Monday, 16th December 2024

PM Modi: ದಿನಕ್ಕೆ 3 ಗಂಟೆ ಮಾತ್ರ ನಿದ್ದೆ.. ಪ್ರಧಾನಿ ಮೋದಿ ಸೀಕ್ರೆಟ್‌ ಬಿಚ್ಚಿಟ್ಟ ಬಾಲಿವುಡ್ ನಟ ಸೈಫ್ ಅಲಿ ಖಾನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi)ಯವರ ಜನಪ್ರಿಯತೆ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚು ಇದೆ. ಏಕೆಂದರೆ 72 ವರ್ಷ ವಯಸ್ಸಿನವರಾಗಿದ್ದರೂ ಮೋದಿ ಅವರು ಎಷ್ಟು ಸಕ್ರಿಯ ಮತ್ತು ಶಕ್ತಿಯುತ ಎಂಬುವುದು ಆಗಾಗ ವರದಿಗಳಿಂದ ಬಹಿರಂಗವಾಗುತ್ತದೆ. ಅವರು ಹಗಲಿರುಳೂ ಶ್ರಮವಹಿಸಿ ಕೆಲಸ ಮಾಡುತ್ತಾರೆಂಬುವುದು ಅವರ ಮತ್ತೊಂದು ವಿಶೇಷ. ಮೋದಿ ಬಹಳ ಕಡಿಮೆ ನಿದ್ರೆ ಮಾಡುತ್ತಾರೆ ಎಂದೂ ಹೇಳಲಾಗುತ್ತದೆ. ಇದೀಗ ಈ ಕುರಿತು ಬಾಲಿವುಡ್ ನಟ ಸೈಫ್ ಅಲಿ ಖಾನ್( Saif Ali Khan) ಖುದ್ದು ಅಚ್ಚರಿಯ ವಿಚಾರ ಬಹಿರಂಗ ಪಡಿಸಿದ್ದಾರೆ. ಇದು ಭಾರೀ ಸದ್ದು ಮಾಡುತ್ತಿದೆ.

ನರೇಂದ್ರ ಮೋದಿ ದೇಶದ ಹೆಮ್ಮೆಯ ಪ್ರಧಾನಿ. ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಧೀಮಂತ ನಾಯಕ. 10 ವರ್ಷಗಳಿಂದ ದಣಿವರಿಯದೇ ದೇಶಕ್ಕಾಗಿ ದುಡಿಯುತ್ತಿರೋ ಮೋದಿಯ ಸಕ್ಸಸ್‌ನ​ ಮತ್ತೊಂದು ಬಿಗ್​ ಸೀಕ್ರೆಟ್​ ರಿವೀಲ್​ ಆಗಿದೆ.

