ನವದೆಹಲಿ: ಗುರುಗ್ರಾಮದ ಜನಪ್ರಿಯ ಕ್ಲಬ್ ಎದುರು ಭಾರೀ ಬಾಂಬ್ ಸ್ಫೋಟ(Bomb Blast) ಸಂಭವಿಸಿದೆ. ಗುರುಗ್ರಾಮದ (Gurugram) ಸೆಕ್ಟರ್ 29 ರಲ್ಲಿಇಂದು ಮಧ್ಯಾಹ್ನ ಈ ಬಾಂಬ್ ಸ್ಫೋಟ ಸಂಭವಿಸಿದೆ. ಎರಡು ಕಚ್ಚಾ ಬಾಂಬ್ಗಳನ್ನು ಎಸೆಯಲಾಗಿದ್ದು, ಒಂದು ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
Haryana: A bomb blast occurred outside a club in Gurugram's Sector 29, where two country-made bombs were thrown, one of which exploded. An NIA team, along with Gurugram police, is investigating the incident due to suspected gangster involvement pic.twitter.com/PjcngT0RWF
— IANS (@ians_india) December 10, 2024
ಆರೋಪಿ ಸೆರೆ
ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಆರೋಪಿಯನ್ನನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಉತ್ತರ ಪ್ರದೇಶದ ಮೀರತ್ ನಿವಾಸಿಯಾಗಿರುವ 29 ವರ್ಷದ ಸಚಿನ್ ಎಂದು ಗುರುತಿಸಲಾಗಿದ್ದು, ಆತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ನಂಟು ಹೊಂದಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಸ್ಫೋಟದಿಂದಾಗಿ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಸೂಚನಾ ಫಲಕ ಮತ್ತು ಸ್ಕೂಟರ್ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ಕಮಿಷನರ್ ವರುಣ್ ದಹಿಯಾ ಮಾತನಾಡಿ, ಆರೋಪಿಯು ಮಾದಕ ದ್ರವ್ಯದ ಅಮಲಿನಲ್ಲಿದ್ದನು. ನಾವು ಸ್ಥಳಕ್ಕೆ ಆಗಮಿಸುವ ವೇಳೆಗೆ, ಆತ ಒಂದೆರಡು ಬಾಂಬ್ಗಳನ್ನು ಎಸೆದಿದ್ದ. ಕರ್ತವ್ಯದಲ್ಲಿದ್ದ ಅಧಿಕಾರಿಗಳು ಆರೋಪಿ ಇನ್ನೂ ಎರಡು ಬಾಂಬ್ಗಳನ್ನು ಎಸೆಯುವ ಮೊದಲು ಆತನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಆರೋಪಿ ಬಳಿಯಿಂದ ಬಾಂಬ್ಗಳ ಜೊತೆಗೆ ದೇಸೀ ನಿರ್ಮಿತ ಆಯುಧವನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಾಳಿಯು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ ಎಂದು ದಹಿಯಾ ಹೇಳಿದ್ದಾರೆ. ಸದ್ಯ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದು, ಘಟನೆಗೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದ ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಈ ಸುದ್ದಿಯನ್ನೂ ಓದಿ : Bomb Threat: ಪ್ರಯಾಣಿಕನ ಬಳಿ ಬಾಂಬ್ ಇದೆ… ಮುಂಬೈ ಏರ್ಪೋರ್ಟ್ಗೆ ಮತ್ತೆ ಬೆದರಿಕೆ