ನವದೆಹಲಿ: ಸಂಸತ್‍ನ ಮೇಲೆ ದಾಳಿಯ ವೇಳೆ, ಕೆಚ್ಚೆದೆಯಿಂದ ಹೋರಾಡಿ ಜೀವ ಅರ್ಪಿಸಿದ ವೀರ ಹುತಾತ್ಮರ ತ್ಯಾಗವನ್ನು ದೇಶ ಸ್ಮರಿಸುತ್ತದೆ ಎಂದು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹೇಳಿದ್ದಾರೆ.
2001ರಲ್ಲಿ ಇದೇ ದಿನ ಐವರು ಪಾಕ್ ಮೂಲದ ಉಗ್ರರು ಸಂಸತ್ ಭವನದ ಒಳಗೆ ನುಗ್ಗಲು ಪ್ರಯತ್ನಿಸಿದಾಗ 8 ರಕ್ಷಣಾ ಪಡೆ ಸಿಬ್ಬಂದಿ ಜೀವವನ್ನು ಲೆಕ್ಕಿಸದೆ ಹೋರಾಡಿ ಅನೇಕ ಜೀವಿಗಳನ್ನು ರಕ್ಷಿಸಿದರು. ಅದರಿಂದ ಭಾರೀ ವಿಧ್ವಂಸಕ ಕೃತ್ಯ ತಪ್ಪಿತು ಎಂದು ತಿಳಿಸಿದ್ದಾರೆ. ಇಡೀ ದೇಶ ಅವರಿಗೆ ನಮಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಸಂಸತ್ ಮೇಲಿನ ದಾಳಿ ಕೃತ್ಯವನ್ನು ಎಂದೂ ಮರೆಯುವಂತಿಲ್ಲ. ಅಂದು ನಮ್ಮ ಪ್ರಜಾ ಪ್ರಭುತ್ವ ದೇಗುಲಕ್ಕೆ ನುಗ್ಗಿದ ಪಾಕ್ ಉಗ್ರರನ್ನು ಸದೆಬಡಿದು ನಮ್ಮ ರಕ್ಷಣಾ ಪಡೆ ದೇಶದ ಸಮಗ್ರತೆಯನ್ನು, ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಹುತಾತ್ಮರಾದವರನ್ನು ನೆನೆದು ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.