ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಜನರ ಮನ್ನಣೆಗೆ ಪಾತ್ರವಾಗಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಾಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ.
ಸದ್ಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಹೊಸ ಅಧ್ಯಾಯ ಶುರುವಾಗಿದೆ. ತಾಂಡವ್ಗೆ ಡಿವೋರ್ಸ್ ಕೊಟ್ಟು ತಾನು ಅನುಭವಿಸಿದ ಕಷ್ಟವನ್ನು ರಿಟರ್ನ್ ಕೊಡಲು ಭಾಗ್ಯಾ ಮುಂದಾಗಿದ್ದಾಳೆ. ಹಿಂದಿನ ಸಂಚಿಕೆಯಲ್ಲಿ ಶ್ರೇಷ್ಠಾ ಜೊತೆ ತಾಂಡವ್ ಮದುವೆಯಾಗಲು ತಯಾರಾಗುತ್ತಿದ್ದರು. ಮನೆಯ ಒಳಗೆ ಇಬ್ಬರು ಹಸೆಮಣೆ ಏರಲು ಸಜ್ಜಾಗುತ್ತಾರೆ. ಆದರೆ, ಇನ್ನೇನು ತಾಳಿ ಕಟ್ಟ ಬೇಕು ಎಂಬಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಎಂಟ್ರಿ ಆಗುತ್ತದೆ.
ಮದುವೆ ಶಾಸ್ತ್ರ ನಡೆಯುತ್ತಿರುವ ಸಂದರ್ಭ ತಾಳಿ ಕಟ್ಟುವಾಗ ಅಲ್ಲಿಗೆ ಪೊಲೀಸರ ಜೊತೆ ಬಂದ ಭಾಗ್ಯ ನಿಲ್ಸಿ ಎಂದು ಕೂಗಾಡುತ್ತಾಳೆ. ಇದರಿಂದ ಕೋಪಗೊಂಡ ತಾಂಡವ್, ಡಿವೋರ್ಸ್ ಕೊಟ್ಟು ನನ್ನ ದಾರಿ ನನಗೆ ನಿನ್ನ ದಾರಿ ನಿನಗೆ ಅಂತ ಹೇಳಿದಮೇಲೂ ಇಲ್ಲಿ ಯಾಕೆ ಬಂದು ವಕ್ರುಸಿದ್ದೀಯಾ ಎಂದು ಕೇಳುತ್ತಾನೆ.
ಇದಕ್ಕೆ ನಗುತ್ತಾ ಉತ್ತರ ಕೊಟ್ಟ ಭಾಗ್ಯ, ಕೋರ್ಟ್ ನಮ್ಮಿಬ್ಬರನ್ನೂ ಸಪರೇಟ್ ಮಾಡುವವರೆಗೂ ನಾನು ನೀನು ಗಂಡ-ಹೆಂಡ್ತೀನೆ. ಒಬ್ಬ ಹೆಂಡ್ತಿ ಇರುವಾಗ್ಲೇ ಇನ್ನೊಬ್ಬಳನ್ನ ಮದುವೆ ಆಗೋದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿ ತಾಂಡವ್-ಶ್ರೇಷ್ಠಾಳ ಮದುವೆಗೆ ಬ್ರೇಕ್ ಹಾಕಿದ್ದಾಳೆ. 18 ವರ್ಷ ನಿಮ್ಮ ಜೊತೆ ಸಂಸಾರ ಮಾಡಿ ನೀವು ಕೊಟ್ಟ ತೊಂದ್ರೆ ಎಲ್ಲ ಸಹಿಸ್ಕೊಂಡು ನನಗೂ ಸಾಕಾಗಿದೆ. ಈಗ ಎಲ್ಲವನ್ನೂ ವಾಪಾಸ್ ಕೊಡುವ ಟೈಮ್ ಬಂದಿದೆ. ನೀವು ಶ್ರೇಷ್ಠಾಳನ್ನು ಮದುವೆ ಆಗೋ ಕನಸು ಯಾವತ್ತೂ ನಡಿಬಾರದು ಅಂತಾನೆ ಪೊಲೀಸ್ರನ್ನ ಕರ್ಕೊಂಡು ಬಂದಿರೋದು ಎಂದು ತಾಂಡವ್ ಮುಂದೆ ಭಾಗ್ಯಾ ಅಬ್ಬರಿಸಿದ್ದಾಳೆ.
ಜೊತೆಗೆ ಇನ್ನುಂದೆ ಭಾಗ್ಯಾಳ ಜೀವನದ ಹೊಸ ಅಧ್ಯಾಯ ಶುರುವಾಗುತ್ತೆ ಎಂದು ಹೇಳಿದ್ದಾಳೆ. ಅಲ್ಲದೆ ಆರಂಭದಲ್ಲಿ ಎರಡು ಪ್ರಮುಖ ರೂಲ್ಸ್ ಹಾಕಿದ್ದಾಳೆ ಭಾಗ್ಯ. ಮೊದಲ ಷರತ್ತು ಎಲ್ಲರೂ ಒಟ್ಟಿಗೆ ಇಲ್ಲೇ ನಮಗಂತ ಕಟ್ಟಿರೋ ಮನೆಯಲ್ಲೇ ಇರಬೇಕು. ಎರಡನೇದು ಶ್ರೇಷ್ಠಾಳನ್ನ ನಿಮ್ಮ ಕಯ್ಯಾರೆ ಈ ಮನೆಯಿಂದ ಹೊರಗಡೆ ಹಾಕಬೇಕು ಎಂದು ತಾಂಡವ್ಗೆ ಹೇಳಿದ್ದಾಳೆ. ಈ ಮೂಲಕ ಭಾಗ್ಯಾಲಕ್ಷ್ಮೀ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
BBK 11: ಬಿಗ್ ಬಾಸ್ನಿಂದ ಹೊರಬಂದು ಚೈತ್ರಾ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಶಿಶಿರ್