Monday, 23rd December 2024

Namma Metro: ಇಂದು ನಮ್ಮ ಮೆಟ್ರೋ ಸೇವೆ ಯಥಾಪ್ರಕಾರ

namma metro

ಬೆಂಗಳೂರು: ‘ನಮ್ಮ ಮೆಟ್ರೋ’ (Namma Metro) ಸೇವೆಯಲ್ಲಿ ಡಿ.11ರಂದು (ಬುಧವಾರ) ಯಾವುದೇ ವ್ಯತ್ಯಯ ಇರುವುದಿಲ್ಲ. ವೇಳಾಪಟ್ಟಿಯಂತೆ ಮೆಟ್ರೋ ರೈಲುಗಳು ಸಂಚರಿಸಲಿದೆ ಎಂದು BMRCL ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ (SM Krishna) ಅವರ ನಿಧನದ ಹಿನ್ನೆಲೆ ಬುಧವಾರ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋ’ (Namma Metro) ಕೂಡ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುಳ್ಳು ವದಂತಿ ಹರಡಿದಾಡಿತ್ತು. ಇದಕ್ಕೆ ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿದೆ.

ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಬುಧವಾರ ಕಾರ್ಯನಿರ್ವಹಿಸುತ್ತಿಲ್ಲವಾದರೂ ‘ನಮ್ಮ ಮೆಟ್ರೋ’ ಎಂದಿನಂತೆ ಸೇವೆ ಸಲ್ಲಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಎಂದು ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಜನವರಿ ಅಂತ್ಯಕ್ಕೆ ಹಳದಿ ಮಾರ್ಗ ಅನುಮಾನ

ಹಳದಿ ಮಾರ್ಗದ ಮೆಟ್ರೋ (Metro Yellow Line) ಸಂಚಾರವನ್ನು 2025ರ ಜನವರಿಗೆ ಆರಂಭಿಸುವುದಾಗಿ ಬಿಎಂಆರ್‌ಸಿಎಲ್ (BMRCL) ಹೇಳಿಕೊಂಡಿದೆ. ಆದರೆ ಮೆಟ್ರೋ ಸಂಚಾರಕ್ಕೆ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಿವೆ. ಹಳದಿ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ಸಂಚಾರ ಆರಂಭವಾಗಬೇಕಾದ್ರೆ ಸಂಪೂರ್ಣ ಟ್ರೈನ್‍ಗಳ ಅವಶ್ಯಕತೆ ಇದೆ. ಪೂರ್ಣ ಪ್ರಮಾಣದ ಟ್ರೈನ್‍ಗಳು ಇನ್ನೂ ಬಂದಿಲ್ಲ. ಇದರಿಂದ ಹಳದಿ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ಮೆಟ್ರೋ ಸಂಚಾರ ಆರಂಭವಾಗತ್ತಾ ಎಂಬ ಅನುಮಾನ ಕಾಡಿದೆ.

ಮಾರ್ಗದ ವಾಣಿಜ್ಯ ಸಂಚಾರಕ್ಕೆ ಬಿಎಂಆರ್‌ಸಿಎಲ್‌ಗೆ ಬೇಕಿರೋದು 8 ಸೆಟ್‍ನಷ್ಟು ಟ್ರೈನ್‍ಗಳು ಸದ್ಯ ಇರೋದು ಮೂರು ಸೆಟ್‍ಗಳು ಮಾತ್ರ. ಹೀಗಿರುವಾಗ ಉಳಿದ ಐದು ಸೆಟ್‍ಗಳು ಇದೇ ತಿಂಗಳ ಒಳಗಾಗಿ ಬಂದರೂ, ಅವನ್ನು ಟ್ರ್ಯಾಕ್‍ಗೆ ಇಳಿಸಿ, ಪರೀಕ್ಷೆ ಮುಗಿಸಿ ಸಂಚಾರಕ್ಕೆ ಅಣಿ ಮಾಡೋಕೆ ಸಮಯವಕಾಶ ಬೇಕಾಗಲಿದೆ. ಹೀಗಿರುವಾಗ ಜನವರಿ ಅಂತ್ಯಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿದೆ.