲ್ಲದ ವೇಳೆ ಮಹಿಳೆಯ ಪತಿ ತನ್ನ ಸಹೋದರನ ಹುಟ್ಟುಹಬ್ಬವನ್ನು ಆಚರಿಸಲು ಫ್ಲ್ಯಾನ್‌ ಮಾಡಿದ್ದಾರಂತೆ. ಆದರೆ ಮಹಿಳೆ ಗಂಡನಿಗೆ ಸರ್‌ಪ್ರೈಸ್‌ ನೀಡಲು ಒಂದು ದಿನ ಮುಂಚಿತವಾಗಿಯೇ ಮನೆಗೆ ಬಂದಾಗ ಶಾಕ್‌ ಆಗಿದ್ದಾರಂತೆ. ಪತಿ ಹಾಗೂ ಅವನ ಸಹೋದರನ ಜತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವುದನ್ನು ಮಹಿಳೆ ಕಣ್ಣಿಗೆ ಬಿದ್ದಿದೆ.

ಈ ವಿಚಾರದ ಬಗ್ಗೆ ಅವರು ಪತಿಯ ಬಳಿ ಪ್ರಶ್ನಿಸಿದಾಗ ವಾಗ್ವಾದ ನಡೆಯಿತಂತೆ.  ಆ ನಡುವೆ ಮಹಿಳೆ ಪತಿಯ ಮೊಬೈಲ್ ಚೆಕ್ ಮಾಡಿದಾಗ ಅದರಲ್ಲಿ ಸಹೋದರನ ಜೊತೆ ಅಶ್ಲೀಲ ಚ್ಯಾಟ್‌ ಮಾಡಿರುವುದು ಗಮನಕ್ಕೆ ಬಂದಿದೆ. ಆದರೆ, ಆ ರಾತ್ರಿ ಅವರ ಪತಿ ಕಣ್ಣೀರಿಡುತ್ತ ಪತ್ನಿಯ ಮುಂದೆ ಎಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾನಂತೆ. ಪತಿಯು ತನ್ನ ಸಹೋದರನೊಂದಿಗೆ ಆನ್-ಆಫ್ ಸಂಬಂಧವನ್ನು ಹೊಂದಿದ್ದಾನೆ. ಅವರು ಹತ್ತು ವರ್ಷಗಳ ಹಿಂದೆ ಅವರ ನಡುವೆ ಈ ಲೈಂಗಿಕ ಸಂಬಂಧ ಶುರುವಾಗಿರುವುದಾಗಿ ವಿವರಿಸಿದ್ದಾನೆ.

ಈ ಸುದ್ದಿಯನ್ನೂ ಓದಿ:ಮಾನಸಿಕ ಅಸ್ವಸ್ಥ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ

ತನ್ನ ವಿಚ್ಛೇದಿತ ಅತ್ತೆ ಮಾವಂದಿರು ತಮ್ಮ ಮಕ್ಕಳ  ಅನುಚಿತ ಸಂಬಂಧದ ಬಗ್ಗೆ ತಿಳಿದು ಅವರಿಂದ ದೂರವಿದ್ದಾರೆ. ಹಾಗಾಗಿ ತಾನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ತಮಗೆ ಪತಿಯ ಮುಖ ನೋಡಲು ಆಗುತ್ತಿಲ್ಲ ಎಂದು ಮಹಿಳೆ ಪೋಸ್ಟ್‌ನಲ್ಲಿ ದುಃಖವನ್ನು ಹಂಚಿಕೊಂಡಿದ್ದಾರೆ.