Monday, 23rd December 2024

Alok Agarwal: ಭಾರತೀಯ ಆರ್‌ಇಐಟಿ ಗೆ ಅಧ್ಯಕ್ಷರಾಗಿ ಅಲೋಕ್‌ ಅಗರ್ವಾಲ್‌ ನೇಮಕ

ಬೆಂಗಳೂರು: ಭಾರತೀಯ ಆರ್‌ಇಐಟಿ ಅಸೋಸಿಯೇಶನ್ (IRA) ತನ್ನ ಹೊಸ ಅಧ್ಯಕ್ಷರಾಗಿ ಬ್ರೀಕ್‌ಫೀಲ್ಡ್ ಇಂಡಿಯಾ ರಿಯಲ್ ಎಸ್ಟೇಟ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೋಕ್ ಅಗರ್ವಾಲ್ ಅವರನ್ನು ನೇಮಿಸಿದೆ.

ಈ ನೇಮಕ ಕುರಿತು ಮಾತುನಾಡಿದ ಭಾರತೀಯ ಆರ್‌ಇಐಟಿ ಅಸೋಸಿಯೇಶನ್, ಅಲೋಕ್ ಅಗರ್ವಾಲ್‌ರ ರಿಯಲ್ ಎಸ್ಟೇಟ್ ಕ್ಷೇತ್ರದ ಅನುಭವ ಆರ್‌ಇಐಟಿ ಮತ್ತು ಐಆರ್‌ಎ ಗೆ ಸಹಾಯಕವಾಗಲಿದೆ. ಅವರ ಮಾರ್ಗದರ್ಶನದಲ್ಲಿ, ಎಸ್‌ಇಬಿಐ ಜೊತೆ ಕೈ ಜೋಡಿಸಲಿದ್ದೇವೆ ಎಂದಿದೆ.

ತನ್ನ ಹೊಸ ಹುದ್ದೆಯ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಅಗರ್ವಾಲ್, ನವೋದ್ಯಮವನ್ನು ಪ್ರೋತ್ಸಾಹಿಸಲು ನಾವು ಸದಾ ಸಿದ್ಧರಿದ್ದೇವೆ ಮತ್ತು ಈ ಹುದ್ದೆ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದೆ ಎಂದು ಹೇಳಿದರು.