ಜಕಾರ್ತ: ಬಾಲಕ(12) ನನ್ನು ಗಾಳಿಪಟ ಎಳೆದೊಯ್ದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.
30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿ.1ರಂದು ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ ಈ ಘಟನೆ ನಡೆದಿದೆ.
30 ಅಡಿ ಎತ್ತರಕ್ಕೆ ಗಾಳಿಪಟದ ಜತೆ ಹಾರಿರುವ ಬಾಲಕ ನಂತರ ಗಾಳಿಪಟದ ದಾರ ತುಂಡಾಗಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ.
ತನಗಿಂತ ಸುಮಾರು ಮೂರು ಪಟ್ಟು ದೊಡ್ಡದಾದ ಡ್ರ್ಯಾಗನ್ ಪತಂಗವನ್ನು ಬಾಲಕ ಹಾರಿಸುತ್ತಿದ್ದನು. ರಭಸವಾಗಿ ಗಾಳಿ ಬೀಸು ತ್ತಿತ್ತು. ಬಾಲಕ ನೋಡು ನೋಡುತ್ತಿದ್ದಂತೆಯೇ ಡ್ರ್ಯಾಗನ್ ಗಾಳಿಪಟದ ತಂತಿಗೆ ಸಿಲುಕಿಕೊಂಡಿದ್ದಾನೆ. ತನ್ನ ಜತೆಗೆ ಬಾಲಕನನ್ನೂ ಎಳೆದೊಯ್ದಿದೆ.
ಬಾಲಕ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಅಣ್ಣಂದಿರು ಗಾಳಿಪಟ ಹಾರಿಸುತ್ತಿದ್ದರು. ಈ ವೇಳೆ 12 ವರ್ಷದ ಬಾಲಕ ಅದನ್ನು ಹಿಡಿದಿದ್ದಾನೆ. ಆದರೆ ಆತನಿಗಿಂತ ಎರಡು ಪಟ್ಟು ದೊಡ್ಡ ಆಕಾರದ ಗಾಳಿಪಟ ಇದಾಗಿದ್ದು, ಗಾಳಿಯ ರಭಸಕ್ಕೆ ಸಿಲುಕಿಕೊಂಡ ಈತನು ಮೇಲಕ್ಕೆ ಹೋಗಿದ್ದಾನೆ. ಇದರಿಂದಾಗಿ ಈ ಅಚಾತುರ್ಯ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.