ಮಂಜುನಾಥ ಅಜ್ಜಂಪುರ
ನಮ್ಮ ದೇಶದ ಇತಿಹಾಸದ ನೈಜ ವಿವರಗಳು ಜನಸಾಮಾನ್ಯರಿಗೆ ಎಷ್ಟು ಲಭ್ಯ? ಶಾಲಾ ಕಾಲೇಜುಗಳಲ್ಲಿ ಬೋಧಿಸು ತ್ತಿರುವ ಸ್ವಾತಂತ್ರ್ಯ ಹೋರಾಟದ ವಿವರಗಳು ಎಷ್ಟು ಪಾರದರ್ಶಕ? 1947ನೆಯ ಇಸವಿಯ ಆಗಸ್ಟ್ 15ರಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿತೇ? ಅಥವಾ ಬ್ರಿಟಿಷರ ಅಧೀನ ರಾಜ್ಯದ ಸ್ಥಾನ ಮಾನ ದೊರಕಿತೆ?
ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳು, ತಿರುವಿದಷ್ಟೂ ನೋವು ತುಂಬುತ್ತವೆ, ದುಃಖ ಉಮ್ಮಳಿಸುತ್ತದೆ. ಸ್ವಾತಂತ್ರ್ಯ ಹೋರಾಟದ ನಿಜವಾದ ಕಲಿಗಳನ್ನು ಕೈಬಿಟ್ಟು, ಗುಲಾಮರನ್ನು – ಹೊಗಳುಭಟರನ್ನು – ದಲ್ಲಾಳಿಗಳನ್ನು – ವಿಲಾಸಿ ಗಳನ್ನು ವಿಪರೀತ ವೈಭವೀಕರಿಸಿ ಇಂತಹವರಿಂದಲೇ ಸ್ವಾತಂತ್ರ್ಯ ಬಂದಿತು, ಇವರೇ ಸ್ವಾತಂತ್ರ್ಯ ತಂದುಕೊಟ್ಟರು ಎಂಬಂತಹ ಸುಳ್ಳುಗಳನ್ನೇ ತುಂಬಿಕೊಂಡಿರುವ ನಮ್ಮ ಇತಿಹಾಸ ಪಠ್ಯಗಳನ್ನು ಓದಿದಾಗ, ಇನ್ನಷ್ಟು ನೋವಾಗುತ್ತದೆ, ಕಣ್ಣುಗಳಲ್ಲಿ ನೀರಿನ ಬದಲಿಗೆ ರಕ್ತವೇ ಚಿಮ್ಮುತ್ತದೆ.
ಏಳು ದಶಕಗಳ ಕಾಲ ಸುಳ್ಳನ್ನೇ ಓದಿ, ಈಗಲೂ ಅಂತಹುದನ್ನೇ ಓದುತ್ತಿರುವ ಹತಭಾಗ್ಯರು ನಾವು! ಗೆಳೆಯರೊಬ್ಬರು ಕಳುಹಿಸಿ ಕೊಟ್ಟ ದಾಖಲೆಯೊಂದನ್ನು ಓದಿ ತುಂಬ ತುಂಬ ವಿಚಲಿತನಾದೆ. ಇದು ಏಪ್ರಿಲ್ 1948ರ ಮಹತ್ತ್ವದ ದಾಖಲೆ. 1948ರಲ್ಲಿಯೂ
ನಮ್ಮದು ಪೂರ್ಣ ಸ್ವಾತಂತ್ರ್ಯ ಪಡೆದ ದೇಶವಾಗಿರಲಿಲ್ಲ. ಅದು ಕೇವಲ ಡೊಮಿನಿಯನ್ ಮಾತ್ರ. ಅಂದರೆ, ಒಂದು ಬಗೆಯ
ಸಾಮಂತ ದೇಶ. ಸ್ವಾತಂತ್ರ್ಯ ಬಂದ ಅನಂತರವೂ ಎರಡೂವರೆ ವರ್ಷಗಳ ಕಾಲ, ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್
ನೆಹರೂ ಅವರು ಡೊಮಿನಿಯನ್ ಆಫ್ ಇಂಡಿಯಾ ಪರವಾಗಿಯೇ ಸಹಿ ಮಾಡಬೇಕಿತ್ತು, ಮಾಡುತ್ತಿದ್ದರು.
ಎಲ್ಲ ಪ್ರಮುಖ ನಿರ್ಧಾರಗಳಿಗೆ ಪೂರ್ವಾನುಮತಿ ಬೇಕಿತ್ತು. ಬಹಳ ಸಂಗತಿ ಗಳನ್ನು (for Post Facto Confirmation) ದೃಢೀಕರಣಕ್ಕಾಗಿ ನಿವೇದಿಸಿಕೊಳ್ಳ ಬೇಕಾಗಿತ್ತು. ಅಂದಿನ ಗವರ್ನರ್ ಜನರಲ್ ಮೌಂಟ್‌ಬ್ಯಾಟನ್ ಸ್ಥಾನದಲ್ಲಿ ರಾಜಾಜಿ ಅವರನ್ನು ನೇಮಿ ಸಲು, ನೆಹರೂ ಅವರು ಬ್ರಿಟಿಷ್ ಪ್ರಭುತ್ವಕ್ಕೆ ಪ್ರಸ್ತಾವ ಕಳುಹಿಸಿ ಅನುಮತಿಗಾಗಿ ಏಪ್ರಿಲ್ 1948ರಲ್ಲಿ ಬೇಡಿ ಬರೆದ ನಿವೇದನೆ ಯಿದು. ಈ ಬಗೆಯ ಸಾಕ್ಷ್ಯಾಧಾರಗಳು ನಮಗೆ ನಿಜ-ಇತಿಹಾಸವನ್ನು ಪರಿ ಚಯಿಸುತ್ತವೆ.
ನೆಹರೂ ಅವರ ಆಪ್ತಕಾರ್ಯದರ್ಶಿ ಎಂ.ಓ.ಮಥಾಯಿ ಅವರು ತಮ್ಮ ನೆನಪು ಗಳನ್ನು ರೆಮಿನಿಸೆನ್ಸಸ್ ಆಫ್ ದಿ ನೆಹರೂ ಏಜ್ (Reminiscences of the Nehru Age) ಕೃತಿಯಲ್ಲಿ ದಾಖಲಿಸಿದ್ದಾರೆ. ಅಲ್ಲಿಯೂ, ನೆಹರೂ ಅವರು ಈ ಬಗೆಯ ನಿವೇದನೆ ಗಳಿಗೆ (Submissions to Britain) ಸಹಿ ಹಾಕುತ್ತಿದ್ದುದನ್ನು ಮಥಾಯಿ ದಾಖಲಿಸಿದ್ದಾರೆ. ಈ ವಿವರಗಳನ್ನು 1980ರ ದಶಕ ದಲ್ಲಿ ಓದಿ ನಾನು ಶಾಕ್ ಆಗಿದ್ದೆ.
ಬ್ರಿಟಿಷ್ ಅಧಿಕಾರಿಯ ಕೈಯಲ್ಲಿ ಸೇನಾಧಿಕಾರ ಅಂದಿನ ನಮ್ಮ ಕಾಂಗ್ರೆಸ್ ನಾಯಕತ್ವದ ವೈಖರಿಯೇ ಹಾಗಿತ್ತು. ಸಾಮೂಹಿಕ ಹಿಂದೂ ನರಹತ್ಯೆೆಯ ರೂವಾರಿ ಮೊಹಮ್ಮದ್ ಅಲಿ ಜಿನ್ನಾ, 14ನೆಯ ಆಗಸ್ಟ್ 1947ರಲ್ಲಿಯೇ ನವನಿರ್ಮಿತ ಪಾಕಿಸ್ತಾನದ ಗವರ್ನರ್ ಜನರಲ್ ಆದ. ಆದರೆ, ನಮ್ಮಲ್ಲಿ ಅಂದರೆ ಅಳಿದುಳಿದ ಭಾರತದಲ್ಲಿ, ಧೂರ್ತ ಮೌಂಟ್‌ಬ್ಯಾಟನ್ ಗವರ್ನರ್
ಜನರಲ್ ಆಗಿಯೇ ಮುಂದುವರಿದ. ಒಂದು ದೇಶದ ಆಡಳಿತ ಮತ್ತು ನಿರ್ವಹಣೆಗಳೆಂದರೆ ಸಾಮಾನ್ಯವಲ್ಲ.
ಗವರ್ನರ್ ಜನರಲ್ ಕೈಕೆಳಗೇ ಸೇನೆಯ ಮೂರೂ (ಭೂಸೇನೆ, ನೌಕಾದಳ, ವಾಯುಸೇನೆ) ವಿಭಾಗಗಳು ಬರುತ್ತಿದ್ದವು. ಮೌಂಟ್ ಬ್ಯಾಟನ್ ಅನುಮತಿಯಿಲ್ಲದೇ ಸೇನೆ ಏನೂ ಮಾಡುವಂತಿರಲಿಲ್ಲ. ಕಾಶ್ಮೀರವನ್ನು ಪಾಕಿಸ್ತಾನಿ ಸೇನೆ ಆಕ್ರಮಣ ಮಾಡುತ್ತಿದ್ದಾ ಗಲೂ ನಮ್ಮ ಸೇನೆ ಕೈಕಟ್ಟಿ ಕೂರಬೇಕಾಗಿತ್ತು, ಅನುಮತಿಗಾಗಿ ಕಾಯಲೇಬೇಕಾಗಿತ್ತು. ಕಾಂಗ್ರೆಸ್ ನಾಯಕತ್ವದ ವರಸೆಯನ್ನು – ದೌರ್ಬಲ್ಯಗಳನ್ನು ನೋಡಿ, ಮೌಂಟ್‌ಬ್ಯಾಟನ್ ತಮಾಷೆ ನೋಡುತ್ತಾ, ಆಟವಾಡುತ್ತಾ ಕಾಲ ಕಳೆಯುತ್ತಿದ್ದ.
ಸ್ವಾತಂತ್ರ್ಯದಾತರೆಂದು ನಮ್ಮ ಇತಿಹಾಸ ಪಠ್ಯಪುಸ್ತಕಗಳು ಹಾಡಿಹಾಡಿ ಹೊಗಳುವ, ಗಾಂಧೀಜಿಯವರ 1942ರ ಕ್ವಿಟ್ ಇಂಡಿಯಾ
ಚಳವಳಿಗೂ ಸಹ ಬ್ರಿಟಿಷ್ ಪ್ರಭುತ್ವವು ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿರಲಿಲ್ಲ. ದ್ವಿತೀಯ ಮಹಾಯುದ್ಧದ ಬೇಗೆ, ಆತಂಕ,
ಒತ್ತಡಗಳ ನಡುವೆಯೂ ಬ್ರಿಟಿಷರು, ಈ ಚಳವಳಿಗೆ ಸೊಪ್ಪು ಹಾಕದೇ, ಎಲ್ಲ ಕಾಂಗ್ರೆಸ್ ನಾಯಕರನ್ನು ಜೈಲಿಗೆ ತಳ್ಳಿದ್ದರು.
