ಶ್ರೀನಗರ: ಜಮ್ಮು ಕಾಶ್ಮೀರದ (Jammu & Kashmir) ರಜೌರಿ (Rajouri) ಜಿಲ್ಲೆಯಲ್ಲಿ ಅಪರಿಚಿತ ಕಾಯಿಲೆ ಕಾಣಿಸಿಕೊಂಡಿದ್ದು, ಈವರೆಗೆ ಎಂಟು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬುಧವಾರ ರಜೌರಿಯ ಆಸ್ಪತ್ರೆಯಲ್ಲಿ ಬುಧವಾರ ಮತ್ತೊಂದು ಮಗು ನಿಗೂಢ ಕಾಯಿಲೆಗೆ (Mysterious disease) ಬಲಿಯಾಗಿದೆ. ಕಾಯಿಲೆ ಪೀಡಿತ ಗ್ರಾಮದಲ್ಲಿ ತನಿಖೆ ನಡೆಸಲು ಸರ್ಕಾರ ತಜ್ಞರ ತಂಡವನ್ನು ನೇಮಿಸಿದೆ.
ನಿಗೂಢ ಕಾಯಿಲೆ ಹೆಚ್ಚಾಗುತ್ತಿದ್ದಂತೆ ಪರೀಕ್ಷೆಯನ್ನು ತ್ವರಿತಗೊಳಿಸಲು ಹಾಗೂ ಕಾಯಿಲೆಯನ್ನು ಗುರುತಿಸಲು ಬಯೋಸೇಫ್ಟಿ ಲೆವೆಲ್ 3 (BSL-3) ಮೊಬೈಲ್ ಪ್ರಯೋಗಾಲಯವನ್ನು ರಜೌರಿಗೆ ಕಳುಹಿಸಲಾಗಿದ್ದು, ಹೆಚ್ಚಿನ ಮುಂಜಾಗೃತ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈವರೆಗೆ 8 ಮಕ್ಕಳು ಮೃತಪಟ್ಟಿದ್ದು, ಮೃತರನ್ನು ಕೊಟ್ರಂಕದ ತಹಸಿಲ್ನ ಬಧಾಲ್ ಗ್ರಾಮದ ಎರಡು ಕುಟುಂಬಕ್ಕೆ ಸೇರಿದವರು ಎಂದು ಪತ್ತೆ ಮಾಡಲಾಗಿದೆ.
ರಜೌರಿ ಜಿಲ್ಲೆಯ ಉಪ ಆಯುಕ್ತ ಅಭಿಷೇಕ್ ಶರ್ಮಾ ಅವರು ಸೋಮವಾರ ಬಧಾಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಬಗ್ಗೆ ಮಾತನಾಡಿ ಈಗಾಗಲೇ ತಜ್ಞರನ್ನು ಗ್ರಾಮಕ್ಕೆ ಕಳುಹಿಸಲಾಗಿದೆ. ಸದ್ಯ ಗ್ರಾಮದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
Expert teams from NIV, NCDC, and PGI have reached Badhaal village, Rajouri, to investigate the cause of recent deaths, with food poisoning being a possible factor. #Investigation #HealthSafety@PoonchDm @diprjk pic.twitter.com/zuSYOX0pK6
— DD NEWS JAMMU | डीडी न्यूज़ जम्मू (@ddnews_jammu) December 15, 2024
ಮೊಹಮ್ಮದ್ ರಫೀಕ್ ಅವರ ಪುತ್ರ ಹನ್ನೆರಡು ವರ್ಷದ ಅಶ್ಫಾಕ್ ಅಹ್ಮದ್ಗೆ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಆರು ದಿನಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮತೃಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಶ್ಫಾಕ್ ಅವರ ಕಿರಿಯ ಸಹೋದರರು-ಏಳು ವರ್ಷದ ಇಶ್ತಿಯಾಕ್ ಮತ್ತು ಐದು ವರ್ಷದ ನಾಜಿಯಾ-ಕಳೆದ ಗುರುವಾರ ನಿಧನರಾಗಿದ್ದರು. ಅಶ್ಫಾಕ್ ಸಾವಿನೊಂದಿಗೆ ಕೊಟ್ರಂಕಾ ತಹಸಿಲ್ನ ಬಾದಲ್ ಗ್ರಾಮದಲ್ಲಿ ಸಾವಿನ ಸಂಖ್ಯೆ 8 ಕ್ಕೆ ತಲುಪಿದೆ. ಮೃತರೆಲ್ಲರೂ ಒಂದೇ ಗ್ರಾಮದ ಎರಡು ಕುಟುಂಬಗಳಿಗೆ ಸೇರಿದವರು ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ : Terror Attack: ಜಮ್ಮು & ಕಾಶ್ಮೀರದಲ್ಲಿ ಎನ್ಕೌಂಟರ್; ಸೇನಾಧಿಕಾರಿ ಹುತಾತ್ಮ