Thursday, 19th December 2024

Viral Video: ಖ್ಯಾತ ಸುದ್ದಿ ನಿರೂಪಕಿಯ ಖಾಸಗಿ ವಿಡಿಯೊ ಲೀಕ್‌; ಅಸಲಿಯತ್ತೇನು?

Viral Video

ಇಸ್ಲಾಮಾಬಾದ್‌: ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿ ಸೆಲೆಬ್ರಿಟಿಗಳ ಖಾಸಗಿ ವಿಡಿಯೊ ಲೀಕ್‌ ಆಗುತ್ತಿದೆ. ಕನಿಷ್ಠ 5-6 ಸೆಲೆಬ್ರಿಟಿಗಳು ವಿಡಿಯೊ ಈಗಾಗಲೇ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಅನೇಕ ಟಿಕ್‌ಟಾಕ್‌ ಸ್ಟಾರ್‌ಗಳ ಬಳಿಕ ಇದೀಗ ಪಾಕಿಸ್ತಾನದ ಖ್ಯಾತ ಸುದ್ದಿ ನಿರೂಪಕಿ ಮೋನಾ ಆಲಂ (Mona Alam) ಅವರದ್ದೆನ್ನಲಾದ ವಿಡಿಯೊ ಹೊರ ಬಿದ್ದಿದೆ. ಸದ್ಯ ಈ ವಿಚಾರ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ (Viral Video).

ಸ್ಪಷ್ಟನೆ ನೀಡಿದ ಮೋನಾ ಆಲಂ

ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಮೋನಾ ಆಲಂ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೊದಲ್ಲಿರುವುದು ತಾವಲ್ಲ, ಇದೊಂದು ಎಡಿಟೆಡ್‌ ವಿಡಿಯೊ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೊದ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡು ಅವರು, ʼʼಮಹಿಳೆಯೊಬ್ಬರ ಈ ಖಾಸಗಿ ವಿಡಿಯೊ ವೈರಲ್‌ ಆಗುತ್ತಿದೆ. ಅನೇಕರು ಇದರಲ್ಲಿವುದು ನಾನು ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆʼʼ ಎಂದು ಕಿಡಿ ಕಾರಿದ್ದಾರೆ. ಜತೆಗೆ ವಿಡಿಯೊದಲ್ಲಿರುವ ಮಹಿಳೆಯ ನೈಜ ಫೋಟೊವನ್ನೂ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಮಹಿಳೆ ಬೆಡ್‌ನಲ್ಲಿರುವ ಖಾಸಗಿ ಕ್ಷಣ ಕಂಡು ಬಂದಿದೆ.

ಪೊಲೀಸರಿಗೆ ದೂರು ನೀಡಿರುವ ಕಾಪಿಯನ್ನೂ ಅವರನ್ನು ಪೋಸ್ಟ್‌ ಮಾಡಿದ್ದಾರೆ. ಇಂತಹವರು ನನ್ನ ವ್ಯಕ್ತಿತ್ವ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಅಪರಾಧಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಜತೆಗೆ ಮಹಿಳೆಯರ ಸುರಕ್ಷತೆ ಬಗ್ಗೆಯೂ ಕಳವಲ ಮೂಡಿಸಿದೆ.

ಇದು ಮೊದಲಲ್ಲ

ಕೆಲವು ತಿಂಗಳಿಂದ ಪಾಕಿಸ್ತಾನಿ ಸೆಲೆಬ್ರಿಟಿಗಳದ್ದು ಎನ್ನಲಾದ ನಕಲಿ ವಿಡಿಯೊ ಒಂದೊಂದಾಗಿ ಹೊರಬರುತ್ತಿದೆ. ಕಳೆದ ಕೆಲ ವಾರಗಳ ಹಿಂದೆಯಷ್ಟೇ ಪಾಕಿಸ್ತಾನದ ಮರಿಯಂ ಫೈಸಲ್‌, ಕನ್ವಲ್‌ ಅಫ್ತಾಬ್‌, ಮಿನಾಹಿಲ್‌ ಮಲಿಕ್‌, ಮಥಿರಾ ಮೊಹಮ್ಮದ್‌ ಮತ್ತು ಇಮ್ಶಾ ರೆಹಮಾನ್‌ ವಿಡಿಯೊ ಸೋರಿಕೆಯಾಗಿದ್ದ ಕೋಲಾಹಲಕ್ಕೆ ಕಾರಣವಾಗಿದ್ದವು.

ವಿಡಿಯೊಗಳ ಸೋರಿಕೆ ಪ್ರಕರಣವು ಮಿನಾಹಿಲ್ ಮಲಿಕ್‌ನಿಂದ ಪ್ರಾರಂಭವಾಯಿತು. ಅವರ ಎಕ್ಸ್-ರೇಟೆಡ್ ವಿಡಿಯೊಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಲಾಗಿತ್ತು. ನಂತರ ಪಾಕಿಸ್ತಾನದ ಪ್ರಭಾವಿ ಇಮ್ಶಾ ರೆಹಮಾನ್ ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಮಲಿಕ್ ಮತ್ತು ರೆಹಮಾನ್ ಜತೆಗೆ, ಪಾಕಿಸ್ತಾನಿ ಟಿವಿ ನಿರೂಪಕಿ ಮತ್ತು ಪ್ರಭಾವಿ ಮಥಿರಾ ಖಾನ್ ಅವರ ಖಾಸಗಿ ವಿಡಿಯೊ ಕೂಡ ಸೋರಿಕೆಯಾಗಿತ್ತು. ಇದೀಗ ಮೋನಾ ಆಲಂ ಅವರ ಸರದಿ. ಶೀಘ್ರದಲ್ಲೇ ಈ ಪ್ರವೃತ್ತಿಗೆ ಬ್ರೇಕ್‌ ಹಾಕಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬಂದಿದೆ.

ಈ ಸುದ್ದಿಯನ್ನೂ ಓದಿ: MMS Leak: ಪಾಕಿಸ್ತಾನಲ್ಲಿ ಹೆಚ್ಚಾಗ್ತಿದೆ MMS ಸ್ಕ್ಯಾಮ್‌! ಮತ್ತೋರ್ವ ಟಿಕ್‌ಟಾಕ್‌ ಸ್ಟಾರ್‌ ಖಾಸಗಿ ವಿಡಿಯೋ ಲೀಕ್‌