ಬಹುತೇಕ ಕಾಂಗ್ರೆಸ್ ನಾಯಕರಿಗೆ ಈ ಜೈಲುಗಳು ಹೆಸರಿಗೆ ಮಾತ್ರ ಸೆರೆಮನೆಗಳಾಗಿದ್ದವು. ನೆಹರೂ ಸೆರೆಮನೆಯಲ್ಲಿ ವಿರಾಮ
ದಿಂದ ಪುಸ್ತಕಗಳನ್ನು (ಮುಂದೆ ಆ ಪುಸ್ತಕಗಳು ಪಠ್ಯಪುಸ್ತಕಗಳೂ ಆದವು. ಆ ಕಾರಣದಿಂದ ಅವು ಇಡೀ ದೇಶದ ಗ್ರಹಿಕೆ – ಮನೋ
ಭೂಮಿಕೆಗಳನ್ನೇ ನಾಶ ಮಾಡಿದವು) ಬರೆದುಕೊಂಡಿದ್ದರು.
ವೀರ ಸಾವರ್ಕರ್ ಅಂತಹ ಸ್ವಾತಂತ್ರ್ಯ ಸೇನಾನಿಗಳು, ಅಂಡಮಾನಿನ ಸೆರೆಮನೆಯಲ್ಲಿ ಅನುಭವಿಸಿದಂತಹ ದಾರುಣ ಶಿಕ್ಷೆಯನ್ನು ಒಂದೇ ಒಂದು ದಿನ ಅನುಭವಿಸಿದ್ದರೂ, ನೆಹರೂ ಮತ್ತಿತರ ಕಾಂಗ್ರೆಸ್ ನಾಯಕರು ದೇಶಾಂತರ ಓಡಿಹೋಗಿರುತ್ತಿದ್ದರು.
ಜೈಲೋ ಅರಮನೆಯೋ? ಗಾಂಧೀಜಿಯವರು ಯೆರವಾಡಾ ಜೈಲಿನಲ್ಲಿದ್ದರು, ಆ ಜೈಲಿನಲ್ಲಿ ದ್ದರು, ಈ ಜೈಲಿನಲ್ಲಿದ್ದರು, ಎಂಬಂತಹ ಅನೇಕ ಸಂಗತಿಗಳನ್ನು ನಾವು ಇತಿಹಾಸದ ಪಠ್ಯಪುಸ್ತಕಗಳಲ್ಲಿ – ಅವರ ಜೀವನ ಚರಿತ್ರೆಯಲ್ಲಿ ಓದುತ್ತೇವೆ. ಈ ಯೆರವಾಡಾ ಜೈಲಿನ ವಿವರಗಳನ್ನು ನೋಡಿದರೆ, ಅದು ನಿಜವಾಗಿಯೂ ಸೆರೆಮನೆಯಾಗಿತ್ತೇ, ಎಂಬ ಅನುಮಾನ ಮೂಡದಿರದು. ಅದು ವಾಸ್ತವವಾಗಿ ಆಗಾಖಾನ್ ಅರಮನೆ. 19 ಎಕರೆಗಳ ಜಾಗದಲ್ಲಿ, ಏಳು ಎಕರೆಗಳ ವಿಸ್ತೀರ್ಣದಲ್ಲಿ ನಿರ್ಮಿತವಾದ ವಿಶಾಲ ವಾದ ಅರಮನೆಯಿದು.
