Sunday, 22nd December 2024

Chikkaballapur Crime: ಗುಮಾನಿಗೆ ಕಾರಣವಾದ ವ್ಯಕ್ತಿಯ ಅನುಮಾನಾಸ್ಪದ ಸಾವು

ಚಿಂತಾಮಣಿ: ನಗರದ ಕೆನರಾಬ್ಯಾಂಕ್ ರಸ್ತೆಗೆ ಹೊಂದಿಕೊAಡಿರುವ ಹಳೇ ಕಟ್ಟಿಗೆ ಸಂತೆಯ ಮೀನಿನ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು,ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಪೊಲೀ ಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಇನ್ನು ಮೃತ ವ್ಯಕ್ತಿಯನ್ನು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಜಕುಂಟ್ಲಹಳ್ಳಿ ಗ್ರಾಮದ  ೩೮ ವರ್ಷದ ತಿಪ್ಪಣ್ಣ ಬಿನ್ ಪೆದ್ದಣ್ಣ ಎಂದು ಗುರುತಿಸಲಾಗಿದೆ.

ಈತ ಹಾಲಿ ಚಿಂತಾಮಣಿ ನಗರದ ಗಾಂಧಿನಗರ ಬಡಾವಣೆಯಲ್ಲಿ ವಾಸವಿದ್ದುಕೊಂಡು ಬೆಂಗಳೂರಿನ ವಿಧಾನ ಸೌಧದ ಬಳಿ ಬರುವ ಪೋಸ್ಟ್ ಆಫೀಸ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಬೆಂಗಳೂರಿನಿAದ ರಾತ್ರಿಯೇ ಬಂದಿದ್ದ ಈತ ಶವವಾಗಿ ಚಿಂತಾಮಣಿ ನಗರದ ಮೀನಿನ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನು ನಗರಠಾಣೆಯ ಪೊಲೀಸರು ಸಮೀಪದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು,ಮೃತವ್ಯಕ್ತಿ ನಡೆದುಕೊಂಡು ಬಂದು ಅಲ್ಲಿ ಬಿದ್ದು ಹೋಗಿರುವುದು ಸೆರೆಯಾಗಿದೆ ಎನ್ನಲಾಗಿದ್ದು, ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆ ನಡೆಸಿದ ನಂತರವಷ್ಟೇ ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಪಿ.ಮುರಳೀಧರ್,ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಮತ್ತು ಅಪರಾಧ ದಳದ ಸಿಬ್ಬಂದಿ ಮತ್ತು ಚಿಕ್ಕಬಳ್ಳಾಪುರ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.