Sunday, 5th January 2025

BBK 11: ನಾನೇ ಹೀರೋ.. ನಾನೇ ಕರಾಬು: ತ್ರಿವಿಕ್ರಮ್ ಮಾತಿಗೆ ಸಿಡಿದೆದ್ದ ರಜತ್ ಕಿಶನ್

Rajath Kishan and Trivikram

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಆದರೂ ಮನೆಯಲ್ಲಿ ಜಗಳ ನಡೆಯದೆ ದಿನ ಮುಗಿಯುವುದಿಲ್ಲ ಎಂಬಂತಾಗಿದೆ. ಪ್ರತಿದಿನ ಗಲಾಟೆ ನಡೆಯುತ್ತಲೇ ಇದೆ. ಅದರಲ್ಲೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿ ರಜತ್ ಕಿಶನ್ ಆಡುವ ಮಾತುಗಳು ಉಳಿದ ಎಲ್ಲ ಸದಸ್ಯರನ್ನು ಕೆರಳಿಸುತ್ತಿದೆ. ಮಾತಿನ ಮೇಲೆ ನಿಗ ಇರಲಿ ಎಂದು ಕಿಚ್ಚ ಸುದೀಪ್ ಹೇಳಿದರೂ ರಜತ್ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ಇದೀಗ ನಾಮಿನೇಷನ್ ಪ್ರಕ್ರಿಯೆ ವೇಳೆ ತ್ರಿವಿಕ್ರಮ್ ವಿರುದ್ಧ ರಜತ್ ತಿರುಗಿ ಬಿದ್ದಿದ್ದಾರೆ.

ಬಿಗ್ ಬಾಸ್ ಮನೆ ಈ ವಾರ ಎರಡು ಗುಂಪುಗಳಾಗಿ ವಿಂಗಡನೆಗೊಂಡಿದೆ. ತ್ರಿವಿಕ್ರಮ್ ನಾಯಕನಾಗಿರುವ ಗ್ರೂಪ್​ನಲ್ಲಿ ಭವ್ಯಾ, ಗೌತಮಿ ಜಾಧವ್, ಮಂಜು ಹಾಗೂ ಚೈತ್ರಾ ಕುಂದಾಪುರ ಇದ್ದರೆ ಅತ್ತ ರಜತ್ ಗುಂಪಿನಲ್ಲಿ ಧನರಾಜ್, ಹನುಮಂತ, ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಈ ಎರಡೂ ಗ್ರೂಪ್​ಗಳ ಮಧ್ಯೆ ಕಾಲಕಾಲಕ್ಕೆ ಟಾಸ್ಕ್ ನಡೆಯುತ್ತೆ. ಹೀಗೆ ಟಾಸ್ಕ್​ನಲ್ಲಿ ಗೆದ್ದ ತಂಡ ಎದುರಾಳಿ ತಂಡದಲ್ಲಿರುವ ಸದಸ್ಯರನ್ನು ನಾಮಿನೇಟ್ ಮಾಡುವ ಅವಕಾಶ ಪಡೆಯುತ್ತಾರೆ.

ಹೀಗೆ ಬಂದ ಟಾಸ್ಕ್​​ನಲ್ಲಿ ರಜತ್​ ಅವರಿದ್ದ ತಂಡ ಸೋತಿದೆ. ಪರಿಣಾಮ ಗೆದ್ದ ತಂಡವು, ಎದುರಾಳಿ ತಂಡದ ಓರ್ವ ಸದಸ್ಯರನ್ನು ಮನೆಯಿಂದ ಆಚೆ ಕಳುಹಿಸಲು ನಾಮಿನೇಟ್ ಮಾಡುವ ಅರ್ಹತೆ ಪಡೆಯುತ್ತಾರೆ. ಅದರಲ್ಲಿ ತ್ರಿವಿಕ್ರಮ್ ತಂಡ ರಜತ್ ಹೆಸರನ್ನು ತೆಗೆದುಕೊಂಡಿದ್ದು, ಇದಕ್ಕೆ ರಜತ್ ಸಿಡಿಮಿಡಿಗೊಂಡಿದ್ದಾರೆ.

ಇಲ್ಲಿ ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರವೋಕ್‌ ಮಾಡುತ್ತಾರೆ. ಅವರನ್ನೇ ಅವರು ಮೇಲು ಅಂದುಕೊಂಡಿದ್ದಾರೆ ಎಂದು ತ್ರಿವಿಕ್ರಮ್‌‌ ಕಾರಣ ಕೊಟ್ಟರು. ಅದಕ್ಕೆ ರಜತ್‌ ಅವರು ನಾನೇ ಹೀರೋ, ನಾನೇ ಕರಾಬು, ನಾಮಿನೇಟ್‌ ಮಾಡಿ ಬಿಟ್ರೆ ಚೇಂಜ್‌ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಎಂದು ಕೂಗಾಡಿದ್ದಾರೆ. ಇಂಡಿವಿಶುವಲ್.. ಆಡಿ.. ನಿಮ್ಗೆ ತಾಖತ್ತು ಇಲ್ವಾ? ನಾನಿಲ್ಲ ಸುಪಿರಿಯರೇ, ನಾನು ಕರಾಬೇ, ನಾನು ಮಸ್ತೇ, ಹೌದು ನಾಮಿನೇಷನ್​ ಮಾಡಿದ್ರೆ ಚೇಂಜ್ ಆಗಿಬಿಡ್ತೀನಾ? ನಾಳೆಯಿಂದ ನಾನು ಬೇರೆಯವ್ರ ಹೀರೋ ಅಂತೀನಾ? ನಾನೇ ಹೀರೋ.. ಎಂದು ಹೇಳಿದ್ದಾರೆ.

BBK 11: ಹದ್ದು ಮೀರಿದ ವರ್ತನೆ: ಮುಟ್ಟಲೇ.. ಮುಟ್ಟಲೇ.. ಎಂದು ರಜತ್ ಎದುರು ಎದೆಯೊಡ್ಡಿನಿಂತ ಮಂಜು