ಹೈದರಾಬಾದ್: ತೆಲುಗಿನ ಖ್ಯಾತ ನಟ ಹಾಗೂ ಯೂಟ್ಯೂಬರ್ (Youtuber) ಪ್ರಸಾದ್ ಬೆಹರಾ (Prasad Behara) ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ”ಪ್ರಸಾದ್ ಬೆಹರಾ ಅವರನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಡಿಸೆಂಬರ್ 18ರಂದು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಸಾದ್ ವಿರುದ್ಧ ಯುವ ನಟಿ ದೂರು ನೀಡಿದ್ದು, ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಆಗಿದ್ದೇನು?
ಯುವ ನಟಿಯೊಬ್ಬರು ನೀಡಿದ ದೂರಿನಲ್ಲಿ ತನ್ನನ್ನು ವೆಬ್ ಸರಣಿಯಲ್ಲಿ ನಟಿಸಲು ಅವಕಾಶ ನೀಡುವುದಾಗಿ ಕರೆಸಿಕೊಂಡಿದ್ದರು. ʼಪೆಲ್ಲಿವರ ಮಂಡಿʼಯ ಚಿತ್ರಿಕರಣ ಸಂದರ್ಭದಲ್ಲಿ ಸಾದ್ ಬೆಹರಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಹಾಗಾಗಿ ಅವರ ವೆಬ್ ಸರಣಿಯ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಇದಾಗಿ ಒಂದು ವರ್ಷದ ಬಳಿಕ ಮೆಕ್ಯಾನಿಕ್ ಎಂಬ ಶೋದಲ್ಲಿ ಇಬ್ಬರು ಕೆಲಸ ಮಾಡಿದ್ದು ಆಗ ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ದೈಹಿಕವಾಗಿ ಹತ್ತಿರವಾಗಲು ಯತ್ನಿಸಿದ್ದಾರೆ ಮತ್ತು ಅನೇಕ ಬಾರಿ ಅನುಚಿತವಾಗಿ ವರ್ತಿಸಿದ್ದಾರೆ. ಅಸಭ್ಯವಾಗಿ ವರ್ತಿಸುವುದರ ಜತೆಗೆ ತನ್ನ ಬಗ್ಗೆ ತುಂಬಾ ಅಶ್ಲೀಲವಾಗಿ ಕಾಮೆಂಟ್ ಮಾಡಿ ಮುಜುಗರ ಕ್ಕೊಳಗಾಗುವಂತೆ ಮಾಡಿದ್ದಾರೆ ಎಂದು ದೂರುನಲ್ಲಿ ತಿಳಿಸಿದ್ದಾರೆ.
ಯೂಟ್ಯೂಬ್ ಸ್ಟಾರ್ ಹೇಳಿದ್ದೇನು?
ʼʼಚಿತ್ರಿಕರಣದ ಸಂರ್ಭದಲ್ಲಿ ನನ್ನ ದೇಹದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನನ್ನ ಮುಖ ಹಾಗೂ ನೋಟ ಚೆನ್ನಾಗಿಲ್ಲವೆಂದು ಲೆಸರ್ ಚಿಕಿತ್ಸೆ ಮಾಡಿಸು ಎಂದು ವ್ಯಂಗ್ಯವಾಡಿದ್ದಾರೆ. ಸ್ಕ್ರಿಪ್ಟ್ ನಲ್ಲಿ ಇಲ್ಲದ ಡೈಲಾಗ್ ಅನ್ನು ತನ್ನ ವಿರುದ್ಧ ಅಸಭ್ಯವಾಗಿ ಹೇಳಿದ್ದಾರೆ. ಇದರಿಂದ ಸಾಕಷ್ಟು ಮನನೊಂದಿದ್ದೇನೆʼʼ ಎಂದು ನಟಿ ತಿಳಿಸಿದ್ದಾರೆ. ಡಿಸೆಂಬರ್ 11ರಂದು ಮನೆಗೆ ವಾಪಾಸ್ಸಾಗುವ ವೇಳೆ ತನ್ನ ಮೇಲೆ ಪ್ರಸಾದ್ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
14 ದಿನ ಬಂಧನ
ಸಂತ್ರಸ್ತೆ ನೀಡಿರುವ ದೂರಿನ ಮೇಲೆ ಪ್ರಸಾದ್ ಬೆಹರಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿ ಬಳಿಕ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಪ್ರಸಾದ್ ಬೆಹರಾ ಅವರನ್ನು ಇನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ನಟನ ಬಂಧನದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟ್ , ಕಾಮೆಂಟ್ ಸಹ ಹರಿದಾಡುತ್ತಿದೆ. ಹಾಗಿದ್ದರೂ ಆತನ ಕುಟುಂಬ ಸದಸ್ಯರು, ಮೆಕ್ಯಾನಿಕ್ ಶೋ ತಂಡದವರು ಇದುವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಈ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಆಗುವ ಸಾಧ್ಯತೆಯೂ ಇದೆ.
ಈ ಸುದ್ದಿಯನ್ನು ಓದಿ: keerthy suresh: ಕೀರ್ತಿ ಸುರೇಶ್ ಮದುವೆಯಲ್ಲಿ ದಳಪತಿ ವಿಜಯ್! ಪೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡ ನಟಿ