Sunday, 5th January 2025

WPL Auction 2025: ನಾಳೆ ಡಬ್ಲ್ಯುಪಿಎಲ್​ ಮಿನಿ ಹರಾಜು; ಕಣದಲ್ಲಿ 120 ಆಟಗಾರ್ತಿಯರು

ಬೆಂಗಳೂರು: ಬಹುನಿರೀಕ್ಷಿತ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)-2025ರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ(WPL Auction 2025 ಶುರುವಾಗಿದೆ. ನಾಳೆ(ಡಿ.15) ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಒಟ್ಟು 120 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

120 ಆಟಗಾರ್ತಿಯರ ಪೈಕಿ 91 ಭಾರತೀಯರು ಮತ್ತು ಉಳಿದವರು ಸಾಗರೋತ್ತರ ದೇಶದವರು. ಇವರಲ್ಲಿ ಅಸೋಸಿಯೇಟ್ ರಾಷ್ಟ್ರಗಳಿಂದ ಮೂವರು ಸೇರಿದ್ದಾರೆ. 91 ಭಾರತೀಯ ಆಟಗಾರ್ತಿಯರ ಪೈಕಿ ಒಂಬತ್ತು ಮಂದಿ ಮಾತ್ರ ಕ್ಯಾಪ್ಟ್‌ ಆಟಗಾರರು. ಸಾಗರೋತ್ತರ ವಿಭಾಗದಲ್ಲಿ 8 ಅನ್‌ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ. ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಕೋರ್ ಸ್ಕ್ವಾಡ್‌ ಉಳಿಸಿಕೊಂಡಿವೆ. 19 ಸ್ಲಾಟ್‌ಗಳಿಗೆ (5 ವಿದೇಶಿ ಸೇರಿದಂತೆ) ಬಿಡ್‌ ನಡೆಯಲಿದೆ.

5 ಫ್ರಾಂಚೈಸಿಗಳು ಈ ಬಾರಿ 15 ಕೋಟಿ ರೂ. ಬಜೆಟ್​ ಮಿತಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಕಳೆದ ವರ್ಷ ಬಜೆಟ್​ ಮಿತಿ 13.5 ಕೋಟಿ ರೂ. ಆಗಿತ್ತು. ಇಂಗ್ಲೆಂಡ್​ ನಾಯಕಿ ಹೀದರ್​ ನೈಟ್​, ನ್ಯೂಜಿಲೆಂಡ್​ ವೇಗಿ ಲಿಯಾ ತಹುಹು, ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಡಿಯೇಂಡ್ರಾ ಡಾಟಿನ್​ ಹರಾಜಿನಲ್ಲಿ ಭಾರೀ ಮೊತ್ತ ಜೇಬಿಗಿಳಿಸುವ ನಿರೀಕ್ಷೆಯಲ್ಲಿದ್ದಾರೆ.

ಗುಜರಾತ್‌ ಜಯಂಟ್ಸ್‌ ತಂಡ ಗರಿಷ್ಠ 4.4 ಕೋಟಿ ರೂ. ಮೊತ್ತದೊಂದಿಗೆ ಮಿನಿ ಹರಾಜಿಗೆ ಇಳಿಯಲಿದೆ. ಹಾಲಿ ಚಾಂಪಿಯನ್‌ ಬೆಂಗಳೂರು ತಂಡದ ತನ್ನ ಪರ್ಸ್‌ ನಲ್ಲಿ 3.25 ಕೋಟಿ ರೂ ಉಳಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ 14 ಆಟಗಾರರು ಇದ್ದು, ನಾಲ್ಕು ಆಟಗಾರರ ಅಗತ್ಯವಿದೆ.

ಇದನ್ನೂ ಓದಿ IPL 2025: ಆರ್‌ಸಿಬಿಗೆ ರಜತ್​ ಪಾಟೀದಾರ್ ನಾಯಕ?

ಯುಪಿ ವಾರಿಯರ್ಸ್‌ ತಂಡಕ್ಕೆ ಒಬ್ಬರು ವಿದೇಶಿ ಆಟಗಾರ್ತಿ ಸೇರಿದಂತೆ ಮೂವರು ಆಟಗಾರ್ತಿಯರ ಅಗತ್ಯವಿದೆ. ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌(2.5 ಕೋಟಿ ರೂ) ತಂಡಗಳಿಗೂ ನಾಲ್ವರು ಆಟಗಾರ್ತಿಯರ ಅಗತ್ಯವಿದೆ. ಆದರೆ, ಆರ್‌ಸಿಬಿಯಲ್ಲಿ ವಿದೇಶಿ ಆಟಗಾರ್ತಿಯರು ಸಂಪೂರ್ಣ ಭರ್ತಿಯಾಗಿದೆ.