10 ವರ್ಷಗಳಲ್ಲಿ ಹತ್ತಾರು ದೇಶಗಳಿಗೆ ಭೇಟಿ. ನೂರಾರು ರೋಡ್​ ಶೋಗಳಲ್ಲಿ ಭಾಗಿ. ಸಾವಿರಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರೋ ಪ್ರಧಾನಿ. ಒಂದು ದಿನವೂ ರಜೆ ಇಲ್ಲ, ರೆಸ್ಟೂ ಇಲ್ಲ, ಆಸ್ಪತ್ರೆ ಸೇರಿದ್ದೇ ಇಲ್ಲ. ನಮೋ ಎನರ್ಜಿಯನ್ನ ದೇಶದ ಜನತೆ ಮಾತ್ರವಲ್ಲ ಇಡೀ ವಿಶ್ವವೇ ಮೆಚ್ಚಿ ಕೊಂಡಾಡಿದೆ. ಇದಕ್ಕೆಲ್ಲ ಮೋದಿಯ ಲೈಫ್​ ಸ್ಟೈಲ್​ ಕಾರಣ. ಆ ರಹಸ್ಯವನ್ನ ಬಾಲಿವುಡ್ ನಟ ಸೈಫ್ ಅಲಿ ಜನರ ಮುಂದೆ ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ತಮ್ಮ ಪತ್ನಿ ಕರೀನಾ ಕಪೂರ್ ಮತ್ತು ಕುಟುಂಬ ಸದಸ್ಯರೊಂದಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಟ ಸೈಫ್ ಅಲಿ ಖಾನ್ ಮೋದಿಯೊಂದಿಗಿನ ತಮ್ಮ ಮಾತುಕತೆಯ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದ್ದು, ಈ ಕುರಿತು ಮಾಧ್ಯಮಗಳೆದುರು ಮಾತಾನಾಡಿರುವ ಸೈಫ್ ಆಲಿ ಖಾನ್, ಪ್ರಧಾನಿ ನರೇಂದ್ರ ಮೋದಿ ಜಿ ಕೇವಲ 3 ಗಂಟೆ ಮಾತ್ರ ಮಲಗುತ್ತಾರೆ. ಅವರು ದೇಶಕ್ಕಾಗಿ 21 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ತಮ್ಮ ಜೀವನದ ಒಂದು ನಿಮಿಷವನ್ನೂ ವ್ಯರ್ಥ ಮಾಡುವುದಿಲ್ಲ, ಎಲ್ಲಾ ಸಮಯದಲ್ಲೂ ದೇಶದ ಅಭಿವೃದ್ಧಿ ಬಗ್ಗೆ ಯೋಚಿಸುತ್ತಾರೆ. ದೇಶದ ಯಾವುದೇ ಪಕ್ಷದಲ್ಲಿ ನಡೆಯುವ ಘಟನೆಗಳ ಬಗ್ಗೆ ಅವರಿಗೆ ಮಾಹಿತಿ ಇರುತ್ತದೆ. ಇದರೊಂದಿಗೆ ಬಡವರಿಗೆ ಸರಿಯಾದ ಯೋಜನೆಗಳು ತಲುಪುತ್ತವೆ ಎಂಬ ಬಗ್ಗೆಯೂ ಗಮನ ಹರಿಸುತ್ತಾರೆ ಎಂದಿದ್ದಾರೆ.

ಇನ್ನು ರಾಜ್ ಕಪೂರ್ ಚಲನಚಿತ್ರೋತ್ಸವಕ್ಕೆ ಪ್ರಧಾನಿ ಮೋದಿಯನ್ನು ಆಹ್ವಾನಿಸಲು ಕಪೂರ್ ಕುಟುಂಬ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ. ಡಿಸೆಂಬರ್ 13 ರಂದು ಪ್ರಾರಂಭವಾದ ಈ ಉತ್ಸವ ರಾಜ್ ಕಪೂರ್ ಅವರ ಶತಮಾನೋತ್ಸವ ಜನ್ಮ ವಾರ್ಷಿಕೋತ್ಸವದಂದು ಅವರ 100 ವರ್ಷಗಳ ಪರಂಪರೆಯನ್ನು ಆಚರಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ.

ಈ ಸಭೆಯ ಕುರಿತು ಮಾತನಾಡಿದ ಸೈಫ್, ಪ್ರಧಾನಿ ಮೋದಿ ಅವರ ಬಿಡುವಿಲ್ಲದ ಸಮಯದ ನಡುವೆ ಸುಸ್ತಾಗುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಅವರು ಮುಖದ ಮೇಲೆ ಮಂದಹಾಸ ಬೀರುತ್ತಾ ಬಂದರು ಮತ್ತು ನಮ್ಮೆಲ್ಲರೊಂದಿಗೆ ಬಹಳ ಚೆನ್ನಾಗಿ ಮಾತನಾಡಿದರು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Maestro Ilayaraja: ದೇಗುಲದ ಗರ್ಭಗುಡಿ ಪ್ರವೇಶಕ್ಕೆ ತಡೆ- ಸಂಗೀತ ಮಾಂತ್ರಿಕ ಇಳಯರಾಜಗೆ ಅರ್ಚಕರಿಂದ ಅಪಮಾನ