ಬ್ರಿಸ್ಬೇನ್: ಮಕ್ಕಳ ಫೋಟೊವನ್ನು ಅನುಮತಿ ಇಲ್ಲದೆ ಕ್ಲಿಕಿಸಿದ ಕಾರಣಕ್ಕೆ ಆಸ್ಟ್ರೇಲಿಯಾ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ(Virat Kohli) ತಾಳ್ಮೆ ಕಳೆದುಕೊಂಡು ಹರಿಹಾಯ್ದ ಘಟನೆ ಗುರುವಾರ ನಡೆದಿದೆ. ಬ್ರಿಸ್ಬೇನ್ ಪಂದ್ಯ ಮುಗಿಸಿ ಮೆಲ್ಬರ್ನ್ಗೆ ತೆರಳುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೊ ವೈರಲ್ ಆಗಿದೆ.
ಕೊಹ್ಲಿ ಮಕ್ಕಳ ಫೋಟೊ ತೆಗೆದ ವಿಚಾರದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಮಗಳು ವಮಿಕಾಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ತೀವ್ರ ಅಸಮಾಧಾನಗೊಂಡಿದ್ದರು. ಫೋಟೊವನ್ನು ವೈರಲ್ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ Jasprit Bumrah: ಕಪಿಲ್, ಇಶಾಂತ್ ದಾಖಲೆ ಮುರಿದ ಬುಮ್ರಾ
ಇದೀಗ ಆಸೀಸ್ನಲ್ಲಿಯೂ ಕೊಹ್ಲಿ ತಮ್ಮ ಮಕ್ಕಳ ಫೋಟೊ ತೆಗೆದವರ ವಿರುದ್ಧ ಹರಿಹಾಯ್ದಿದ್ದಾರೆ. “ನನ್ನ ಮಕ್ಕಳೊಂದಿಗೆ ನನಗೆ ಸ್ವಲ್ಪ ಗೌಪ್ಯತೆ ಬೇಕು, ನನ್ನನ್ನು ಕೇಳದೆ ಫೋಟೊ ತೆಗೆಯಲು ಯಾರು ನಿಮಗೆ ಅನುಮತಿ ನೀಡಿದ್ದು. ಇದು ಸರಿಯಲ್ಲ” ಎಂದು ಬಹಿರಂಗವಾಗಿಯೇ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.
ಕೊಹ್ಲಿ ಗರಂ ಆದ ಬಗ್ಗೆ ಆಸೀಸ್ ಮಾಧ್ಯಮವಾದ ಚಾನೆಲ್ 7, ವಿಶೇಷ ವರದಿ ಮಾಡಿದ್ದು, ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾಗಳನ್ನು ನೋಡಿದಾಗ ಕೊಹ್ಲಿ ‘ಸ್ವಲ್ಪ ಬಿಸಿಯಾದರು’. ಮಾಧ್ಯಮಗಳು ಕೊಹ್ಲಿಯ ಮಕ್ಕಳ ಫೋಟೊ ಚಿತ್ರೀಕರಿಸುತ್ತಿವೆ ಎಂದು ಕೊಹ್ಲಿ ಭಾವಿಸಿದ್ದರಿಂದ ಅವರು ಈ ರೀತಿಯ ವರ್ತನೆ ತೋರಿದ್ದಾರೆ. ಆದರೆ ನಮ್ಮ ಕ್ಯಾಮೆರಾಗಳು ಕೊಹ್ಲಿ ಮತ್ತು ಅವರ ಕುಟುಂಬ ಸದಸ್ಯರ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಭಾರತ ತೊರೆಯಲು ನಿರ್ಧರಿಸಿದ ಕೊಹ್ಲಿ
ನವದೆಹಲಿ: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಅವರು ಭಾರತ ತೊರೆದು ತಮ್ಮ ಕುಟುಂಬದೊಂದಿಗೆ ಲಂಡನ್ನಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಇದೀಗ ಈ ವದಂತಿ ಇನ್ನಷ್ಟು ವೇಗ ಪಡೆದುಕೊಂಡಿವೆ. ಕೊಹ್ಲಿಯ ಬಾಲ್ಯದ ಕೋಚ್(Virat Kohli Childhood Coach) ರಾಜ್ಕುಮಾರ್ ಶರ್ಮಾ ಅವರು ಸಂದರ್ಶನವೊಂದಲ್ಲಿ ಕೊಹ್ಲಿ ಭಾರತ ತೊರೆಯುವು ಖಚಿತ ಎಂದು ಹೇಳಿದ್ದಾರೆ.
ದೈನಿಕ್ ಜಾಗರಣ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕೋಚ್ ರಾಜ್ಕುಮಾರ್ ಶರ್ಮಾ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್ಗೆ ತೆರಳಲು ಯೋಚಿಸುತ್ತಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ಆಗಮಿಸಿದ ಬಳಿಕ ಅವರು ಕುಟುಂಬ ಸಮೇತರಾಗಿ ಲಂಡನ್ಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ. ರಾಜ್ಕುಮಾರ್ ಅವರ ಈ ಹೇಳಿಕೆ ಕೊಹ್ಲಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.