ಗಾಂಧೀಜಿಯವರೊಂದಿಗೆ, ಅವರ ಪತ್ನಿ ಕಸ್ತೂರಿಬಾ, ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ, ಸರೋಜಿನಿ ನಾಯಿಡು ಮುಂತಾದವರು ಇದ್ದರು. ಈ ಆವರಣದಲ್ಲಿರುವ ಸುಂದರವಾದ ಉದ್ಯಾನಗಳು, ಬೃಹತ್ಕೊಠಡಿಗಳು, ಇಲ್ಲಿನ ವೈಶಾಲ್ಯ ನೋಡಿ ದರೆ (ಇವೆಲ್ಲಾ ಅಂತೆ ಕಂತೆ ಅಲ್ಲ. ಇಂದಿಗೂ ನೋಡಬಹುದಾದ ಐತಿಹಾಸಿಕ ಕಟ್ಟಡಗಳು, ಓದಬಹುದಾದ ಸಾಕ್ಷ್ಯಾಧಾರಗಳು) ಇದನ್ನು ಸೆರೆಮನೆಯೆಂದು ಕರೆಯಲು ಯಾರಿಗೂ ಮನಸ್ಸು ಬಾರದು. ಅಲ್ಲದೆ, ಹೆಂಡತಿ – ಕಾರ್ಯದರ್ಶಿ ಮುಂತಾ ದವರು ಇರಲು ಅವಕಾಶವಿತ್ತು ಎಂದರೆ, ಅದು ಎಂತಹ ಜೈಲ್ ಇರಬಹುದು? ಬಹು-ವೈಭವೀಕೃತ ಕ್ವಿಟ್ ಇಂಡಿಯಾ ಚಳವಳಿ ಕಾರಣಕ್ಕೆ, ಗಾಂಧೀಜಿಯವರು ಬಂಧಿತರಾಗಿ ಈ ಅರಮನೆಯಲ್ಲಿ (ಸೆರೆಮನೆಯಲ್ಲಿ?) ಆಗಸ್ಟ್ 1942ರಿಂದ ಮೇ 1944ರವರೆಗೆ ಇದ್ದರು.
ಗಾಂಧೀಜಿಯವರಿಗೆ ಪ್ರಚಾರ, ಜನಪ್ರಿಯತೆಗಳೆಂದರೆ ತುಂಬ ಇಷ್ಟ. ಈ ಅವಧಿಯಲ್ಲಿ, ವಿದೇಶೀ ಪತ್ರಕರ್ತರೂ ಈ ಅರಮನೆಗೆ
ಬಂದು ಗಾಂಧೀಜಿಯವರನ್ನು ಭೇಟಿ ಮಾಡಿದ್ದರು ಮತ್ತು ಆ ಎಲ್ಲ ವಿವರಗಳು ದಾಖಲೆಗಳಲ್ಲಿ ಲಭ್ಯವಿವೆ. ದುರದೃಷ್ಟವಶಾತ್, ಇದೇ ಅವಧಿಯಲ್ಲಿ, ಸುಭಾಷ್ ಚಂದ್ರ ಬೋಸ್ ಮತ್ತಿತರ ಸ್ವಾತಂತ್ರ್ಯ ಸೇನಾನಿಗಳು, ಕ್ರಾಂತಿಕಾರಿಗಳು ಭಾರತ ಸ್ವಾತಂತ್ರ್ಯಕ್ಕಾಗಿ ತುಂಬ ಕಷ್ಟ ಪಡಬೇಕಾಯಿತು, ಆಜಾದ್ ಹಿಂದ್ ಸೇನೆಯನ್ನು ಸಂಘಟಿಸಬೇಕಾಯಿತು, ರಕ್ತ ಹರಿಸಬೇಕಾಯಿತು.
ಅವರೆಲ್ಲಾ ಪಟ್ಟ ಪಡಿಪಾಟಲುಗಳು – ಸಂಕಷ್ಟಗಳು ಅವರ್ಣನೀಯ, ಅನನ್ಯ. ಸುಳ್ಳು ಇತಿಹಾಸದ ಪ್ರಭಾವ ತುಂಬ ತುಂಬ ಆಳವಾದುದು. ನಾವೆಲ್ಲಾ ಓದಿದ ನಮ್ಮೂರಿನ ಪ್ರೌಢಶಾಲೆಯ ಶಂಕುಸ್ಥಾಪನೆಯಾಗಿದ್ದು 1948ರಲ್ಲಿ. ಆ ಶಿಲಾಫಲಕದಲ್ಲಿ ‘ಗಾಂಧೀ ಯುಗ – ನೆಹರೂ ಶಕೆ’ ಎಂದು ಕೆತ್ತಿಸಲಾಗಿದೆ. ಅದು ಇಂದಿಗೂ ವಿರಾಜಮಾನವಾಗಿದೆ. ಅದನ್ನು – ಅಂತಹುದನ್ನು ನೋಡುತ್ತಾ ಬೆಳೆದವರಿಗೆ ಇತಿಹಾಸದ ನೈಜ ಸಾಕ್ಷ್ಯಾಧಾರಗಳನ್ನು ಅರಗಿಸಿಕೊಳ್ಳುವುದು ಕಷ್ಟವೇ ಆಯಿತು. ಪೂರ್ವಗ್ರಹೀತ ಅಜ್ಞಾನವರ್ಜನೆ (Process of Unlearning) ತುಂಬ ತುಂಬ ಕಷ್ಟದ ಪ್ರಕ್ರಿಯೆ.
ಇಂದಿರಾ ಗಾಂಧಿಯವರು ಒಮ್ಮೆ ತಮ್ಮ ಭಾಷಣದಲ್ಲಿ ‘ಬ್ರಿಟಿಷರು ಬಂದಾಗ ಜನಸಂಘ ಏನು ಮಾಡುತ್ತಿತ್ತು?’ ಎಂದು ಗರ್ಜಿಸಿ ದರು. ಅದು ಅಸಂಬದ್ಧ ಆಪಾದನೆ. ಏಕೆಂದರೆ, ಭಾರತೀಯ ಜನಸಂಘ ಹುಟ್ಟಿದ್ದೇ 1951ರಲ್ಲಿ. ಅದಕ್ಕೆ ಉತ್ತರವಾಗಿ, ತಮ್ಮ
ವಾಕ್ಚಾತುರ್ಯ – ಹಾಸ್ಯಪ್ರಜ್ಞೆಗಳಿಗೇ ಖ್ಯಾತರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಸಾರ್ವಜನಿಕ ಭಾಷಣವೊಂದರಲ್ಲಿ ‘ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ, ನಿಮ್ಮ ತಾತ ಮೋತೀಲಾಲ್ ನೆಹರೂ ಎಲ್ಲಿದ್ದರು?’ ಎಂದು ಲೇವಡಿ
ಮಾಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾಗಿದ್ದೇ (1925) ಹಿಂದೂ ಸಮಾಜದ ಸಂಘಟನೆಗಾಗಿ. ಅದರ
ಉದ್ದೇಶವೇ ಬೇರೆ, ಕಾರ್ಯಸ್ವರೂಪವೇ ಬೇರೆ. ಹೀಗಿದ್ದೂ, ಕೆಲವು ಕಾಂಗ್ರೆಸ್ ಶಿಖಾಮಣಿಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ
ಎಷ್ಟು ಜನ ಆರೆಸ್ಸೆಸ್ಸಿನವರು ಜೈಲಿಗೆ ಹೋಗಿದ್ದರು? ಎಂದು ಆಗಾಗ ಕಿರಿಚುವುದುಂಟು.
ಹಾಗೆ ನೋಡಿದರೆ, ಸ್ವಾತಂತ್ರ್ಯ ಹೋರಾಟವನ್ನು ಮಾಡಿದವರು ಯಾರೋ, ಆದರೆ ಫಲಾನುಭವಿಗಳು ಮಾತ್ರ ಈ ಆಸಾಮಿಗಳೇ!
ಸ್ವಾತಂತ್ರ್ಯ ಹೋರಾಟದ ನೈಜ ದಾಖಲೆಗಳನ್ನು ಗಮನಿಸುವಾಗ, ಕವಿ ಸಿದ್ಧಲಿಂಗಯ್ಯನವರ ಧಾಟಿಯಲ್ಲಿ ‘ಹೇಗೆ ಬಂತು
ಸ್ವಾತಂತ್ರ್ಯ ? ಯಾರಿಂದ ಬಂತು ಸ್ವಾತಂತ್ರ್ಯ?’ ಎಂದು ಕೇಳುವಂತಾಗುತ್ತದೆ, ಪ್ರಶ್ನಿಸುವಂತಾಗುತ್ತದೆ.