Friday, 27th December 2024

BBK 11: ಬರೀ ಕಿತ್ತಾಟ, ಜಗಳ: ಮನೆಗೆ ಬಂದ ಅತಿಥಿಗಳಿಗೆ ಗೌರವ ಕೊಡದ ಸ್ಪರ್ಧಿಗಳು

BBK 11 Fight

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಟಾಸ್ಕ್​ಗಳು ಕಠಿಣವಾಗುತ್ತಾ ಸಾಗುತ್ತಿದ್ದು, ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಹೀಗಾಗಿ ಈ ವಾರದ ಮಧ್ಯೆ ಶಾಕಿಂಗ್ ಎಲಿಮಿನೇಷನ್ ಇದೆಯೇ ಎಂಬುದು ನೋಡಬೇಕಿದೆ. ಇದರ ನಡುವೆ ಮನೆಯೊಳಗೆ ಸೀನಿಯರ್ ಸ್ಪರ್ಧಿಗಳು ಅತಿಥಿಯಾಗಿ ಬರುತ್ತಿದ್ದಾರೆ. ಕಳೆದ ಸೀಸನ್ 10 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ.

ನಿನ್ನೆ ಡ್ರೋನ್‌ ಪ್ರತಾಪ್‌, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ಆಗಮಿಸಿ ಸ್ಪರ್ಧಿಗಳಿಗೆ ಸರ್ಪ್ರೈಸ್‌ ನೀಡಿದರು. ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಸಿದರು. ಇಂದು ಕಾರ್ತಿಕ್ ಹಾಗೂ ನಮ್ರತಾ ಬಂದಿದ್ದಾರೆ. ಆದರೆ, ಅತಿಥಿಗಳಾಗಿ ಬಂದ ಎರಡನೇ ದಿನವೂ ಸ್ಪರ್ಧಿಗಳು ತಮ್ಮ ಹಳೆಯ ಚಾಳಿ ಬಿಟ್ಟಿಲ್ಲ. ಅದೇ ಜಗಳ, ಕಿತ್ತಾಟ ಇವರು ಎದುರುಕೂಡ ಮುಂದುವರೆಸಿದ್ದಾರೆ.

ನಿನ್ನೆ ಉಗ್ರಂ ಮಂಜು ಹಾಗೂ ಶಿಶಿರ್ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ ಜಗಳ ಆಗಿತ್ತು. ಬಂದ ಅತಿಥಿಗಳ ಮುಂದೆಯೇ ಕಿತ್ತಾಡಿಕೊಂಡಿದ್ದರು. ಇಂದು ಧನರಾಜ್ ಆಚಾರ್ ಹಾಗೂ ರಜತ್ ಕಿಶನ್ ನಡುವೆ ಮತ್ತೊಂದು ದೊಡ್ಡ ಜಗಳ ನಡೆದಿದೆ. ಇದು ಮುಂದಿನ ಹಂತಕ್ಕೋಗಿ ಕೈ-ಕೈ ಮಿಲಾಯಿಸಿದ್ದಾರೆ.

ತನಿಷಾ ಮುಂದೆ ಮಂಜು-ಶಿಶಿರ್ ಕಿತ್ತಾಟ:

ಶಿಶಿರ್ ಅವರನ್ನ ನಾಮಿನೇಟ್ ಮಾಡಿದ ಮಂಜು ಅವರು, ಶಿಶಿರ್ ನೀವು ಸುಮಾರಷ್ಟು ವಿಷಯಗಳಲ್ಲಿ ಸ್ಟ್ಯಾಂಡ್ ತೆಗೆದುಕೊಳ್ಳಬಹುದಿತ್ತು, ಆದರೆ ಆ ರೀತಿ ಮಾಡಲಿಲ್ಲ ಎಂದಿದ್ದಾರೆ. ಇದರಿಂದ ಕೆರಳಿರುವ ಶಿಶಿರ್, ನಿಮಗೆ ಇಷ್ಟ ಆಗುವಂತ ನಿರ್ಧಾರಗಳನ್ನ ನಾನು ಯಾಕೆ ತೆಗೆದುಕೊಳ್ಳಲಿ. ಮನೆಯಲ್ಲಿ ನೀವೇನು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನೀವೇನು ಮಾಡಿದ್ದೀರಾ. ನನಗೂ ನಿನಗೂ ಹೋಲಿಕೆಯೇ ಇಲ್ಲ ಎಂದು ಮಂಜು ಹೇಳಿದ್ದಾರೆ. ನಿನಗೆ ಹೋಲಿಕೆ ಮಾಡಿಕೊಂಡು ಕೂತುಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ನಿಮ್ಮಿಂದ ನಾನು ನೋಡಿ ಕಲಿತುಕೊಳ್ಳಬೇಕಾ ಎಂದು ಜಗಳವಾಡಿದರು.

ಇಂದು ಧನರಾಜ್-ರಜತ್ ಜಗಳ:

ಇಂದು ಕಾರ್ತಿಕ್ ಹಾಗೂ ನಮ್ರತಾ ಮನೆಗೆ ಬಂದಿದ್ದ ವೇಳೆ ಧನರಾಜ್,​ ರಜತ್​ ಅವರನ್ನು ನಾಮಿನೇಟ್​ ಮಾಡಿದ್ದಾರೆ. ಇದೇ ವಿಚಾರಕ್ಕೆ ರಜತ್​ ಧನರಾಜ್​ ಜೊತೆಗೆ ಕೈ ಕೈ ಮಿಲಾಯಿಸಿದ್ದಾರೆ. ತನ್ನನ್ನು ನಾಮಿನೇಟ್ ಮಾಡಿದ್ದಕ್ಕೆ ಧನರಾಜ್ ವಿರುದ್ಧ ರೊಚ್ಚಿಗೆದ್ದ ರಜತ್, ಯಾವನೋ ನೀಡಿದ್ದ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡ್ತಾ ಇದ್ದಾನೆ ಗುಗ್ಗು ನನ್ನ ಮಗ. ನಾನು ಎಂಥ ತಲೆ ಕೆಟ್ಟ ನನ್ನ ಮಗ ಅಂತ ನಿನಗಿನ್ನೂ ಗೊತ್ತಿಲ್ಲ. ನನ್ನ ಹತ್ರ ಇವೆಲ್ಲಾ ಆಟಗಳನ್ನ ಆಡ್ಬೇಡ. ಅದಕ್ಕೆ ಕಣೋ ನಿನಗೆ ಮಗು ಅಂತ ಕರೆಯೋದು ಎಂದಿದ್ದಾರೆ.

ಇದಕ್ಕೆ ಕೌಂಟರ್ ಕೊಟ್ಟ ಧನರಾಜ್, ಅಂಕಲ್, ನಿಮ್ಮ ಲೆವೆಲ್‌ ನನಗೆ ಗೊತ್ತಾಗಿದೆ. ನಾನು ಆಟ ಆಡೋದಕ್ಕೆ ಬಂದಿರುವುದು ಇಲ್ಲಿಗೆ ಎಂದು ಹೇಳಿದ್ದಾರೆ. ನಂತರ ಇಬ್ಬರ ನಡುವಿನ ಗುದ್ದಾಟ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮನೆಯವರು ಬಿಡಿಸಲು ಪ್ರಯತ್ನಿಸಿದರೂ, ಪರಸ್ಪರ ಕೈಮಾಡಲು ಇಬ್ಬರೂ ಮುಂದಾಗಿದ್ದಾರೆ. ಬಳಿಕ ಓಡಿ ಬಂದ ಮಂಜಣ್ಣ ಹಾಗೂ ಗೌತಮಿ ಗಲಾಟೆ ನಿಲ್ಲಿಸುವ ಪಯತ್ನ ಮಾಡಿದ್ದಾರೆ.

BBK 11: ನಾಮಿನೇಷನ್ ಪ್ರಕ್ರಿಯೆ ವೇಳೆ ಕೈ-ಕೈ ಮಿಲಾಯಿಸಿದ ರಜತ್-ಧನರಾಜ್